
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ, ರೈತರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ, ರೈತರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಇಂದು ಬಜೆಟ್ ಮಂಡನೆ ವೇಳೆ ಸಿಎಂ ಯಡಿಯೂರಪ್ಪ ಕೃಷಿ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ 31,028 ಕೋಟಿ ರೂ.ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಹಸಿರೆಲೆ ಗೊಬ್ಬರಕ್ಕೆ 10 ಕೋಟಿ, ಸಾವಯವ, ಸಿರಿಧಾನ್ಯ ಮಾರಾಟಕ್ಕೆ ಇ ಮಾರುಕಟ್ಟೆ ಪ್ರೈ. ಲಿಮಿಟೆಡ್, ಅಡಿಕೆ ಬೆಳೆಗೆ ಪರಿಹಾರ ಬೆಲೆಯಾಗಿ 25 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಿದ್ದಾರೆ.
ಇನ್ನು ಕೃಷಿ ವಿಶ್ವ ವಿದ್ಯಾಲಯದಲ್ಲಿ ಓದುವ ರೈತರ ಮಕ್ಕಳಿಗೆ ಶೇ.40-50 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದಾರೆ. 75 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮನಗರದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿ ಸುವುದಾಗಿ ಹೇಳಿದ್ದಾರೆ. ಬ್ಯಾಡಗಿ ಮೆಣಸಿನಕಾಯಿಗಾಗಿ ಗುಣ ವಿಶ್ಲೇಷಣಾ ಘಟಕ ಸ್ಥಾಪನೆ, ಸಾವಯವ ಕೃಷಿಗೆ 500 ಕೋಟಿ ರೂಪಾಯಿ, ಸಿಂಗೇನ ಅಗ್ರಹಾರದಲ್ಲಿ ತರಕಾರಿ ಮಾರುಕಟ್ಟೆ, ಗೋದಾಮು ಮತ್ತು ಅಂಗಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಹ ಯಡಿಯೂರಪ್ಪ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ಮತ್ಸ್ಯ ದಾ ಯೋಜನೆಗೆ 65 ಕೋಟಿ, ಕಿರು ಆಹಾರ ಸಂಸ್ಕರಣ ಉದ್ಯಮಕ್ಕೆ 50 ಕೋಟಿ ರೂಪಾಯಿ, ಹಳದಿ ಎಲೆರೋಗ ಸಂಶೋಧನೆಗೆ 25 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಿದ್ದಾರೆ.ಬೇಡ್ತಿ, ವರದಾ ನದಿ ಜೋಡಣೆ ಮಾಡಲಾಗುವುದು ಎಂದು ತಿಳಿಸಿದರು. (kpc)
