ತರಬೇತಿ & ಸನ್ಮಾನ-
ಸಿದ್ಧಾಪುರ ಕ್ಯಾದಗಿ ಗ್ರಾಮ ಪಂಚಾಯತ್ ನಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆ ಮೂಲಕ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅಣಬೆ ಮತ್ತು ಮಾಡ ಹಾಗಲ ಬೆಳೆಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಶಿರಸಿ, ಸಹಾಯಕ ಪ್ರಾಧ್ಯಾಪಕರಾದ ಡಾ /ಪ್ರೀತಮ್ ಮಾಡ ಹಾಗಲ ಬೆಳೆಯ ಬೇಸಾಯ, ಮಾರುಕಟ್ಟೆ, ಆರೋಗ್ಯಕ್ಕೆ ಅದರ ಪ್ರಯೋಜನ ಕುರಿತು ಮಾಹಿತಿ ಒದಗಿಸಿದರು.
ನಂತರ ಜೈವಿಕ ಕೇಂದ್ರ ಶಿವಮೊಗ್ಗದ ಸಹಾಯಕ ತೋಟಗಾರಿಕೆ ಅಧಿಕಾರಿ ಅನಿತಾ ಅಣಬೆ ಬೇಸಾಯದ ಕುರಿತು ಮಾಹಿತಿ ಒದಗಿಸಿದರು,
ಇದೇ ಕಾರ್ಯಕ್ರಮದಲ್ಲಿ ಸಾಧಕ ರೈತ ಮಹಿಳೆ ಗೌರಿ ನಾಯ್ಕ್, ನೀಡಗೋಡರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಯಾದಗಿ ಪಂಚಾಯತ್ ಅಧ್ಯಕ್ಷೆ ರೇಣುಕಾ ಗೌಡ,ಉಪಾಧ್ಯಕ್ಷ S N ಹೆಗಡೆ ಮತ್ತು ಪಂಚಾಯತಿಯ ಇತರೆ ಎಲ್ಲಾ ಸದಸ್ಯರು ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ S M ಸುಮಾ, G S ಪ್ರಶಾಂತ್ ಕೃಷಿ ಅಧಿಕಾರಿ, ಉದಯ್ ಕುಮಾರ ಸಹಾಯಕ ತಾಂತ್ರಿಕ ವ್ಯೆವಸ್ಥಾಪಕರು ಆತ್ಮ ಯೋಜನೆ, ಶ್ರೀಮತಿ ಮಾಲತಿ (NRLM ತಾಲ್ಲೂಕು ಪಂಚಾಯತ್) ಉಪಸ್ಥಿತರಿದ್ದರು.
ಸಿದ್ಧಾಪುರ ಹಾರ್ಸಿಕಟ್ಟಾ ಗಜಾನನ ಉತ್ಸವ ಸಮಿತಿಯ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದಲ್ಲಿ ನರೆದ ಮಹಿಳೆಯರಿಗೆ ಶುಭ ಕೋರಲಾಯಿತು. ನಂತರ
ಸುಧಾ ಹೆಗಡೆ ( ಕರ್ನಾಟಕ ರೈತ ಸಂಘ ಹಸಿರು ಸೇನೆ ತಾಲೂಕ ಮಹಿಳಾ ಅಧ್ಯಕ್ಷರು) ಮುಂದಾಳತ್ವದಲ್ಲಿ 11-30 ಗಂಟೆಗೆ ಮೆರವಣಿಗೆಯಲ್ಲಿ ಹೊರಟು ಆರೋಪಿಯೊಬ್ಬರಿಗೆ ಜಾಮೀನು ನೀಡಿರುವುದನ್ನು ಖಂಡಿಸಲಾಯಿತು. ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ಆಗಬೇಕು, ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕ್ರಮ ಆಗಬೇಕು ಎಂಬ ಘೋಷಣೆ ಕೂಗುತ್ತಾ ಗ್ರಾಮ ಪಂಚಾಯತ್ ಕಚೇರಿಗೆ ಬಂದು ಸೇರಿದ್ದ ಜನರನ್ನು ಉದ್ದೇಶಿಸಿ
ರೈತ ಸಂಘದ ತಾಲೂಕು ಅಧ್ಯಕ್ಷ ವೀರಭದ್ರ ನಾಯಕ ಮಾತನಾಡಿ
🔷ಈ ಘಟನೆಯಿಂದಾಗಿ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸಿಗೆ ಧಕ್ಕೆಯಾಗಿದೆ
🔷ಹೆಣ್ಣುಮಕ್ಕಳು ಒಬ್ಬಂಟಿಯಾಗಿ ತಿರುಗಾಡಲು ಭಯಭೀತರಾಗಿದ್ದಾರ
ಗುಡ್ಡಗಾಡು ಪ್ರದೇಶದ ಈ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ.
🔷ದೌರ್ಜನ್ಯ ಎಸಗಿದವರು ಮೇಲೆ ಸೂಕ್ತ ತನಿಖೆಯಿಂದ ಶಿಕ್ಷೆ ಆಗಬೇಕು ಎಂದರು.
🔷ಸರಿಯಾದ ಸಂಸ್ಕಾರ ಇಲ್ಲದೆ ಇಂದಿನ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗಿ ಇಂಥ ಘಟನೆಗಳು ನಡೆಯುತ್ತವೆ
🔷ತಾಯಂದಿರು ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಾಗಬೇಕು
ಮಹಿಳೆಯರು ಸ್ವಯಂ ರಕ್ಷಣೆ ಕಲಿತು ಇಂತಹ ಕೃತ್ಯಗಳನ್ನು ತಡೆಗಟ್ಟುವಲ್ಲಿ ಮುಂದಾಗಬೇಕು-ಕೆರಿಯಪ್ಪ ನಾಯ್ಕ ( ದೊಡ್ಮನೆ ಜಿಲ್ಲಾ ಪಂಚಾಯತ್ ಕ್ಷೇತ್ರದ ರೈತ ಸಂಘದ ಅಧ್ಯಕ್ಷರು)
🔷ಇಂಥ ಘಟನೆ ಮುಂದಿನ ದಿನಗಳಲ್ಲಿ ಮರುಕಳಿಸುವಂತೆ ಆಗಬಾರದು. ಮಹಿಳೆಯರು ಬಲಹೀನರಾಗದೆ ಧೈರ್ಯದಿಂದ ಇಂಥ ಘಟನೆಗಳ ವಿರುದ್ಧ ಎದುರಿಸಿ ಹೋರಾಡುವಂತೆ ಆಗಬೇಕು- ಶ್ರೀಮತಿ ವಿದ್ಯಾ ಪ್ರಕಾಶ್ ನಾಯ್ದ ( ಅಧ್ಯಕ್ಷರು ಗ್ರಾಮ ಪಂಚಾಯತ ಹಾರ್ಸಿಕಟ್ಟಾ)
🔷ಈ ರೀತಿ ಘಟನೆಗಳು ಮುಂದಿನ ದಿನಗಳಲ್ಲಿ ಸಂಭವಿಸಬಾರದು. ನಮ್ಮ ಗುಡ್ಡಗಾಡು ಪ್ರದೇಶದಲ್ಲಿ ಮಹಿಳೆಯರು ಒಂಟಿಯಾಗಿ ತಿರುಗಾಡುವುದು ಸಾಮಾನ್ಯ ಆಗಿದೆ ಮುಂದಿನ ದಿನಗಳಲ್ಲಿ ಇಂತಹ ಘಟನೆಯಾದರೆ ಇದಕ್ಕೆ ಹೊಣೆ ಯಾರು?
🔷ಸುಳ್ಳು ಸುದ್ದಿಗಳಿಗೆ ಯಾರು ಕಿವಿ ಕೊಡಬಾರದು.-ಶ್ರೀಮತಿ ಸುಧಾ ಹೆಗಡೆ ( ಕರ್ನಾಟಕ ರೈತ ಸಂಘ ಹಸಿರು ಸೇನೆ ತಾಲೂಕ ಅಧ್ಯಕ್ಷರು)
ಮಾನ್ಯ ಮುಖ್ಯಮಂತ್ರಿಗಳಿಗೆ ಸಂಬೋಧಿಸಿದ ಮನವಿಯನ್ನು ರಾಜೇಶ್ ನಾಯ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾರ್ಸಿಕಟ್ಟ ರವರಿಗೆ ನೀಡಿ ಶಾಂತರೀತಿಯಿಂದ ಹೋಗಿರುತ್ತಾರೆ
ಈ ವೇಳೆಯಲ್ಲಿ ಶ್ರೀ ಸುರೇಶ ನಾಯ್ಕ ( ರೈತ ಸಂಘದ ಸಂಘಟನೆ ಅಧ್ಯಕ್ಷರು) ಪದ್ಮಾಕರ್ ನಾಯ್ಕ( ರೈತ ಸಂಘದ ಖಜಾಂಚಿ ಗಳು) NRLM ಒಕ್ಕೂಟದ ಮಹಿಳಾ ಸದಸ್ಯರು ಸೇರಿದಂತೆ ಸುಮಾರು 60ರಿಂದ 70 ಜನರು ಹಾಜರಿದ್ದರು.
ರಾಜ್ಯ ಬಜೆಟ್ 2021-2022: ಮಹಿಳೆಯರಿಗೆ ಸಿಎಂ ಯಡಿಯೂರಪ್ಪ ಭರ್ಜರಿ ಗಿಫ್ಟ್
2021-2022ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಬೆಂಗಳೂರು: 2021-2022ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡುತ್ತಿರುವ ಯಡಿಯೂರಪ್ಪ ಅವರು ಮಹಿಳೆಯರಿಗೆ ವಿಶೇಷವಾದ ಯೋಜನೆಗಳನ್ನು ಘೋಷಿಣೆ ಮಾಡಿದ್ದಾರೆ. ಇದಕ್ಕಾಗಿ ಒಟ್ಟಾರೆ ರೂ.37,188 ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.
ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿರುವ ಅಂಗನವಾಡಿಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಉನ್ನತೀಕರಣ, ಜಿಲ್ಲಾ ಕೇಂದ್ರಗಳಲ್ಲಿ ತಲಾ ಎರಡು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಶಿಶು ಪಾಲನಾ ಕೇಂದ್ರ ತೆರೆಯಲು ಕ್ರಮ, ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ.4ರ ರಿಯಾಯಿತಿ ಬಡ್ಡಿದರಲ್ಲಿ ಮಹಿಳಾ ಅಭಿವೃದ್ಧಿ ನಿಗಮ/ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ರೂ.2 ಕೋಟಿ ವರೆಗೆ ಸಾಲ ಸೌಲಭ್ಯ.
ಸಂಜೀವಿನ ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಆರು ಸಾವಿರ ಸಣ್ಣ ಉದ್ಯಮ ಸ್ಥಾಪನೆಗೆ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಬೆಂಬಲ, 60 ಸಾವಿರ ಮಹಿಳೆಯರಿಗೆ ಅನುಕೂಲ, ಮಹಿಳೆಯರ ಸಣ್ಣ ಉದ್ಯಮಗಳಿಗೆ ತಾಂತ್ರಿಕ ನೆರವು 2,260 ಕಿರು ಉದ್ದಿಮೆಗಳ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನ, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ವಿಭಾಗ ಮಟ್ಟದಲ್ಲಿ ವಾರ್ಷಿಕ ಮೇಳ ಆಯೋಜನೆ ಹಾಗೂ ಇ-ಮಾರುಕಟ್ಟೆ ಸೌಲಭ್ಯ ಜಾರಿ.
ಬೆಂಗಳೂರಿನಲ್ಲಿ ಗಾರ್ಮೆಂಟ್ ಉದ್ಯಮದ ಮಹಿಳಾ ಕಾರ್ಮಿಕರಿಗೆ ರೂ.30 ಕೋಟಿ ವೆಚ್ಚದಲ್ಲಿ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ವನಿತಾ ಸಂಗಾತಿ ಯೋಜನೆಗೆ ಚಾಲನೆ, ಮಹಿಳೆಯರು ಉದ್ಯೋಗ ಕೈಗೊಳ್ಳಲು ಪೂರಕ ವಾತಾವರಣ ನಿರ್ಮಾಣಕ್ಕಾಗಿ ವಿವಿಧ ನಿಯಾಮಾವಳಿಗಳ ಮರು ಪರಿಶೀಲನೆ, ಮಹಿಳಾ ಆಯವ್ಯಯ ಮತ್ತು ಮಕ್ಕಳ ಆಯವ್ಯಯವನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಳವಡಿಸಲು ಕ್ರಮ.
ಸೇಫ್ ಸಿಟಿ ಯೋಜನೆಯಡಿ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಕ್ಯಾಮೆರಾ ಅಳವಡಿಕೆ, ತಂತ್ರಜ್ಞಾನ ಆಧಾರಿತ ಇ-ಬೀಟ್ ಮೂಲಕ ರಾತ್ರಿ ಗಸ್ತನ್ನು ತೀವ್ರಗೊಳಿಸಲು ಕ್ರಮ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡಲು ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದೊಂದಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸನ್ಸ್ ಪಡೆದ ಮಹಿಳೆಯರಿಗೆ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ, ಅಂಗಡಿ ಗೋದಾಮುಗಳ ಹಂಚಿಕೆಯಲ್ಲಿ ಶೇ.10ರಷ್ಟು ಮೀಸಲಾತಿ, ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ 6 ತಿಂಗಳ ಮಕ್ಕಳ ಆರೈಕೆ ರಜೆ ಸೌಲಭ್ಯ, ಮಹಿಳಾ ವಾಣಿಜ್ಯೋದ್ಯಮಿಗಳನ್ನು ಬೆಂಬಲಿಲಸು ಐದು ಕೋಟಿ ವೆಚ್ಚದಲ್ಲಿ ಇಡಬ್ಯೂಇ ಕಾರ್ಯಕ್ರಮ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. (kpc)