

ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರಂತಹ ನಾಯಕ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

”ಬಿಜೆಪಿ ಸಾಹ್ವಾಸ ಮೂರ್ ಹೊತ್ತೂ ಉಪ್ವಾಸ”: ಕಾಂಗ್ರೆಸ್ ಟೀಕೆ
ಅಚ್ಚೇ ದಿನ್’ ಕಥೆ ಹೇಳಿ ಕೊರೋನಾ, ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕುಸಿದು ಹೋಗಿರುವ ಜನರ ಮೇಲೆ ಬಿಜೆಪಿ ಸರ್ಕಾರ ನಿರಂತರ ಪ್ರಹಾರ ನಡೆಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರು: ಅಚ್ಚೇ ದಿನ್’ ಕಥೆ ಹೇಳಿ ಕೊರೋನಾ, ಲಾಕ್‌ಡೌನ್‌ನಿಂದ ಆರ್ಥಿಕವಾಗಿ ಕುಸಿದು ಹೋಗಿರುವ ಜನರ ಮೇಲೆ ಬಿಜೆಪಿ ಸರ್ಕಾರ ನಿರಂತರ ಪ್ರಹಾರ ನಡೆಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿ ಸರ್ಕಾರ. ಎಲ್‌ಪಿಜಿ ಮೇಲೆ ಇದ್ದ ಸಬ್ಸಿಡಿಯನ್ನೂ ತೆಗೆದುಹಾಕಿ ಕೇವಲ ಎರಡು ತಿಂಗಳಲ್ಲಿ ಇನ್ನರೂ ರೂ. ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದೆ.
ಬಿಜೆಪಿ ಸರ್ಕಾರ ಹೆಚ್ಚಿಸಿರುವ ಆಸ್ತಿ ತೆರಿಗೆ ಕಟ್ಟಲು ಜನ ತಮ್ಮ ನಿವೇಶನಗಳನ್ನೇ ಮಾರಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಕಟ್ಟಡ ನಕ್ಷೆ ಶುಲ್ಕವನ್ನೂ 200 ಪಟ್ಟು ಹೆಚ್ಚಳ ಮಾಡಲಾಗಿದೆ. ಸಾಮಾನ್ಯ ಜನರು ಬದುಕಲೇಬಾರದೆಂದು ನಿರ್ಧರಿಸಿದಂತಿವೆ ಎಂದಿದೆ.
ಮನೆ, ಕಟ್ಟಡ ನಿರ್ಮಿಸುವವರಿಗೆ ಒಂದೆಡೆ ಯೋಜನಾ ಶುಲ್ಕ ಹತ್ತಾರು ಪಟ್ಟು ಹೆಚ್ಚಿಸಲಾಗಿದ್ದರೆ, ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ನಿರ್ಮಾಣ ಸಾಮಾಗ್ರಿಗಳ ಬೆಲೆಯೂ ಏರಿಕೆಯಾಗಿ ನಿರ್ಮಾಣ ಕಾಮಗಾರಿ ನಡೆಯದೆ ಕಟ್ಟಡ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದೆ.
ವಾಹನಗಳನ್ನು ತಮ್ಮ ಮನೆ ಬಾಗಿಲಲ್ಲಿ ನಿಲ್ಲಿಸಲೂ ಕೂಡ ಶುಲ್ಕ ವಿಧಿಸಿ ಸುಲಿಗೆ ನಡೆಸಲು ನಿರ್ಧರಿಸಿದೆ . ಬಡ ಟ್ಯಾಕ್ಸಿ ಚಾಲಕರು. ಬಾಡಿಗೆ ವಾಹನಗಳಲ್ಲಿ ಬದುಕು ಕಟ್ಟಿಕೊಂಡವರು, ಆಟೋ ಚಾಲಕರು ತಮ್ಮ ಸಂಪಾದನೆಯನ್ನು ಸರ್ಕಾರಕ್ಕೆ ಸುರಿಯಬೇಕೆ? ಎಂದು ಪ್ರಶ್ನಿಸಿದೆ.
ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರಂತಹ ನಾಯಕ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ದೇವೇಗೌಡರು ಹೋಗಿದ್ದರು. ಅಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದೇವೇಗೌಡರು ಕಾಂಗ್ರೆಸ್ ನಲ್ಲಿ ಪಕ್ಷದ ಹಿರಿಯ ನಾಯಕರೇ ಬಂಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ಸದೃಢಗೊಳಿಸಲು ಸಿದ್ದರಾಮಯ್ಯ ಅವರಂತಹ ನಾಯಕರ ಅಗತ್ಯವಿದೆ ಎಂದರು.
ರಾಹುಲ್ ಗಾಂಧಿ ಅವರ ಕೈ ಬಲಪಡಿಸಲು ಸಿದ್ದರಾಮಯ್ಯ ಅವರಂತಹ ನಾಯಕರು ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಎಂದು ದೇವೇಗೌಡರು ಹೇಳಿದ್ದಾರೆ. (kpc)
