

ಅನಾರೋಗ್ಯದಿಂದ ಬೇಸತ್ತ ದಂಪತಿಗಳಿಬ್ಬರು ಮನೆಯೊಳಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸಿದ್ಧಾಪುರ ತಾಲೂಕಿನ ಕಾನಗೋಡು ಗುತ್ತಿಮನೆಯಲ್ಲಿ ನಡೆದಿದೆ. ಮಂಡಿನೋವಿನಿಂದ ಬಳಲುತಿದ್ದ 69 ವರ್ಷದ ದತ್ತಾ ಶೇಟ್ 58 ವರ್ಷದ ಪತ್ನಿ ಪದ್ಮಾವತಿ ದತ್ತಾ ಶೇಟ್ ರೊಂದಿಗೆ ರವಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪ್ರಕರಣ ಇಂದು ಬಹಿರಂಗವಾಗಿದ್ದು ಸ್ಥಳಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರಮ ಜರುಗಿಸಿದ್ದಾರೆ. ಮೃತ ದಂಪತಿಗಳಿಗೆ 4 ಜನ ಮಕ್ಕಳಿದ್ದು ಇಬ್ಬರು ಪುತ್ರಿಯರಿಗೆ ಮದುವೆಯಾಗಿದೆ. ಪುತ್ರರು ಹೊರ ಊರುಗಳಲ್ಲಿದ್ದು ಉದ್ಯೋಗದಲ್ಲಿದ್ದಾರೆ.
