
ಬೆಳಗಾವಿ: ಮಣ್ಣು ಅಗೆಯಲು ಹೋದ ಇಬ್ಬರು ಯುವಕರು ಜೀವಂತ ಸಮಾಧಿ!
ಮಣ್ಣು ಅಗೆಯುವಾಗ ಗುಡ್ಡ ಕುಸಿದು ಇಬ್ಬರು ಕಾರ್ಮಿಕ ಯುವಕರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಿರನೋಳಿ ಗ್ರಾಮದ ಕೆಂಪಗುದ್ದಿ ಗುಡ್ಡದ ಸಮೀಪ ನಡೆದಿದೆ.

ಮಂಗಳೂರು: ಸೂರತ್ಕಲ್ ಬೀಚ್ ನಲ್ಲಿ ಮುಳುಗಿ ಶಿವಮೊಗ್ಗ ಬಾಲಕ ಸಾವು
ಕುಟುಂಬದವರೊಂದಿಗೆ ಸೂರತ್ಕಲ್ ನ ಗುಡ್ಡೆಕೋಪ್ಲಾ ಬೀಚ್‌ಗೆ ಬಂದಿದ್ದ ಶಿವಮೊಗ್ಗದ 15 ವರ್ಷದ ಬಾಲಕ ಮರಳಿನಲ್ಲಿ ಆಟವಾಡುತ್ತಿದ್ದಾಗ ಭಾರೀ ಅಲೆಗಳ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಕುಟುಂಬದವರೊಂದಿಗೆ ಸೂರತ್ಕಲ್ ನ ಗುಡ್ಡೆಕೋಪ್ಲಾ ಬೀಚ್‌ಗೆ ಬಂದಿದ್ದ ಶಿವಮೊಗ್ಗದ 15 ವರ್ಷದ ಬಾಲಕ ಮರಳಿನಲ್ಲಿ ಆಟವಾಡುತ್ತಿದ್ದಾಗ ಭಾರೀ ಅಲೆಗಳ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕನನ್ನು ಮುಬಾರಕ್ ಅಯೂಬ್ ಖಾನ್ ಎಂದು ಗುರುತಿಸಲಾಗಿದೆ.
ಬಾಲಕನ ಸಹಾಯಕ್ಕೆ ಆತನ ತಂದೆ ಸಮುದ್ರಕ್ಕೆ ಇಳಿದರಾದರೂ ಅವರು ಸಹ ನೀರಿನಲ್ಲಿ ಮುಳುಗುವುದರಲ್ಲಿದ್ದರು. ಅಷ್ಟರಲ್ಲಿ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಿದ್ದಾರೆ.
ಮುಬಾರಕ್ ಮೃತದೇಹವನ್ನು ಅಗ್ನಿ ಶಾಮಕ ಸಿಬ್ಬಂದಿ, ಕರಾವಳಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಹೊರತೆಗೆಯಲಾಗಿದೆ.
ಬೆಳಗಾವಿ: ಮಣ್ಣು ಅಗೆಯುವಾಗ ಗುಡ್ಡ ಕುಸಿದು ಇಬ್ಬರು ಕಾರ್ಮಿಕ ಯುವಕರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಿರನೋಳಿ ಗ್ರಾಮದ ಕೆಂಪಗುದ್ದಿ ಗುಡ್ಡದ ಸಮೀಪ ನಡೆದಿದೆ.
ಮೃತರನ್ನು ಬಿರನೋಳಿ ಗ್ರಾಮದ ಯಲ್ಲಪ್ಪಾ ಹರಿಜನ (22) ಹಾಗೂ ಹಾಲಪ್ಪಾ ಗುರವ (24) ಎಂದು ಗುರುತಿಸಲಾಗಿದೆ.

https://imasdk.googleapis.com/js/core/bridge3.444.1_en.html#goog_1659269534

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (kpc)
