

ಸಿದ್ಧಾಪುರ ತಾಲೂಕಿನ ಹೇರೂರು ಹೆಗ್ಗರಣಿ ಮಧ್ಯೆ ಹೆಗ್ಗಾರಬೈಲ್ ಎನ್ನುವ ಪ್ರದೇಶದಲ್ಲಿ ಬೋಲೇರೋ ವಾಹನದಿಂದ ಅಪಘಾತ ಪಡಿಸಿ ವಿದ್ಯಾರ್ಥಿನಿ ಸಹನ ಪಟಗಾರ ಎನ್ನುವ ಬಾಲಕಿಗೆ ಗಂಭೀರ ಗಾಯಗೊಳಿಸಿದ ವೆಂಕಟ್ರಮಣ ನಾಯ್ಕ ಎನ್ನುವವರ ಮೇಲೆ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡ್ಯ: ನೀನ್ಯಾರೆ ನನಗೆ ಹೊಡೆಯೋಕೆ, ಮಹಿಳಾ ಪಿಎಸ್ಐ ವಿರುದ್ಧ ಯುವತಿ ವಾಗ್ವಾದ; ವಿಡಿಯೋ ವೈರಲ್!
ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ದ್ವಿಚಕ್ರ ವಾಹನ ದಾಖಲೆ ತಪಾಸಣೆ ವೇಳೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್ಐ ಸವಿತಾಗೌಡ ಪಾಟೀಲ್ ಯುವತಿಯೋರ್ವಳಿಗೆ ಕಪಾಳಕ್ಕೆ ಹೊಡೆದಿದ್ದಾರೆ.

ಮಂಡ್ಯ: ಮಂಡ್ಯದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ದ್ವಿಚಕ್ರ ವಾಹನ ದಾಖಲೆ ತಪಾಸಣೆ ವೇಳೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್ಐ ಸವಿತಾಗೌಡ ಪಾಟೀಲ್ ಯುವತಿಯೋರ್ವಳಿಗೆ ಕಪಾಳಕ್ಕೆ ಹೊಡೆದಿದ್ದಾರೆ.
ತನ್ನ ದ್ವಿಚಕ್ರ ವಾಹನ ತಡೆದ ಪೊಲೀಸರಿಗೆ ಯುವತಿ ನನ್ನ ಸ್ಕೂಟರ್ ಅನ್ನು ಯಾಕೆ ಮುಟ್ತಿದ್ದೀರಾ ಎಂದು ಆವಾಜ್ ಹಾಕಿದ್ದಾಳೆ. ಅಲ್ಲದೆ ಸ್ಕೂಟರ್ ಮೇಲೆ ಕುಳಿತೇ ನಾನ್ ಗಾಡಿಯನ್ನು ಯಾಕೆ ಕೊಡಲಿ ಎಂದು ಪ್ರಶ್ನಿಸಿದ್ದಾಳೆ. ಸ್ಕೂಟರ್ ನಿಂದ ಇಳಿಯಮ್ಮ ನಿನ್ನ ಹೆಸರೇನು? ನಿಮ್ಮ ತಂದೆಯನ್ನು ಕರೆಸು. ಠಾಣೆಗೆ ಬಾ ಎಂದು ಸವಿತಾಗೌಡ ಪಾಟೀಲ್ ಸೂಚಿಸಿದ್ದಾರೆ.

https://imasdk.googleapis.com/js/core/bridge3.446.1_en.html#goog_110053524

ಈ ವೇಳೆ ನನಗೆ ತಂದೆಯಿಲ್ಲ. ನಾನು ಯಾರನ್ನು ಠಾಣೆಗೆಗ ಕರೆಸುವುದಿಲ್ಲ ಎಂದು ದುರಂಕಾರದ ಮಾತುಗಳನ್ನು ಆಡಿದ್ದಾಳೆ. ಈ ವೇಳೆ ತಾಳ್ಮೆ ಕಳೆದುಕೊಂಡ ಸವಿತಾಗೌಡ ಯುವತಿಯ ಕಪಾಳಕ್ಕೆ ಹೊಡೆದಿದ್ದಾರೆ.
ಕಪಾಳಮೋಕ್ಷ ಆಗುತ್ತಿದ್ದಂತೆ ರೊಚ್ಚಿಗೆದ್ದ ಯುವತಿ ನೀನ್ಯಾರೆ ನನಗೆ ಹೊಡೆಯೋಕೆ, ನಿನಗೆ ಯಾರು ಅಧಿಕಾರ ಕೊಟ್ಟಿದ್ದು ಎಂದೆಲ್ಲಾ ಪ್ರಶ್ನಿಸಿದ್ದಾಳೆ. ಇನ್ನು ಒಂದು ಹೆಜ್ಜೆ ಹೋಗಿ ಯುವತಿ ಪಿಎಸ್ ಐಗೆ ಅನ್ ಎಜುಕೇಟೆಡ್ ಬ್ರೂಟ್ ಎಂದು ಯುವತಿ ಬೈದಿದ್ದಾಳೆ. ಇದನ್ನೆಲ್ಲಾ ಪೊಲೀಸರು ವಿಡಿಯೋ ಮಾಡಿಕೊಂಡಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ. (kpc)

