ದಿನಾಂಕ: 24-02-2021
ರಿಗೆ,
ಸನ್ಮಾನ್ಯ ಶ್ರೀ ನಾರಾಯಣ ಗೌಡ
ಯುವಜನ ಹಾಗೂ ಕ್ರೀಡಾ ಇಲಾಖೆ ರಾಜ್ಯ ಸಚಿವರು
ಕರ್ನಾಟಕ ಸರ್ಕಾರವರ ಬಳಿಗೆ
ವಿಷಯ : ತಾಲೂಕ ಮಟ್ಟದ ಯುವಜನಮೇಳ ನಡೆಸುವ ಕುರಿತು.
ಮಾನ್ಯರೇ,
ತಮ್ಮ ಘನ ಸರ್ಕಾರದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯನ್ನು ಚುರುಕುಗೊಳಿಸಿ ಬಲತುಂಬುವುದಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಈಗಾಗಲೇ ಯುವಜನ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಕಾರ್ಯೋನ್ಮುಖವಾಗಿರುವುದು ನಮಗೆಲ್ಲರಿಗೂ ಹರ್ಷವನ್ನುಂಟು ಮಾಡಿದೆ. ಆದರೆ ಆರಂಭದ ದಿನಗಳಿಂದಲೂ ಗ್ರಾಮೀಣ ಭಾಗದ ಜಾನಪದ ಕಲೆ ಸಂಸ್ಕೃತಿಯ ಉಳಿವಿಗಾಗಿ ನಡೆಸಿಕೊಂಡು ಬರುತ್ತಿರುವ ತಾಲೂಕಾ ಮಟ್ಟದ ಯುವಜನಮೇಳಗಳನ್ನು ರದ್ದುಗೊಳಿಸಿರುವುದು ವಿಷಾದಕರ. ನೇರವಾಗಿ ಜಿಲ್ಲಾ ಮಟ್ಟದ ಯುವಜನಮೇಳಗಳನ್ನು ಆಯೋಜನೆ ಮಾಡುವುದು ತೀರಾ ಅವೈಜ್ಞಾನಿಕವಾಗಿದೆ. ತಾಲೂಕಾ ಮಟ್ಟದಲ್ಲಿ ಆಯ್ಕೆಯಾಗದೆ ನೇರವಾಗಿ ಜಿಲ್ಲಾ ಮಟ್ಟದಲ್ಲಿ ಸ್ಫರ್ಧೆ ನಡೆಸುವುದು ನೈಜ ಪ್ರತಿಭೆಗಳಿಗೆ ಅನ್ಯಾಯವಾದಂತಾಗಿದೆ. ಹಲವರು ನೇರವಾಗಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಬೇಕಾಗಿರುವುದರಿಂದ ಸ್ಪರ್ದೆಯಲ್ಲಿ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಈ ಮೊದಲಿನಂತೆ ತಾಲೂಕಾ ಮಟ್ಟದಲ್ಲಿ ಯುವಜನ ಮೇಳಗಳನ್ನು ನಡೆಸುವುದಕ್ಕೆ ಆದೇಶಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ಸೊರಗುತ್ತಿರುವ ಯುವಜನ ಮೇಳಗಳನ್ನು ಯಶಸ್ವಿಗೊಳಿಸಲು ಬೇಕಾಗಿರುವ ಕಾರ್ಯಯೋಜನೆಯನ್ನು ರೂಪಿಸುವದರೋಂದಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ತಾಲೂಕಾ ಮಟ್ಟದ ಸ್ಫರ್ಧೆ ಯಲ್ಲಿ ಆಯ್ಕೆಯಾದ ಪ್ರತಿಭೆಗಳಿಗೆ ನಗದು ಬಹುಮಾನ ನೀಡುವಂತಾಗಬೇಕು. ಯುವಜನ ಮೇಳದಲ್ಲಿ ಆಯ್ಕೆಯಾದ ಕಲಾ ತಂಡಗಳಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅವಕಾಶ ಕಲ್ಪಿಸಬೇಕು. ಸರ್ಕಾರಿ ಕಾರ್ಯಕ್ರಮಗಳಾದ ಕದಂಬ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ, ದಸರಾದಂತಹ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ಕಲ್ಪಿಸಬೇಕು. ಸಕ್ರೀಯವಾಗಿ ಪಾಲ್ಗೊಳ್ಳುವ ತಂಡಗಳಿಗೆ ವೇಷ ಭೂಷಣ ಹಾಗೂ ಪರಿಕರಗಳನ್ನು ಒದಗಿಸುವಂತಾಗಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡು ಯುವಜನಮೇಳನ್ನು ಪುನಶ್ಚೇತನಗೊಳಸಲು ಇಲಾಖೆಗೆ ಆದೇಶಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.
ಧನ್ಯವಾದಗಳೊಂದಿಗೆ
ತಮ್ಮವಿಶ್ವಾಸಿ ಗಳು
ಅಣ್ಣಪ್ಪ ನಾರಾಯಣ ನಾಯ್ಕ
ಅಧ್ಯಕ್ಷರು ತಾಲೂಕ ಯುವ ಒಕ್ಕೂಟ ಸಿದ್ದಾಪುರ ( ಉ ಕ )
ಪ್ರತಿಗಳು :
1) ತಹಶೀಲ್ದಾರರು, ಸಿದ್ದಾಪುರ ( ಉ ಕ )
2) ಕಾರ್ಯನಿರ್ವಾಹಣ ಅಧಿಕಾರಿಗಳು ತಾ.ಪಂ.ಸಿದ್ದಾಪುರ ( ಉ ಕ )
ಹಾಜರಿದ್ದವರು ಯುವ ಒಕ್ಕೂಟದ ಅಧ್ಯಕ್ಷರಾದ ಅಣ್ಣಪ್ಪ ನಾರಾಯಣ ನಾಯ್ಕ ಶಿರಳಗಿ, ಬಿ ಡಿ ನಾಯ್ಕ, ಎಮ್ ಜಿ ನಾಯ್ಕ, ಶಂಕರಮೂರ್ತಿ ನಾಯ್ಕ, ಗೋಪಾಲ ಕಾನಳ್ಳಿ. ಕೃಷ್ಣಮೂರ್ತಿ ಐಸೂರ, ನೀಲಮ್ಮ ಕೊಂಡ್ಲಿ, ನೀಲಕಂಠ ಬೇಡ್ಕಣಿ, ಸಿ.ಟಿ. ನಾಯ್ಕ ಹಾಜರಿದ್ದರು
ಸಬ್ಸಿಡಿ, ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ ಮತ್ತೆ 25 ರೂ. ಏರಿಕೆ, ಕಂಗಾಲಾದ ಜನ
ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ದರ ಏರಿಕೆ ಆಘಾತ ನೀಡಿದ್ದು, ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಅಡುಗೆ….
ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ದರ ಏರಿಕೆ ಆಘಾತ ನೀಡಿದ್ದು, ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಗುರುವಾರ ಪ್ರತಿ ಸಿಲಿಂಡರ್‌ಗೆ 25 ರೂ.ಗೆ ಏರಿಸಲಾಗಿದೆ.
ತೈಲ ಕಂಪನಿಗಳು ಈ ತಿಂಗಳಲ್ಲೇ ಮೂರು ಬಾರಿ ಎಲ್ ಪಿಜಿ ದರ ಏರಿಕೆ ಮಾಡಿದ್ದು, ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ನ ಬೆಲೆ 794 ರೂಪಾಯಿಗೆ ಮುಟ್ಟಿದೆ.
ಫೆ.4ರಂದು 25 ರೂ. ಫೆ. 15ರಂದು 50 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 25 ರೂಪಾಯಿ ಹೆಚ್ಚಿಸಲಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಸಿಲಿಂಡರ್ ಬೆಲೆ 794ಕ್ಕೆ ಏರಿಕೆಯಾಗಿದೆ. ಕೊಲ್ಕತ್ತಾದಲ್ಲಿ 820 ರೂ, ಮುಂಬೈನಲ್ಲಿ 794 ರೂ, ಚೆನ್ನೈನಲ್ಲಿ 810 ರೂ, ಹೈದರಾಬಾದ್ನಲ್ಲಿ 846.50 ರೂ ಆಗಿದೆ.
ಕಳೆದ ಡಿಸೆಂಬರ್ ನಿಂದ ಇಲ್ಲಿಯವರಿಗೆ ಎಲ್ ಪಿಜಿ ದರ 150 ರೂಪಾಯಿ ಹೆಚ್ಚಾಗಿದ್ದು, ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದ ಈ ಸಿಲಿಂಡರ್ ಬೆಲೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. (kpc)