ಸಿದ್ದಾಪುರ,
ಗ್ರಾಮೀಣ ಕಲೆಯಾಗಿರುವ ಕಬಡ್ಡಿ ಆಟ ಇಂದು ಮರೆಯಾಗುತ್ತಿದೆ. ಅದರಂತೆ ಹಲವು ಸಸ್ಯ ಪ್ರಬೇಧ ಗಳಿಂದ ಕೂಡಿರುವ ಮಾವಿನಗುಂಡಿ ಸಮೀಪದ ಕತ್ತಲೇಕಾನು ಇಂದು ನಶಿಸುತ್ತಿದೆ. ಇವರೆಡನ್ನು ಉಳಿಸಿ ಬೆಳೆಸುವುದು ನಮ್ಮ ಕೈಲಿದೆ. ಯುವ ಸಮೂಹ ಉತ್ತಮ ಕಾರ್ಯಚಟುವಟಿಕೆ ನಡೆಸುವ ಮೂಲಕ ಗ್ರಾಮೀಣ ಸೊಗಡಿನ ಕಲೆಯನ್ನು ಬೆಂಬಲಿಸುತ್ತಿರುವುದು ಶ್ಲಾಘನೀಯ ಎಂದು ಆರ್‍ಎಫ್‍ಓ ಶಿವಾನಂದ ನಿಂಗಾಣಿ ಹೇಳಿದರು.
ತಾಲೂಕಿನ ಹಲಸಗಾರ ಬಸ್ ನಿಲ್ದಾಣದ ಸಮೀಪ ಭೂತೇಶ್ವರ ಗೆಳೆಯರ ಬಳಗ ಹಲಸಗಾರ ಆಶ್ರಯದಲ್ಲಿ ಗುರುವಾರ ನಡೆದ ಎರಡನೇ ವರ್ಷದ ಮ್ಯಾಟ್ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕ ಮಹಾಬಲೇಶ್ವರ ಕೆ.ನಾಯ್ಕ ಕಬ್ಬಿನಸರ ಅಧ್ಯಕ್ಷತೆವಹಿಸಿದ್ದರು. ತಾಪಂ ಅಧ್ಯಕ್ಷ ಸುಧೀರ್ ಬಿ.ಗೌಡರ್, ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೀಮಾ ಎಂ.ಹೆಗಡೆ ಕಲ್ಮನೆ, ವರದರಾಜ ಸ್ವಾಮೀಜಿ ತರಳಿ, ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ, ಸದಸ್ಯ ಅನಂತ ಹೆಗಡೆ ಹೊಸಗದ್ದೆ, ಸಿದ್ದಾರ್ಥ ಗೌಡರ್ ಮುಠ್ಠಳ್ಳಿ,ಜಿಪಂ ಮಾಜಿ ಸದಸ್ಯ ಎಸ್.ಆರ್.ಹೆಗಡೆ ಕುಂಬಾರಕುಳಿ, ಸತೀಶ ನಾಯ್ಕ ತರಳಿ(ಹಲಸಗಾರ), ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಶ್ರೀಧರ ಎಂ.ಭಟ್ಟ ಮಾಣಿಕ್ನಮನೆ, ಅಶೋಕ ಎಂ.ನಾಯ್ಕ ಹಳಿಯಾಳ, ರಾಮಚಂದ್ರ ನಾಯ್ಕ ಕಬ್ಬಿನಸರ, ಗ್ರಾಪಂ ಉಪಾಧ್ಯಕ್ಷ ಶಾಂತಕುಮಾರ ಪಾಟೀಲ್, ಸೀತಾರಾಮ ಶೆಟ್ಟಿ, ಹನುಮಕ್ಕ ಆರ್.ಭೋವಿ, ಸರೋಜ ಆರ್.ನಾಯ್ಕ, ಗೋಪಾಲಕೃಷ್ಣ ದೇವಾಡಿಗ,ಕಮಲಾಕರ ನಾಯ್ಕ ಹುಬ್ಬಗೈ,ಲಕ್ಷ್ಮಣ ಆರ್.ನಾಯ್ಕ ಇತರರಿದ್ದರು.
ಸುಮಂತ ನಾಯ್ಕ ಹಲಸಗಾರ.ಮಹೇಶ ಕಾರ್ಯಕ್ರಮ ನಿರ್ವಹಿಸಿದರು.
ಪಂದ್ಯಾವಳಿಯಲ್ಲಿ ಹೊಸೂರ ತಂಡ ಪ್ರಥಮ, ಗಾಣಿಕೊಪ್ಪ ತಂಡ ದ್ವಿತೀಯ, ಐಗೋಡ. ತೃತೀಯ ಹಾಗೂ ಹೊಸಳ್ಳಿ ತಂಡ ನಾಲ್ಕನೆ ಸ್ಥಾನ ಪಡೆದುಕೊಂಡಿದೆ.ಪಂದ್ಯಾವಳಿಯಲ್ಲಿ 37ತಂಡಗಳು ಭಾಗವಹಿಸಿದ್ದವು.
“ಸೇವಾ ನಿವೃತ್ತಿ”
ಪ್ರಮಿಳಾ ನಾರಾಯಣ ಹೆಗಡೆ ಇವರು ಕ್ಯಾದಗಿಯ ಬೊಪ್ಪನಕೇರಿಯಲ್ಲಿ 27-02-1961 ರಲ್ಲಿ ನಾರಾಯಣ, ಯಂಕಿ ದಂಪತಿಗಳ ಮಗಳಾಗಿ ಜನಿಸಿದರು.26.07.1885 ರಂದು ಕಿರಿಯ ಪ್ರಾಥಮಿಕ ಶಾಲೆ ಮಾಸ್ತಿ ಹಕ್ಲು ಇಲ್ಲಿ ಸರ್ಕಾರಿ ಸೇವೆ.1992 ರವರೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ.
ನಂತರದಲ್ಲಿ ಗಟ್ಟಿಕೈ, ಶಿರೂರು ಹಾಗೂ ಕೊನೆಯ ಸೇವೆ ಹಿರಿಯ ಪ್ರಾಥಮಿಕ ಶಾಲೆ ಕ್ಯಾದಗಿಯಲ್ಲಿ.
ಒಟ್ಟು 35 ವರ್ಷ, 07 ತಿಂಗಳ ಸುದೀರ್ಘ ಸೇವೆ. ಶ್ರೀಧರ ಭಟ್ ಪತಿ, ಮಕ್ಕಳಾದ ಪ್ರಶಾಂತ, ನಿಶಾಂತ ಇವರೊಂದಿಗೆ ಜೀವನ.ಸೇವಾ ಅವಧಿಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಕ್ಷರ ಹೇಳಿ ಸನ್ನಡತೆಯ ದಾರಿ ತೋರಿ ಎಲ್ಲರ ಪ್ರೀತಿಯ ಅಕ್ಕೋರಾದ ನಿಮ್ಮ ವಿಶ್ರಾಂತಿಯ ಜೀವನ ಸುಖಕರವಾಗಿರಲಿ ಎಂಬ ಹಾರೈಕೆ. ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ ಹಾಗೂ ಪದಾಧಿಕಾರಿಗಳಿಂದ ಸೇವಾ ನಿವೃತ್ತಿ ದಿನವೇ ಶಾಲೆಯಲ್ಲಿ ಗೌರವ ಸಮರ್ಪಣೆ.ಇಂತಹ ಉತ್ತಮ ಯೋಜನೆ ಇಂದು ನಿನ್ನೆಯದಲ್ಲ. ಅಂದು ಎಂ.ಡಿ.ನಾಯ್ಕ ಹಾಗೂ ಕೆ.ಜಿ.ನಾಯ್ಕ ಎಂಬ ಕ್ರಿಯಾಶೀಲ ಶಿಕ್ಷಕರ ಕನಸಿನ ಯೋಜನೆಗೆ ಇಂದು ಸೇವಾನಿವೃತ್ತಿಯ ದಿನವೇ ಸನ್ಮಾನದ ಫಲ. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಡಿ.ಆಯ್.ನಾಯ್ಕ,ಅಧ್ಯಕ್ಷ ಸತೀಶ್.ಹೆಗಡೆ,ಉಪಾಧ್ಯಕ್ಷ ನಾಗರಾಜ.ಮಡಿವಾಳ,ಪ್ರಧಾನ ಕಾರ್ಯದರ್ಶಿ ಗುರುರಾಜ.ನಾಯ್ಕ, ಸದಸ್ಯರಾದ ಜಿ.ಜಿ.ಹೆಗಡೆ, ಸಿ.ಆರ್.ಪಿ.ಪರಶುರಾಮ ನಾಯ್ಕ,ಎಸ್.ಡಿ.ಎಂ.ಸಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.