

ಸಿದ್ದಾಪುರ: ಇಲ್ಲಿಯ ಶ್ರೀ ಸಂಸ್ಥಾನ ತರಳೀಮಠ ವತಿಯಿಂದ 33ನೇ ವರ್ಷದ 1008 ಶ್ರೀ ಸತ್ಯ ನಾರಾಯಣ ವೃತ ಕಳಸ ಪೂಜಾ ಕಾರ್ಯಕ್ರಮ ಮಾರ್ಚ್ 11 ರಂದು ಗುರುವಾರ ಮಹಾ ಮಹಾಶಿವರಾತ್ರಿ ಪರ್ವದ ದಿನದಂದು ನಡೆಯಲಿದೆ.
ಇಂದು ಆಡಳಿತ ಕಮಿಟಿ ಮತ್ತು ವೃತ್ತ ಕಮಿಟಿಯವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಮಧ್ಯಾಹ್ನ 12ಗಂಟೆಗೆ ನಡೆಯುವ ಧರ್ಮಸಭೆಯ ಮಿರ್ಜಾನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್ಯ ಈಡಿದ ಸಂಘದ ಸಂಚಾಲಕರಾದ ರಾಘವೇಂದ್ರ ಗೌಡ, ಅತಿಥಿಗಳಾಗಿ ಸಿದ್ದಾಪುರ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಮತಿ ಸುಮಾ ಎಸ್ ಎಂ. ಸಶಿರಸಿ ಕೆನರಾ ಬ್ಯಾಂಕ್ ಮ್ಯಾನೇಜರ್ ಮನೋಜ ಸಿ ನಾಯ್ಕ, ಬೆಂಗಳೂರು ನಿಭಾ ಪೌಂಡೇಶನ್ ಅಧ್ಯಕ್ಷರಾದ ಪ್ರಕಾಶ ಎಂ. ಗೌರವ ಉಪಸ್ಥಿತರಾಗಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಂಗಲ ವಸಂತ ನಾಯ್ಕ, ನಾಗರಾಜ ನಾಯ್ಕ ಬೇಡ್ಕಣಿ, ಹಾರ್ಸಿಕಟ್ಟಾ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಧ್ಯಾ ಪ್ರಕಾಶ ನಾಯ್ಕ ಉಪಸ್ಥಿತರಿರುವರು.
ಗುರುವಾರ ಬೆಳಗ್ಗೆ 8 ರಿಂದ 10 ಗಂಟೆ ವರೆಗೆ ಕಳಶ ಗಳಲ್ಲಿ ಜಲ ತುಂಬುವುದು 10 ಗಂಟೆಗೆ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಕಥಾನಿರೂಪಣೆ ,12 ಘಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ,ಅನ್ನಸಂತರ್ಪಣೆ 2-30 ರಿಂದ ಧರ್ಮ ಸಭೆ,ಪ್ರತಿಭಾ ಪುರಸ್ಕಾರ ನಡೆಯಲಿದೆ ಸಂಜೆ 6.30 ರಿಂದ ಶಿವರಾತ್ರಿ ಪ್ರಯುಕ್ತ ಮಕ್ಕಳಿಂದ ಮನರಂಜನೆ ಕಾರ್ಯಕ್ರಮಗಳು ರಾತ್ರಿ 9.30 ರಿಂದ ನಾಟಕ ಪ್ರದರ್ಶನ ಗೊಳ್ಳಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎನ್ ಡಿ ನಾಯ್ಕ, ವೃತ್ತ ಸಮಿತಿ ಅಧ್ಯಕ್ಷ ರಾಜೇಶ ನಾರಾಯಣ ನಾಯ್ಕ ಕತ್ತಿ ಕೋಲಶಿರ್ಸಿ, ಆಡಳಿತ ಮಂಡಳಿ ಕಾರ್ಯದರ್ಶಿ ದೀಪಕ ಮಹಾಬಲೇಶ್ವರ ನಾಯ್ಕ ತರಳಿ, ವೃತ್ತ ಸಮಿತಿ ಕಾರ್ಯದರ್ಶಿ ರವಿಕುಮಾರ ಈಶ್ವರ ನಾಯ್ಕ ಕೋಲಸಿರ್ಸಿ, ನಾರಾಯಣ ಅವರಗುಪ್ಪ, ಜಿ ಐ ನಾಯ್ಕ ಹೊಸೂರ,ಗಜಾನನ ನಾಯ್ಕ ಮಾಗಡಿ ಉಪಸ್ಥಿತರಿದ್ದರು.




