Today, s spl- ಹೊರಟ್ಟಿ ಗರಂ, ಕಿಲಾರ್ ಬಸ್ ಪುನರಾರಂಭ, ನಾಳೆ ಕಾರ್ಯಕ್ರಮ

ಸಿದ್ದಾಪುರ ಹಾರ್ಸಿಕಟ್ಟಾ, ಹಾಲ್ಕಣಿ ಶಿರಸಿ ಮಾರ್ಗವಾಗಿ ಬಸ್ ಸಂಚಾರ ಪುನರಾರಂಭ ವಾದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಸಿದ್ದಾಪುರ ತಾಲೂಕಿನ ಕಿಲಾರದಲ್ಲಿ ಬಸ್ ಗೆ ಪೂಜೆ ಮಾಡುವುದರ ಮೂಲಕ ಸ್ವಾಗತಿಸಿದರು.
ಕೋವಿಡ್ 19 ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಈದೀಗ ಪುನರಾರಂಭ ಗೊಂಡಿದೆ. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬರೋಬ್ಬರಿ ೧೦ ಕೀ ಮೀ ನಡೆದುಕೊಂಡು ಹೋಗಿ ಬಸ್ ಹಿಡಿದು ಶಾಲಾ ಕಾಲೇಜು ಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಿಂದ ಬೇಸತ್ತ ಸಾರ್ವಜನಿಕರು ಹಲವುಬಾರಿ ಸಾರಿಗೆ ಅಧೀಕಾರಿಗಳಿಗೆ ಮನವಿ ಸಲ್ಲಿಸಿದರು. ಕೋವಿಡ್ ಕಾರಣವೊಡ್ಡಿ ಬಸ್ ಸಂಚಾರ ಸಧ್ಯಕ್ಕೆ ಕಷ್ಟಸಾಧ್ಯ ಮುಂದಿನ ದಿನಗಳಲ್ಲಿ ಖಂಡಿತ ಸಾರಿಗೆ ಸಂಚಾರ ಆರಂಭ ಮಾಡುತ್ತೇವೆ ಎಂದು ಅಧೀಕಾರಿಗಳು ಹೇಳಿದ್ದರು.
ಕಳೆದ ಒಂದು ವಾರದ ಹಿಂದೆ ಮತ್ತೆ ಸಾರಿಗೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿಯನ್ನು ಸಾರ್ವಜನಿಕರು ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಾರಿಗೆ ಸಂಸ್ಥೆ ಅಧೀಕಾರಿಗಳು ಮುಂಜಾನೆ ಸಿದ್ದಾಪುರ ಹಾರ್ಸಿಕಟ್ಟಾ ಕಾನಸೂರು ಮಾರ್ಗ ವಾಗಿ ಶಿರಸಿಗೆ ಹಾಗೂ ಸಾಯಂಕಾಲ ಶಿರಸಿ ಕಾನಸೂರು ಹಾರ್ಸಿಕಟ್ಟಾ ಮಾರ್ಗ ವಾಗಿ ಸಿದ್ದಾಪುರಕ್ಕೆ ಸಾರಿಗೆ ಸಂಚಾರ ವನ್ನು ಪುನರಾರಂಭ ಗೊಳಿಸಿದ್ದಾರೆ. ತಮ್ಮೂರಿಗೆ ಸಾರಿಗೆ ಸಂಚಾರ ಆರಂಭ ವಾದ ಹಿನ್ನೆಲೆಯಲ್ಲಿ ಬಸ್ ಗೆ ಪೂಜೆ ಸಲ್ಲಿಸಿ ಸಾರ್ವಜನಿಕರು ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಕಿಲಾರ ಹಕ್ಲಮನೆ ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಿದ್ದಾಪುರ
ತಾಲೂಕಿನ ಹೆಗ್ಗರಣಿ-ಉಂಚಳ್ಳಿ ಸಮೀಪದ ಚಾರೆ ಶ್ರೀ ವಿರೂಪಾಕ್ಷ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾ.11 ಹಾಗೂ 12ರಂದು ಅವನಿಚಾರೋತ್ಸವ-2021 ನಡೆಯಲಿದೆ.
ಮಾ.11ರಂದು ಮಹಾಶಿವರಾತ್ರಿ ಅಂಗವಾಗಿ ಸೂರ್ಯೋದಯದಿಂದ ಮರುದಿನ ಸೂರ್ಯೋದಯದ ಪರ್ಯಂತ ಅಖಂಡ ರುದ್ರ ಪಠಣ, ಅಭಿಷೇಕ, ಅರ್ಚನೆ, ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನೆ.
ಮಾ.12ರಂದು ಬೆಳಗ್ಗೆ ಮಹಾರುದ್ರ ಹವನ ಹಾಗೂ ಸಂತರ್ಪಣೆ ಮಧ್ಯಾಹ್ನ 3ರಿಂದ ಋತ್ವಿಜರಿಂದ ಆಶೀರ್ವಚನ ನಡೆಯಲಿದೆ.

ಕಲಾಪ ಆರಂಭದಲ್ಲೇ ಸಭಾಪತಿ ಗರಂ, ಕೋರಂ ಕೊರತೆ ಹಿನ್ನೆಲೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಆಡಳಿತ ಪಕ್ಷದ ಮುಖ್ಯ ಸಚೇತಕರು, ಸಚಿವರು ಹಾಗೂ ಸದಸ್ಯರು ಅನುಪಸ್ಥಿತಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಗರಂ ಆಗಿ, ವಿಧಾನ ಪರಿಷತ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

Basavaraj Horatti,

ಬೆಂಗಳೂರು: ಆಡಳಿತ ಪಕ್ಷದ ಮುಖ್ಯ ಸಚೇತಕರು, ಸಚಿವರು ಹಾಗೂ ಸದಸ್ಯರು ಅನುಪಸ್ಥಿತಿಗೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಗರಂ ಆಗಿ, ವಿಧಾನ ಪರಿಷತ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ.

ಭೋಜನ ವಿರಾಮದ ಬಳಿಕ ಕಲಾಪ ಸೇರುತ್ತಿದ್ದಂತೆ ಆಡಳಿತ ಹಾಗೂ ಪ್ರತಿ ಪಕ್ಷ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಎಲ್ಲಾ ಪಕ್ಷದ ಸಚೇತಕರು ಅನುಪಸ್ಥಿತರಿದ್ದರು. ಸಚಿವರೂ ಇರದ ಹಿನ್ನೆಲೆ ಬಜೆಟ್ ಮೇಲಿನ ಚರ್ಚೆಗೆ ವೀಕ್ಷಕರ ಕೊರತೆ ಕಾಡಿತು. ಹಲವು ಸದಸ್ಯರು ಸೋಮವಾರಕ್ಕೆ ಮುಂದೂಡುವಂತೆ ಒತ್ತಾಯಿಸಿದರು. ಸಭಾಪತಿಗಳು ಹತ್ತು ನಿಮಿಷ ಮುಂದೂಡಬೇಕು ಇಲ್ಲವೇ ಸೋಮವಾರಕ್ಕೆ ಮುಂದೂಡಬೇಕು. ಎರಡೇ ಆಯ್ಕೆ ಇರುವುದು ಎಂದಾಗ ಪ್ರತಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಅವರು ಕಾರಣ ನೀಡಿ ಕಲಾಪ ಮುಂದೂಡಿ ಎಂದು ಮನವಿ ಮಾಡಿದರು. 

ಅಷ್ಟರಲ್ಲೇ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆಗಮಿಸಿ ಎಲ್ಲಾ ಸದಸ್ಯರಿಗೂ ಕರೆ ಮಾಡಿದ್ದೇನೆ, ಬರುತ್ತಿದ್ದಾರೆ ಎಂದು ವಿವರಿಸಿದರು. ಪ್ರತಿಪಕ್ಷ ನಾಯಕರು ಸೇರಿದಂತೆ ಬಹುತೇಕ ಸದಸ್ಯರು ಸೋಮವಾರ ಬೆಳಗ್ಗೆ ಕಲಾಪ ಸಮಾವೇಶಗೊಂಡರೆ ಅನುಕೂಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಭಾಪತಿಗಳು ಆಡಳಿತ ಪಕ್ಷದ ಸದಸ್ಯ ರವಿಕುಮಾರ್ ಅಭಿಪ್ರಾಯ ಕೇಳಿದರು.

ವಿಧಾನಸಭೆ ಕಲಾಪ ಸಹ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ನಾಳೆ ಶಿವರಾತ್ರಿ ಇರುವ ಹಿನ್ನೆಲೆ ಬಹುತೇಕ ಸದಸ್ಯರು ತಮ್ಮ ಊರಿಗೆ ತೆರಳಿದ್ದಾರೆ. ಸದಸ್ಯರು ಬರುವುದು ಅನುಮಾನ ಎಂದು ರವಿಕುಮಾರ್ ವಿವರಿಸಿದರು.

ಬಿಎಸಿ ಸಭೆ ನಿರ್ಣಯ ಪ್ರಕಟ
ಮಾರ್ಚ್ 15ರಿಂದ 26ರವರೆಗೆ ಪ್ರತಿನಿತ್ಯ ಕೈಗೊಳ್ಳುವ ಚರ್ಚೆಗಳ ಕುರಿತು ಹಾಗೂ ಬೆಳಗಿನ ಹೊತ್ತು ಪ್ರಶ್ನೋತ್ತರ ಅವಧಿ ಹಾಗೂ ಸಂಜೆಯ ಅವಧಿಯಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಸುವ ಕುರಿತು ನಿರ್ಧಾರ ಸೇರಿದಂತೆ ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸಭಾಪತಿ ಬಸವರಾಜ್ ಹೊರಟ್ಟಿ ಸದನಕ್ಕೆ ಮಾಹಿತಿ ನೀಡಿದರು.

ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಇಂದು ಸಂಜೆ 4 ಗಂಟೆಯವರೆಗೆ ಕಲಾಪ ನಡೆಸಬೇಕಿತ್ತು. ಆದರೆ ಸದಸ್ಯರ ಕೊರತೆ ಕಾಡಿದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲು ಮನವಿ ಮಾಡಿದರು. ಇದಕ್ಕೆ ಸಮ್ಮತಿ ಸೂಚಿಸಿದ ಸಭಾಪತಿ ಬಸವರಾಜ ಹೊರಟ್ಟಿ ವಿಧಾನಪರಿಷತ್ ಕಲಾಪವನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

abc

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

abc

Recommended For You

About the Author: Kanneshwar Naik

Leave a Reply

Your email address will not be published. Required fields are marked *