ಬಿಜೆಪಿ ಸರ್ಕಾರದ ಬಜೆಟ್ ಕೂಡ ಅನೈತಿಕ: ಸಿದ್ದರಾಮಯ್ಯ

ಸಿದ್ದಾಪುರ
ತಾಲೂಕಿನ ಮುಠ್ಠಳ್ಳಿ ಸಮೀಪದ ಹಳಿಯಾಳ ಮಹಿಷಾಸುರ ಮರ್ಧಿನಿ ದೇವಾಲಯದ 55ನೇ ವರ್ಷದ ವಾಷಿಕೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವ ಮಾ.9 ಹಾಗೂ 10ರಂದು ನಡೆಯಲಿದೆ.
9ರಂದು ಬೆಳಗ್ಗೆ ದೇವಿಗೆ ಹಣ್ಣುಕಾಯಿ ಸೇವೆ, ದೇವಿಯ ಪಾರಾಯಣ, ಬಲಿಪೂಜೆ, ಗುರುಪಾದುಕಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. 10ರಂದು 108ಸಾಮೂಹಿಕ ಸತ್ಯನಾರಾಯಣ ವೃತ ಪೂಜೆ, ಗಣಹವನ, ಬಲಿಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ರಾತ್ರಿ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಕುರವಂತೆಯ ರಾಮ ಚೌಡ ಗೌಡ ಇತ್ತೀಚೆಗೆ ಸ್ಥಳೀಯ ಮಾನಸಿಕ ಅಸ್ವಸ್ಥೆ ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯಾಲಯ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಎನ್‍ಆರ್‍ಎಲ್‍ಎಂ ಒಕ್ಕೂಟ ಹಾಗೂ ತಾಲೂಕು ರೈತ ಸಂಘ ಪ್ರತಿಭಟನೆ ನಡೆಸಿ ಹಾರ್ಸಿಕಟ್ಟಾ ಗ್ರಾಪಂ ಪಿಡಿಒ ರಾಜೇಶ ನಾಯ್ಕ ಅವರ ಮೂಲಕ ಮುಖ್ಯಮಂತ್ರಿಯವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ ಇಂತಹ ಘಟನೆಗಳು ಮುಂದಿನ ದಿನದಲ್ಲಿ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಮಹಿಳೆಯರು ಬಲಹೀನರಾಗದೆ ಸಂಘಟನೆಯ ಮೂಲಕ ನಮ್ಮ ಶಕ್ತಿ ತೋರಿಸಬೇಕಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ ಗಾಂಧಿಜಿಯವರು ಕಂಡ ಕನಸಿಗೆ ಧಕ್ಕೆ ಆಗಿದೆ. ಗುಡ್ಡ ಗಾಡು ಪ್ರದೇಶದ ಗ್ರಾಪಂ ವ್ಯಾಪ್ತಿಯಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡುವುದು ಅಸಾಧ್ಯವಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಸಿಗುವಂತಾಗಬೇಕೆಂದರು.
ಎನ್‍ಆರ್‍ಎಲ್‍ಎಂನ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ)ಸಂಚಾಲಕಿ ಸುಧಾ ಎಂ.ಹೆಗಡೆ ಕರ್ಕಿಸವಲ್ ಮಾತನಾಡಿ ಮಹಿಳೆಯರ ಮೇಲೆ ಯಾವುದೇ ಸಂದರ್ಭದಲ್ಲಿ ದೌರ್ಜನ್ಯ ಎಸಗಿದಾಗ ಸುಮ್ಮನೆ ಕುಳಿತುಕೊಳ್ಳದೆ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಅಲ್ಲದೇ ಸೂಕ್ತ ಸಾಕ್ಷಿಯನ್ನು ಇಟ್ಟುಕೊಳ್ಳಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದಕ್ಕೆ ಸೂಕ್ತ ತನಿಖೆ ಆಗಬೇಕೆಂದರು. ಒಕ್ಕೂಟದ ಸದಸ್ಯೆ ಶಾರದಾ ಶಾನಭಾಗ,ದೊಡ್ಮನೆ ಜಿಪಂ ವ್ಯಾಪ್ತಿಯ ರೈತ ಸಂಘದ ಅಧ್ಯಕ್ಷ ಕೆರಿಯಪ್ಪ ನಾಯ್ಕ ಮಾತನಾಡಿದರು.
ಗ್ರಾಪಂ ಪಿಡಿಒ ರಾಜೇಶ ನಾಯ್ಕ ಹಾಗೂ ಕಾರ್ಯದರ್ಶಿ ಎಸ್‍ಎಸ್ ಸಾಗರೇಕರ್ ಅವರಿಗೆ ತಾಲೂಕು ಸುಧಾ ಹೆಗಡೆ ಹಾಗೂ ಮಹಿಳಾ ಸಂಘಟನೆಯವರು ಮನವಿ ಸಲ್ಲಿಸಿದರು.ಕಾಂಚನಾ(ನಂದಿನಿ) ಹೆಗಡೆ ಮನವಿ ವಾಚಿಸಿದರು.
ಇದಕ್ಕೂ ಪೂರ್ವದಲ್ಲಿ ಸ್ಥಳೀಯ ಗಜಾನನೋತ್ಸವ ಸಮಿತಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಿ ನಂತರ ಅಲ್ಲಿಂದ ಪ್ರತಿಭಟನಾ ಮೆರವಣಿಗೆಯನ್ನು ಗ್ರಾಪಂ ಕಚೇರಿಯವರೆಗೆ ನಡೆಸಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ಸುರೇಶ ನಾಯ್ಕ, ಖಜಾಂಚಿ ಪದ್ಮಾಕರ ನಾಯ್ಕ, ಎನ್‍ಆರ್‍ಎಲ್‍ಎಂ ಒಕ್ಕೂಟದ ಹಾಗೂ ರೈತ ಸಂಘದ ಅರವತ್ತಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು.

ಅನೈತಿಕ ಬಿಜೆಪಿ ಸರ್ಕಾರದ ಬಜೆಟ್ ಕೂಡ ಅನೈತಿಕ: ಸಿದ್ದರಾಮಯ್ಯ

ಅನೈತಿಕ ಬಿಜೆಪಿ ಸರ್ಕಾರದ ಬಜೆಟ್ ಕೂಡ ಅನೈತಿಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

Siddaramaiah

ಬೆಂಗಳೂರು: ಅನೈತಿಕ ಬಿಜೆಪಿ ಸರ್ಕಾರದ ಬಜೆಟ್ ಕೂಡ ಅನೈತಿಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅನೈತಿಕ ಸರ್ಕಾರದ ಬಜೆಟ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ ಬಜೆಟ್ ಅನ್ನು ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ. ಯಡಿಯೂರಪ್ಪ ಬಜೆಟ್ ಪುಸ್ತಕ ಓದುವಾಗ ನಾವು ಇರಲಿಲ್ಲ. ಬಳಿಕ ಬಜೆಟ್ ಪುಸ್ತಕ ನೋಡಿದಾಗ ಅದು ಅಭಿವೃದ್ಧಿಗೆ ಪೂರಕವಲ್ಲದ ಗೊತ್ತುಗುರಿಯಿಲ್ಲದ ಟೊಳ್ಳು ಮುಂಗಡಪತ್ರ ಎಂದರು.

ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಹಿಂದೆ ಪಾರದರ್ಶಕವಾಗಿ ಕಳೆದ ವರ್ಷ ಇಲಾಖೆಗೆ ಇಷ್ಟು ಮೀಸಲಿಡಲಾಗಿದೆ ಎಂದು ಸ್ಪಷ್ಟವಾಗಿ ಇಲಾಖೆಯ ಹೆಸರನ್ನು ಉಲ್ಲೇಖಿಸಲಾಗುತ್ತಿತ್ತು. ಆದರೆ ಯಡಿಯೂರಪ್ಪ ಬಜೆಟ್ ಅನ್ನು ಆರು ವಲಯಗಳಾಗಿ ವಿಭಾಗಿಸಿ ಯಾವ ಇಲಾಖೆಗೆ ಎಷ್ಟು ಕೊಟ್ಟಿದ್ದಾರೆ ಎಂಬ ಅಂಕಿ ಅಂಶಗಳನ್ನೂ ತಿಳಿಸದೆಯೇ ಬಜೆಟ್ ಅನ್ನು ಬಿಚ್ಚಿಡುವುದಕ್ಕಿಂತ ಗೌಪ್ಯವಾಗಿ ಮಾಹಿತಿಯನ್ನು ಮುಚ್ಚಿಡುವುದನ್ನೇ ಮಾಡಿದ್ದಾರೆ. ಈ ಬಜೆಟ್ ಟೋಟಲಿ ಕಾನ್ಸಪರೆನ್ಸಿ (ಒಟ್ಟಾರೆ ಪಿತೂರಿಯ ಬಜೆಟ್) ಆಗಿದೆ. ಮೀಸಲಿಟ್ಟ ಹಣವನ್ನು ಯಾವುದಕ್ಕೆ ಹೇಗೆ ಖರ್ಚು ಮಾಡುತ್ತೇವೆ ಎಂದು ವಿಧಾನಸಭೆಯ ಮುಂದೆ ಇಡಬೇಕು. ಪ್ರತಿಯೊಂದಕ್ಕೂ ಸರ್ಕಾರವೇ ಜವಾಬ್ದಾರಿಯಾಗಿದ್ದು, ಎಲ್ಲದಕ್ಕೂ ಲೆಕ್ಕ ಕೊಡಬೇಕು. ಆದರೆ ಯಡಿಯೂರಪ್ಪ ಮಂಡಿಸಿದ್ದು ಆದಾಯ ಕೊರತೆಯ ಬಜೆಟ್ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು.

ನಾನು ಹಿಂದೆ 5 ವರ್ಷ ಹಣಕಾಸು ಸಚಿವನಾಗಿದ್ದಾಗ ಒಂದು ವರ್ಷವೂ ಕೂಡ ಬಜೆಟ್ ಗೆ ಆದಾಯದ ಕೊರತೆಯಾಗಿರಲಿಲ್ಲ. ಆದಾಯ ಹೆಚ್ಚುವರಿಯಾಗಿತ್ತು. 19485 ಕೋಟಿ ಏನು ಕಡಿಮೆ ಹಣವಲ್ಲ. ಆದರೀ ಪುಣ್ಯಾತ್ಮರು ಬಂದು ಸಾಲ ಮಾಡಿ ಆದಾಯ ಕೊರತೆಯನ್ನು ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಇವರ ಬಳಿ ಹಣವಿಲ್ಲ. ಇವರ ಆದಾಯ ಠೇವಣಿ ಉಲ್ಟಾ ಆಗಿದೆ. ಒಂದು ವರ್ಷಕ್ಕೆ 71,323 ಕೋಟಿ ರೂ. ಸಾಲ ಪಡೆಯುತ್ತಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚು ಸಾಲ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳುತ್ತಿದ್ದಾರೆ. ಯಡಿಯೂರಪ್ಪ ಒಟ್ಟು ಸಾಲ 2021-22 ಕ್ಕೆ 457889 ಕೋಟಿ ರೂ. ಆಗಲಿದೆ. ನಮ್ಮ ಸರ್ಕಾರ ಬಜೆಟ್ ಮಂಡನೆ ಮಾಡುವಾಗ 136000 ಕೋಟಿ ರೂ ಸಾಲವಿತ್ತು. ಆಗ ಸಿದ್ದರಾಮಯ್ಯ ಸಾಲ ಮಾಡಿ ಬಿಟ್ಟರು ಎಂದು ಟೀಕಿಸಿದ್ದ ಬಿಜೆಪಿ ನಾಯಕರೇ ಇಂದು 14,2,000 ಕೋಟಿ ರೂ. ಸಾಲ ಮಾಡಿದ್ದಾರೆ. 26.09% ಸಾಲ ಹೆಚ್ಚುವರಿಯಾಗಿದೆ. ಮುಂದಿನ ವರ್ಷ 18 ಲಕ್ಷ ಕೋಟಿ ಸಾಲ ಆಗಲಿದೆ. ಕೇಂದ್ರ ಸರ್ಕಾರ ಸಾಲ ಮಾಡಲು ಅನುಮತಿ ನೀಡಿದೆ ಎಂದ ಮಾತ್ರಕ್ಕೆ ಮನಸಿಗೆ ಬಂದಂತೆ ಸಾಲ ಮಾಡುವುದಲ್ಲ. ಸಾಲ ತೀರಿಸುವ ಸಾಮರ್ಥ್ಯದ ಮೇಲೆ ಸಾಲ ತೆಗೆದುಕೊಳ್ಳಬೇಕು. ಯಡಿಯೂರಪ್ಪನವರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಕಳೆದ ಬಾರಿ ಬಜೆಟ್ ಮಂಡನೆ ಮಾಡಿದಾಗ ವೇಸ್ಟ್, ಕಮಿಟೆಡ್ ಎಕ್ಸೆಪೆಂಡಿಚರ್ ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದೆ. ಅಭಿವೃದ್ಧಿ ಮಾಡದೆಯೇ ಸರ್ವೋದಯ ಹೆಸರು ಮಾತ್ರ ಚೆನ್ನಾಗಿ ಕೊಡುತ್ತಾರೆ. 9943 ಕೋಟಿ ಸೆಕ್ಟರ್ 2 ನಲ್ಲಿ ಕಡಿಮೆಯಾಗಿದೆ. 1231 ಕೋಟಿ ರೂ. ಕಡಿಮೆಯಾಗಿದೆ.

ಬೆಂಗಳೂರು ಸಮಗ್ರ ಅಭಿವೃದ್ಧಿಗೆ 21-22 ಕ್ಕೆ 1000 ಕೋಟಿ ಕಡಿಮೆ ಮಾಡಿದ್ದಾರೆ. ಪ್ರವಾಸೋದ್ಯಮಕ್ಕೆ 1907 ಕೋಟಿ ಕಡಿಮೆ ಮಾಡಿದ್ದಾರೆ.ಇದು ಪಾರದರ್ಶಕವಾಗಿಲ್ಲದ ಬಜೆಟ್ ಎಂದರು.

ಪರಿಶಿಷ್ಟ ಜಾತಿ, ಪಂಗಡದ ಬಗ್ಗೆ ಬಿಜೆಪಿ ನಾಯಕರು ಬರೀ ಮಾತನಾಡುತ್ತಾರೆ ಅಷ್ಟೇ. ಆದರೇನೂ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಜನಸಂಖ್ಯೆಯಾಧಾರದ ಮೇಲೆ ಅನುದಾನ ಖರ್ಚು ಮಾಡಬೇಕೆಂದು ಎಸ್ಇಪಿಟಿ ಎಸ್ಪಿ ಕಾಯಿದೆ ಜಾರಿಗೊಳಿಸಲಾಗಿದ್ದು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ .ಬಜೆಟ್ ಹೆಚ್ಚಾದ ಹಾಗೆ ಅದರ ಖರ್ಚು ಕೂಡ ಹೆಚ್ಚಾಗಬೇಕು. ಎಸ್ ಇ ಪಿ , ಟಿಎಸ್ ಪಿಗೆ, ಪರಿಶಿಷ್ಟರಿಗೆ ಎಲ್ಲಿ ಅನುದಾನವಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ತಳ ಸಮುದಾಯ ಜನ ಬಡತನದ ಬೇಗೆಯಲ್ಲಿ ಅನುಭವಿಸುತ್ತಿರುವ ಜನರ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಅಂಬೇಡ್ಕರ್, ಕಾಡು ಗೊಲ್ಲ, ಉಪ್ಪಾರ, ವಾಲ್ಮೀಕಿ, ಭೋವಿ, ಸಫಾಯಿ ಕರ್ಮಚಾರಿ, ವಿಶ್ವಕರ್ಮ, ಕಾಡು ಗೊಲ್ಲ ಅಭಿವೃದ್ಧಿ ನಿಗಮ ಸೇರಿದಂತೆ 16 ನಿಗಮಗಳನ್ನು ಸ್ಥಾಪಿಸಲಾಗಿದೆ. ಆದರೆ ಇವರಿಗೆ ಕೇವಲ 500 ಕೋಟಿ ಮಾತ್ರ ಮೀಸಲಿಟ್ಟಿದ್ದು, ತಳಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಬಿಜೆಪಿಗರು ಸಾಮಾಜಿಕ ನ್ಯಾಯದ ವಿರೋಧಿಗಳು. ಒಕ್ಕಲಿಗ, ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಹಣ ಕೊಟ್ಟಿರುವುದಕ್ಕೆ ನನ್ನ ವಿರೋಧ ಇಲ್ಲವಾದರೂ ಉಳಿದ ತಳ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಸರಿಯಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ದೇಶದಲ್ಲಿ ಸುವರ್ಣ ಯುಗ ಬರುತ್ತದೆ ಎಂದಿದ್ದರು. ಆದರೆ ಎಲ್ಲಿದೆ ಸುವರ್ಣ ಯುಗ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯದಿಂದ ಸಂಸತ್ತಿಗೆ ಆರಿಸಿಹೋಗಿದ್ದ ಬಿಜೆಪಿ ಸಂಸದರು ಯಾರೊಬ್ಬರು ಬೆಲೆ ಹೆಚ್ಚಳ, ಅಭಿವೃದ್ಧಿ ಕುಂಠಿತ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಕೇಂದ್ರದಲ್ಲಿ ಧ್ವನಿಯೆತ್ತುತ್ತಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಿದೆ. ಬಜೆಟ್ ನಲ್ಲಿ ಟ್ಯಾಕ್ಸ್ ಕಡಿಮೆ ಮಾಡಬೇಕಿತ್ತು. ಎಲ್ಲಾ ಬೆಲೆ ಹೆಚ್ಚಾಗಿರುವುದರಿಂದ ಮಧ್ಯಮ ವರ್ಗ ಬದುಕಲು ಆಗುತ್ತಿಲ್ಲ. ಯಡಿಯೂರಪ್ಪ ಮಂಡಿಸಿದ್ದು ಜನ ವಿರೋಧಿ, ಅಭಿವೃದ್ಧಿ ವಿರೋಧಿ, ರಾಜ್ಯ ದಿವಾಳಿ ಮಾಡುವ, ಗೊತ್ತು ಗುರಿ ಇಲ್ಲದ ಒಂದು ಆಯವ್ಯಯ ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *