

ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು ಎಂಬ ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ಇಂದಿನಿಂದಲೇ ಬೆಂಗಳೂರಿನಲ್ಲಿ ಮಾರ್ಷಲ್ ಗಳು ತಮ್ಮ ಕೆಲಸ ಆರಂಭಿಸಿದ್ದಾರೆ.
https://m.facebook.com/story.php?story_fbid=250135146714828&id=107383890989955

ಸಿದ್ದಾಪುರ : ತಾಲ್ಲೂಕು BSNDP ಘಟಕದ ಸಭೆಯು ಇಂದು ಲಯನ್ಸ್ ಬಾಲಭವನದ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ BSNDP ಸಂಘಟನೆಯ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ,ಮಾತನಾಡಿ ನಮ್ಮಲ್ಲಿ ಜಾಗೃತಿ ಮೂಡಬೇಕು, ಮಧ್ಯಮ ವರ್ಗದಿಂದಲೇ ಸಂಘ ಟನೆಗಳಿಗೆ ಬರಬೇಕು, ಸರಳತೆಗೆ ಒತ್ತು ಕೊಟ್ಟು ಆದಷ್ಟು ಬೇಗ ಜಾಗ್ರತರಾಗಬೇಕು, ಆ ಮೂಲಕ ನಮ್ಮ ಸಮಾಜಕ್ಕೆ ಏನಾದರೂ ಕೊಡುಗೆಕೊಡಬೇಕು, ಮುಂದಿನ ಪೀಳಿಗೆಗಾಗಿ ದುಡಿಯಬೇಕು, ಪ್ರತಿಹಳ್ಳಿಹಳ್ಳಿಯಲ್ಲಿ ಸಂಘಟನೆಯಾಗಬೇಕು, ಸಮಾಜದ ಮಹಿಳೆಯರ ಆರ್ಥಿಕ ಅಭಿವೃದ್ಧಿ ಗೆ ಯೋಜನೆ ರೂಪಿಸುತ್ತಿದ್ದೇವೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.
ಕನ್ನೇಶ್ ನಾಯ್ಕ ಕೋಲಸಶಿರ್ಸಿ ಮಾತನಾಡಿ ಸಂಘಟನೆ ಬೇಕು. ಸಂಘಟನೆಗಳಿಂದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವ್ಯವಸ್ಥೆ ಸುಧಾರಿಸಲು ಅನುಕೂಲವಾಗುತ್ತದೆ ಎಂದರು.
ಎನ್ ಡಿ ನಾಯ್ಕ ಐನೂರು, ವಿ ಎನ್ ನಾಯ್ಕ ಬೇಡ್ಕಣಿ, ಬಿ.ಎಸ್.ಎನ್.ಡಿ.ಪಿ. ರಾಜ್ಯ
ಕಾರ್ಯದರ್ಶಿ ಕಾಂತರಾಜ್ ಆರ್ಯ, ರಾಜ್ಯ ಮುಖಂಡರಾದ ಲೋಹಿತ್ ನಾಯ್ಕ್ ಕಾನ್ಸೂರ್, ಶಿವರಾಜ್ ನಾಯ್ಕ ಕೊಂಡ್ಲಿ, ಜಿಲ್ಲಾಧ್ಯಕ್ಷ ಜಗದೀಶ್ ನಾಯ್ಕ ಅಜ್ಜಿಬಳಮಾತನಾಡಿದರು. ತಾಲೂಕು ಅಧ್ಯಕ್ಷ ವಿನಾಯಕ ದೋಡಗದ್ದೆ, ಎ ಜಿ ನಾಯ್ಕ ಕಲಕೇರಿ ಸಭೆಯಲ್ಲಿ ಉಪಸ್ಥಿತರಿದ್ದರು. visit-samaajamukhi.net page
ಬೆಂಗಳೂರು: ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ಗಳನ್ನು ನಿಯೋಜಿಸಲಾಗುವುದು ಎಂಬ ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ಇಂದಿನಿಂದಲೇ ಬೆಂಗಳೂರಿನಲ್ಲಿ ಮಾರ್ಷಲ್ ಗಳು ತಮ್ಮ ಕೆಲಸ ಆರಂಭಿಸಿದ್ದಾರೆ.
ಹೌದು… ನಗರದ ಬಸವನಗುಡಿಯ ಕಲ್ಯಾಣ ಮಂಟಪಕ್ಕೆ ದಿಢೀರ್ ಆಗಮಿಸಿದ ಮಾರ್ಷಲ್ ಗಳು ಕೋವಿಡ್ ನಿಯಮಾವಳಿ ಪಾಲಿಸುವಂತೆ ಸಭಿಕರಲ್ಲಿ ಮನವಿ ಮಾಡಿದರು. ಒಂದು ವೇಳೆ ನಿಯಮ ಪಾಲಿಸದಿದ್ದರೆ ಸ್ಥಳದಲ್ಲೇ ದಂಡ ಹಾಕುವುದಾಗಿ ಹೇಳಿದರು.
ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಆರೋಗ್ಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರು, ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ನಿಯೋಜಿಸಲಾಗುವುದು. 500 ಕ್ಕಿಂತ ಹೆಚ್ಚು ಜನರು ಕಾಕ್ಯಕ್ರಮದಲ್ಲಿರಬಾರದು, ಎಲ್ಲರೂ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸ ಬೇಕು ಮತ್ತು ಸಾಮಾಜಿಕ ಅಂತರ ಪಾಲಿಸಲು ಈ ಕ್ರಮ ವಹಿಸಲಾಗುವುದು. ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ ಎಂದು ಹೇಳಿದ್ದರು.
ಅಲ್ಲದೆ ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟ ನಡೆಯುತ್ತಿದೆ. ಇದನ್ನು ಪಾಲಿಸದೇ ಕೋವಿಡ್ ಸೋಂಕು ಹೆಚ್ಚಾದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಆಗಿದ್ದು, ಆ ಪರಿಸ್ಥಿತಿ ರಾಜ್ಯಕ್ಕೆ ಬರಬೇಕೆ ಎಂದು ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು. (kpc)


