
ಮುಂದಿನ ಟಾರ್ಗೆಟ್ ನಾನೇ ಆಗಿರಬಹುದು: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
ನೀವು ಗಂಟೆಗಟ್ಟಲೆ ವಿಡಿಯೋ ಹಾಕಿ, ಪಂಚ್ ಮಾಡ್ತೀರಿ. ನಮ್ಮ ಸೇಫ್ಟಿಗೋಸ್ಕರ ಕೋರ್ಟ್ ಮೊರೆ ಹೋಗಿದ್ದೇವೆ. ನಮ್ಮ ತೇಜೋವಧೆ ಮಾಡಿದರೆ ನಮಗೆ ಗತಿಯಾರು?
ಸೆಕ್ಸ್ ಸಿಡಿಯಲ್ಲಿರುವ ಮಹಿಳೆಗಾಗಿ ಪೊಲೀಸರ ಭೇಟೆ: ಆಕೆಯ ಬಗ್ಗೆ ಮಾಹಿತಿ ನೀಡಲು ಜಾರಕಿಹೊಳಿ ನಿರಾಕರಣೆ
ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಶೋಧ ನಡೆಸಿದ್ದಾರೆ.

ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಶೋಧ ನಡೆಸಿದ್ದಾರೆ. ಮಹಿಳೆ ಬಗ್ಗೆ ವಿವರಣೆ ಕೇಳಲು ಪೊಲೀಸರು ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿದ್ದಾರೆ, ಆದರೆ ಅವರು ಯಾವುದೇ ಮಾಹಿತಿ ನೀಡಲಿಲ್ಲ.
ಬಿಜೆಪಿ ನಾಯಕನ ಜೊತೆಗಿನ ದೂರವಾಣಿ ಕರೆಗಳು, ಕಾಲ್ ರೆಕಾರ್ಡ್ ಮುಂತಾದವುಗಳ ಆಧಾರದ ಮೇಲೆ, ಸೆಕ್ಸ್ ಟೇಪ್ ನಲ್ಲಿರುವ ಮಹಿಳೆ ಆರ್ ಟಿ ನಗರದಲ್ಲಿರುವ ಮಹಿಳೆಯರ ವಸತಿ ಗೃಹದಲ್ಲಿದ್ದಳು ಎಂದು ತಿಳಿದು ಬಂದಿದೆ.

https://imasdk.googleapis.com/js/core/bridge3.445.1_en.html#goog_2082563047
2018 ರಲ್ಲಿ ಪಿಜಿಗೆ ಸೇರಿದ್ದ ಆಕೆ ರಾಜಾಜಿನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಳು, ಆದರೆ ಯಾವ ಕಂಪನಿ ಎಂದು ತಿಳಿಸಿರಲಿಲ್ಲ. ಸೋಮವಾರ ಸೆಕ್ಸ್ ವಿಡಿಯೋ ವೈರಲ್ ಆಗುವುದಕ್ಕೂ ಮೊದಲು ಆಕೆ ಪಿಜಿ ಖಾಲಿ ಮಾಡಿದ್ದಾಳೆ. ಆಕೆಯ ಇಬ್ಬರು ಸ್ನೇಹಿತೆಯರಿಗೂ ಕೂಡ ಅವಳ ಬಗ್ಗೆ ಮಾಹಿತಿಯಿಲ್ಲ, ಸೋಮವಾರ ಕೊನೆಯದಾಗಿ ಆಕೆಯನ್ನು ನೋಡಿದ್ದಾಗಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನೂ ಮಹಿಳಾ ಹೋರಾಟಗಾರ್ತಿ ಕೆಎಚ್ ಇಂದಿರಾ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ದಿನೇಶ್ ಕಲ್ಲಹಳ್ಳಿ ಮತ್ತು ರಾಜಶೇಖರ್ ಮುಲಾಲಿ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಕಾರವಾರ: ನೀವು ಗಂಟೆಗಟ್ಟಲೆ ವಿಡಿಯೋ ಹಾಕಿ, ಪಂಚ್ ಮಾಡ್ತೀರಿ. ನಮ್ಮ ಸೇಫ್ಟಿಗೋಸ್ಕರ ಕೋರ್ಟ್ ಮೊರೆ ಹೋಗಿದ್ದೇವೆ. ನಮ್ಮ ತೇಜೋವಧೆ ಮಾಡಿದರೆ ನಮಗೆ ಗತಿಯಾರು? ಇದೇ ಕಾರಣದಿಂದಾಗಿ ನಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.
ಕಾರವಾರದಲ್ಲಿ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್, ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ರಾಜಕೀಯ ಪಿತೂರಿಯಾಗಿದೆ, ಬಿಜೆಪಿ ಸರ್ಕಾರ ಬರಲು ಕಾರಣರಾದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ.

https://imasdk.googleapis.com/js/core/bridge3.445.1_en.html#goog_188719171
ರಾಜಿನಾಮೆ ನೀಡಿ ಮುಂಬಯಿಗೆ ತೆರಳಿದ್ದ ಶಾಸಕರನ್ನು ಟಾರ್ಗೆಟ್ ಮಾಡಲಾಗಿದೆ, ಮುಂದಿನ ಬಲಿಪಶು ನಾನೇ ಆಗಿರಬಹುದು, ಹೀಗಾಗಿ ನಮ್ಮ ಸೇಫ್ಟಿಗೆ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದರೆ ಜನರು ನಮಗೆ ಗೌರವ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು, .
(kpc)
https://www.youtube.com/watch?v=x6ritbquAZo&t=3s
