
ಸರ್ಕಾರ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗವನ್ನು ಮೀಸಲಿಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.

ಮೈಸೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ರಾಜ್ಯ ಸರ್ಕಾರವು ಸಮಾಜದ ಎಲ್ಲಾ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸುತ್ತಿದೆ, ಸರ್ಕಾರ ಹೀಗೆ ಮಾಡದೇ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗವನ್ನು ಮೀಸಲಿಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.
ಮೈಸೂರಿನ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ವಿಪ್ರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರ್ಚಕ ವೃತ್ತಿಯನ್ನು ಬ್ರಾಹ್ಮಣರಿಂದ ಕಿತ್ತು ಕೊಳ್ಳುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಇತ್ತೀಚಿಗೆ ಬಿಡುಗಡೆಯಾದ ಕನ್ನಡ ಸಿನಿಮಾವೊಂದರಲ್ಲಿ ಬ್ರಾಹ್ಮಣರನ್ನು ಅವಹೇಳನವಾಗಿ ತೋರಿಸಲಾಗಿತ್ತು. ಇಂತಹ ಘಟನೆ ಇದೇ ಮೊದಲಲ್ಲ. ಇದಕ್ಕೆ ಪ್ರತಿರೋಧ ನಡೆದಿದ್ದು ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಾಜ ಜಾಗೃತವಾಗಿದೆ ಎಂಬುದಕ್ಕೆ ಉದಾಹರಣೆ. ಅಭಿಮಾನ ಶೂನ್ಯ ಸಮಾಜ ಹೆಚ್ಚು ದಿನಕಾಲ ಬದುಕುವುದಿಲ್ಲ. ಸಿನಿಮಾ ಅವಹೇಳನ ದೃಶ್ಯ ಸಮಾಜದ ಎಲ್ಲರನ್ನೂ ಒಗ್ಗೂಡುವಂತೆ ಮಾಡಿದೆ ಎಂದರು.
ಬ್ರಾಹ್ಮಣರಿಗೆ ಅರ್ಚಕರ ವೃತ್ತಿಯಲ್ಲಿ ಮುಂದುವರಿಯಲು ಅವಕಾಶ ಕೊಡದಿರುವುದು ಬೇಸರದ ಸಂಗತಿ. ಸರ್ಕಾರ ಬ್ರಾಹ್ಮಣರಿಂದ ಅರ್ಚಕ ವೃತ್ತಿಯನ್ನು ಕಿತ್ತು ಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ಎಲ್ಲಾ ಸಮಸ್ಯೆಗಳೊಳಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಯೊಂದೇ ಪರಿಹಾರ. ನಮ್ಮ ಮೇಲೆ ದಾಳಿ ಮಾಡುತ್ತಿರುವವರ ವಿರುದ್ಧ ಹೋರಾಡಲು ಸಂಘಟನೆ ಅತ್ಯವಶ್ಯ ಎಂದು ಪ್ರತಿಪಾದಿಸಿದರು.
ಮಂದಿರ ನಿರ್ಮಾಣಕ್ಕೆ 1,500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 2,100 ಕೋಟಿ ರೂ. ಸಂಗ್ರಹವಾಗಿದೆ. ಮಂದಿರ ನಿರ್ಮಾಣ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಷ್ಟು ಆಸ್ಥೆಯಿಂದ ನಿರ್ಮಿಸಿದ ಮಂದಿರವನ್ನು ಎಷ್ಟು ದಿವಸ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯ.
ಶ್ರೀ ರಾಮನ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಪುನರುತ್ಥಾನವಾಗಬೇಕು. ನೀವು ಕಟ್ಟಿದ ಮಂದಿರ ಅದೆಷ್ಟು ಕಾಲ ನಿಮ್ಮ ಕೈಯಲ್ಲಿ ಉಳಿಯುತ್ತದೆ? ಅದು ಮತ್ತೆ ನಮ್ಮ ಕೈಗೆ ಬಂದೇ ಬರುತ್ತದೆ ಎಂಬ ಹೇಳಿಕೆಗಳನ್ನು ಹುಸಿಗೊಳಿಸಬೇಕು ಎಂದು ಹೇಳಿದರು. (kpc)
ಭಾರತ_ದೇಶದ_ರಿಮೋಟ್(ಇದೊಂದು ವಾಸ್ತವಿಕ ನೆಲೆಯಲ್ಲಿ ಸಂಗ್ರಹಿಸಿದ ಬರಹ …. ಯಾವುದೆ ಸಮುದಾಯದ ಅವಹೇಳನದಂತ ಉತ್ತರ ಕಳುಹಿಸಬೇಡಿ)
ಭಾರತದ ಬ್ರಾಹ್ಮಣ ವ್ಯಕ್ತಿಯೊಬ್ಬರಿಗೆ ವಿದೇಶಿ ಪತ್ರ ಕರ್ತನೊಬ್ಬ ಹೀಗೆ ಪ್ರಶ್ನೆ ಮಾಡುತ್ತಾನೆ…ಅಲ್ಲ ಸ್ವಾಮಿ ಸಂಖ್ಯಾಬಲದಲ್ಲಿ ನೀವು ತೀರ ಕಮ್ಮಿ ಕೇವಲ ಎರಡರಿಂದ ಮೂರು ಪರ್ಸೆಂಟ್ ಅಷ್ಟೇ ಆದರೂ ಭಾರತದಂತಹ ದೊಡ್ಡ ರಾಷ್ಟವನ್ನು ಅದು ಹೇಗೆ ನಿಯಂತ್ರಣ ಮಾಡ್ತಿದ್ದಿರಿ ? ಅದಕ್ಕೆ ನಕ್ಕ ಬ್ರಾಹ್ಮಣ ವ್ಯಕ್ತಿ ಹೀಗೆ ಹೇಳ್ತಾನೆ “ದುಡ್ಡು ಇವ್ರುದು ಜಾಗ ಅವ್ರುದು ಕೊಂಡ್ಕೊಳೊನು ಇವನು ಮಾರೋನು ಅವನು ಆದ್ರೆ ಆ ಜಾಗವನ್ನ ತಗೊಬೇಕಾ ಬೇಡ್ವ ಅಂತ ಹೇಳೋದು ನಾವು , ಜಾಗನೂ ಅವ್ರದೇ ದುಡ್ಡೂ ಅವ್ರದೇ ಆದ್ರೆ ಮನೆ ಯಾವಾಗ ಹೇಗೆ ಕಟ್ಟಬೇಕು ಅಂತ ಹೇಳೋದು ನಾವು , ….ಅವ್ರದೇ ದುಡ್ಡು ಅವ್ರೇ ಕಟ್ಟಿದ ಮನೆ ಆದರೆ ಮನೆ ಒಳಗೆ ಯಾವಾಗ ಪ್ರವೇಶ ಮಾಡ್ಬೇಕು ಅಂತ ಹೇಳೋದು ನಾವು , ಈ ಮನೆಯವರಲ್ಲಿ ಕನ್ಯೆ ಇದೆ ಆ ಮನೆಯವರಲ್ಲಿ ವರ ಇದ್ದಾನೆ ಇವ್ರು ಕೊಡೋಕೆ ರೆಡಿ ಇದ್ದಾರೆ ಅವ್ರು ತಗೊಳೋಕೆ ರೆಡಿ ಇದ್ದಾರೆ ಆದ್ರೆ ಮದುವೆ ಯಾವಾಗ ಮಾಡ್ಬೇಕು ಅಂತ ಹೇಳೋದು ನಾವು , ಅವ್ರು ಕನ್ಯೆ ಕೊಟ್ಟರು ಇವ್ರು ಕನ್ಯೆ ತಗೊಂಡ್ರು ಆದ್ರೆ ಯಾವ ದಿವ್ಸ ಕಳಿಸ್ಬೇಕು ಅಂತ ಹೇಳೋದು ನಾವು , ತನ್ನದೇ ಹೊಸ ಮನೆ ತನ್ನದೇ ಹೊಸ ಹೆಂಡ್ತಿ ಆದ್ರೆ ಶೋಭನ ಯಾವತ್ತು ಇಟ್ಕೊಬೇಕು ಅಂತ ಹೇಳೋದು ನಾವು , ನಿಸರ್ಗ ನಿಯಮದ ಪ್ರಕಾರ ಒಂದು ಗಂಡು ಹೆಣ್ಣು ಸೇರ್ತಾರೆ ಸೇರಿದಾಗ ಸ್ವಾಭಾವಿಕ ವಾಗಿ ಹೆಣ್ಣು ಮಗು ಹೆರ್ತಾಳೆ.. ಅವ್ರದೇ ಮಗು ಆದ್ರೆ ನಾಮಕರಣ ಯಾವತ್ತು ಮಾಡ್ಬೇಕು ಅಂತ ಹೇಳೋದು ನಾವು ,
ಮನುಷ್ಯ ನಿಸರ್ಗ ಸಹಜವಾಗಿ ಹುಟ್ಟುತಾನೆ ಹಾಗೇ ಸಾಯ್ತಾನೆ ಆದ್ರೆ ಸತ್ತ ಮೇಲೂ ಯಾವ ನಕ್ಷತ್ರ? ಹೆಣ ಹೂಳಬೇಕಾ? ಸುಡಬೇಕಾ? ಅಂತ ಹೇಳೋದು ನಾವು,,,,,,,ನೋಡಿ ಇಡೀ ಭಾರತ ದೇಶ ವಾಸಿಗಳ ಮೆದುಳು ಒಂದು ಟೀವಿ ಇದ್ದ ಹಾಗೆ ಅದರ ರಿಮೋಟ್ ನಮ್ಮ ಕೈಲಿ ಇರೊವರೆಗೂ ಭಾರತವನ್ನ ನಿಯಂತ್ರಣ ಮಾಡ್ತಾನೆ ಇರ್ತಿವಿ “
ಸಂಗ್ರಹ ಬರಹ
-ರಾಜು ನಾಯ್ಕ…
