
ಶಿವರಾಜ್‌ಕುಮಾರ್ ಮತ್ತು ನಿರ್ದೇಶಕ ಹರ್ಷ ಶಿವಣ್ಣನ 125ನೇ ಸಿನಿಮಾಗಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ತಿಳಿದಿದೆ. ಇಂದಿನ ಹೊಸ ವಿಷಯವೆಂದರೆ ಈ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ.

ಶಿವರಾಜ್‌ಕುಮಾರ್ ಮತ್ತು ನಿರ್ದೇಶಕ ಹರ್ಷ ಶಿವಣ್ಣನ 125ನೇ ಸಿನಿಮಾಗಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ತಿಳಿದಿದೆ. ಇಂದಿನ ಹೊಸ ವಿಷಯವೆಂದರೆ ಈ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ “ವೇದ” ಎಂದು ಹೆಸರಿಡಲಾಗಿದೆ ಮತ್ತು “ದಿ ಬ್ರೂಟಲ್ 1960” ಎಂದು ಟ್ಯಾಗ್ ಲೈನ್ ಸಹ ಕೊಡಲಾಗಿದೆ. ಮಹಾಶಿವರಾತ್ರಿಯ ದಿನವಾದ ಗುರುವಾರ ಬೆಳಿಗ್ಗೆ ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಶಿವರಾಜ್‌ಕುಮಾರ್ ಹೋಮ್ ಬ್ಯಾನರ್ ನಿರ್ಮಾಣದ ಮೊದಲ ಚಲನಚಿತ್ರ ಇದಾಗಿದ್ದು ಮೂಲವೊಂದರ ಪ್ರಕಾರ, ಶಿವರಾತ್ರಿಯ ಸಂದರ್ಭದಲ್ಲಿ ಸರಳ ಪೂಜೆ ಮತ್ತು ಪೋಸ್ಟರ್ ಬಿಡುಗಡೆಯೊಂದಿಗೆ ಇದರ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ.
1960 ರ ದಶಕದ ಕಥಾವಸ್ತುವನ್ನು ಈ ಸಿನಿಮಾ ಹೊಂದಿರಲಿದೆ ಎಂದು ಚಿತ್ರದ ಟ್ಯಾಗ್ ಲೈನ್ ಸುಳೀವು ನೀಡುತ್ತಿದೆ. ಹಳ್ಳಿಯ ಕಥಾನಕ ಇದಾಗಿದ್ದು ಈ ಚಿತ್ರದ ಮೂಲಕ ನಟ-ನಿರ್ದೇಶಕ ಜೋಡಿ ನಾಲ್ಕನೇ ಬಾರಿ ಒಟ್ಟಿಗೆ ಸೇರುತ್ತಿದೆ. ಈ ಹಿಂದೆ “ವಜ್ರಕಾಯ”, “ಭಜರಂಗಿ” ಹಾಗೂ ಇನ್ನೂ ಬಿಡುಗಡೆಯಾಗಬೇಕಿರುವ “ಭಜರಂಗಿ 2” ಚಿತ್ರದಲ್ಲಿ ಇವರು ಒಂದಾಗಿ ಕೆಲಸ ಮಾಡಿದ್ದಾರೆ.
ಸೆಂಚುರಿ ಸ್ಟಾರ್ ಶಿವಣ್ಣ ಸಧ್ಯ “ಶಿವಪ್ಪ” ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರವು ಪ್ರಸ್ತುತ ಚಿತ್ರೀಕರಣ ಹಂತದಲ್ಲಿದೆ. ತಂಡವು ತಮ್ಮ ಎರಡನೇ ಶೆಡ್ಯೂಲ್ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಅವರ ಮುಂದಿನ ಮತ್ತು 124 ನೇ ಚಿತ್ರ ಲೇಖಕರೂ ಆದ ನಿರ್ದೇಶಕ ರಾಮ್ ಧುಲಿಪುಡಿ ಅವರದ್ದಾಗಿದ್ದು ಹರ್ಷ ಜತೆಗಿನ ಸಿನಿಮಾ ಈ ವರ್ಷ ಜೂನ್ ಅಥವಾ ಜುಲೈನಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ.
