
ನನ್ನನ್ನು ಮೊಗಸಾಲೆಗೂ ಬಿಡುತ್ತಿಲ್ಲ. ಸದನಕ್ಕೂ ಬಿಡುತ್ತಿಲ್ಲ. ಎಂದು ಒಂದು ವಾರ ಅಮಾನತುಗೊಂಡಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕಿಡಿಕಾರಿದ್ದಾರೆ.

ಬೆಂಗಳೂರು: ನನ್ನನ್ನು ಮೊಗಸಾಲೆಗೂ ಬಿಡುತ್ತಿಲ್ಲ. ಸದನಕ್ಕೂ ಬಿಡುತ್ತಿಲ್ಲ. ಎಂದು ಒಂದು ವಾರ ಅಮಾನತುಗೊಂಡಿರುವ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸದನದೊಳಗೆ ಬೇಡ, ಮೊಗಸಾಲೆಗೂ ಬಿಡುತ್ತಿಲ್ಲ ಅಂದರೆ ಹೇಗೆ? ವಿಧಾನಸೌಧವೇನು ಸ್ಪಿಕರ್ ಕಾಗೇರಿ ಅವರದ್ದಾ? ವಿಧಾನಸೌಧ ಜನರಿಗೆ ಸೇರಿದ್ದು, ಅವರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

https://imasdk.googleapis.com/js/core/bridge3.445.1_en.html#goog_1003707034
ಸ್ಪೀಕರ್ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ನನಗೆ ಅನ್ಯಾಯವಾಗಿದೆ. ನ್ಯಾಯ ಕೇಳಿದ್ದೇನೆ. ನನ್ನ ಕುಟುಂಬದ ಮೇಲೆ ಕೇಸ್ ಹಾಕಲಾಗಿದೆ. ಅದಕ್ಕೆ ನಾನು ಶರ್ಟ್ ಬಿಚ್ಚಿ ಸದನದ ಗಮನ ಸೆಳೆದಿದ್ದು, ತಾಕತ್ತಿದ್ದರೆ ನನ್ನನ್ನೂ ಬಂಧಿಸಲಿ ಎಂದು ಶಾಸಕ ಸಂಗಮೇಶ್ ಸವಾಲು ಹಾಕಿದರು.
ಸಂಗಮೇಶ್ ಅವರು ತಮ್ಮ ಕುಟುಂಬದವರ ವಿರುದ್ಧ ಸುಳ್ಳು ಕೇಸ್ಗಳನ್ನ ಹಾಕಿಸಿ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ನಿನ್ನೆ ಸದನದ ಒಳಗೆ ತಮ್ಮ ಶರ್ಟ್ ಕಳಚಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಸ್ಪೀಕರ್ ಕಾಗೇರಿ ಗಂಭೀರವಾಗಿ ಪರಿಗಣಿಸಿ ಸಂಗಮೇಶ್ ಅವರನ್ನ ಒಂದು ವಾರ ಕಾಲ ಸದನದ ಕಲಾಪದಿಂದ ನಿಷೇಧಿಸಿದ್ದರು. (kpc)
