ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ಮುಂಜಾಗ್ರತಾ ಕ್ರಮಗಳನ್ನು ತ್ವರಿತವಾಗಿ,ಆದ್ಯತೆಗಳ ಆಧಾರದಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ ಮಲ್ಲೈ ಮುಹಿಲನ್ ಮಂಗನಕಾಯಿಲೆ ಪೀಡಿತ ಮತ್ತು ಮಂಗನಕಾಯಿಲೆಯಿಂದ ಚೇತರಿಸಿಕೊಂಡವರಿಗೆ ಅಗತ್ಯ ಚಿಕಿತ್ಸೆ,ಅನಿವಾರ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧವಿದೆ ಎಂದಿದ್ದಾರೆ.
ಸಿದ್ಧಾಪುರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಈ ಭರವಸೆ ನೀಡುವ ಮೊದಲು ವೈದ್ಯರು, ಅಧಿಕಾರಿಗಳಿಂದ ಮಂಗನಕಾಯಿಲೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲಿಸಿದರು. ಅಧಿಕಾರಿಗಳು, ಸಾರ್ವಜನಿಕರ ಅಹವಾಲುಗಳು, ಪ್ರಶ್ನೆಗಳಿಗೆ ಉತ್ತರಿಸಿ ಸಲಹೆ ಪಡೆದ ಅವರು ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ವಿಳಂಬವಿಲ್ಲದೆ ಮಾಡುತ್ತೇವೆ. ಅವಶ್ಯ ವೈದ್ಯಕೀಯ ಸಲಕರಣೆ,ಸಂರಚನೆ ಸೇರಿದ ವ್ಯವಸ್ಥೆಗಳನ್ನು ಮಾಡಿ ಮಂಗನಕಾಯಿಲೆ ನಿಯಂತ್ರಣಕ್ಕೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.