ಗೊತ್ತಿಲ್ಲ ಏಕೆ ಅಷ್ಟು ಪ್ರೀತಿ ನಿಮ್ಮ ಮೇಲೆ
ಅಜ್ಜ ಅಪ್ಪ ಗುರು ಗೆಳೆಯ ಬಂಧು ಎಲ್ಲವೂಆಗಿ ಎದೆ ತುಂಬಿರುವಿರಿ ನವಿರಾಗಿನ್ಯಾಯವನು ನೆತ್ತರಿನಲಿ ತುಂಬಿನೆಲದೆದೆಯ ಸರದಾರ ನಮ್ಮ ನಾಯಕ
ಇಂದು ಎಲ್ಲಾ ಬೆಳಕಾಗಿದೆ ಬಿಡಿನೆನಪಿಗೂ ಹಂಗು ಇದ್ದಂತಿಲ್ಲಹೊಸ ರಕ್ತಕೆ ದಾರಿ ನೂರಿವೆಆದರೆ ಆ ದಿನ….ನೇಗಿಲ ಸಾಲು ಕೊರೆದಿತ್ತು
ಎದೆಬೆನ್ನ ತುಂಬಾ ಬಾಸುಂಡೆ ಗದ್ದುಗೆ ದರ್ಬಾರಿನಲ್ಲಿ ಗಿದ್ದಣದಾಟಕತ್ತಲೋಂದೆ ಖಾಯಂ ಅಥಿತಿಹೊದ್ದು ಹಾಸಿ ಮಲಗಿದ ನೋವುನೆಲವೇ ನೆಲೆಯಿಲ್ಲದ ಇಲ್ಲಗಳ ಸಾಲುಬತ್ತಿದ ದ್ವನಿಗೆ ಬಲವಿಲ್ಲ ಗೆಲುವಿಲ್ಲಎಲ್ಲವೂ ಈಗ ಇತಿಹಾಸ
ಬೇರು ನಾರಿನ ಕಥೆಯಲ್ಲಿಇಲ್ಲ ಮುಗಿದು ಎಲ್ಲ ಬಂದಿದೆನಾ ಮುಂದು ತಾ ಮುಂದುಗಳಲಿ ನಿನ್ನೆ ಮರೆತೂ ಹೋಗಿದೆ ಕಾಲ ಚಕ್ರದಲಿ ಜಗದ ಲೆಕ್ಕವ ಮೀರಿ ನಿಮ್ಮ ಪ್ರೀತಿಸುವೆ
ನೀವು ಧಾತು ನಿಮ್ಮೆಲ್ಲ ಮಿತಿಯ ನಡುವೆಯೂ ವಾತ್ಸಲ್ಯದ ಪ್ರೀತಿಗೆ ಸೋತಿರುವೆ ಗುರುವಾಗಿ ಸ್ವೀಕರಿಸಿರುವೆ ನಿಮ್ಮ ತಬ್ಬಿ ಜೋರಾಗಿ ಹೇಳಬೇಕಿದೆ ಲವ್ ಯು ಸರ್………..
……………ಸತ್ಯನಾರಾಯಣ.ಜಿ. ಟಿ. ಕರೂರುಮಾರ್ಚ್ 01-2021ಸಂಜೆ : 6: 25