

ಸಿದ್ದಾಪುರ: ದೇಶ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ದೇಶವನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದ ವೋಟು ಕೊಟ್ಟವರು ತಿರುಗಿಬಿದ್ದಿದ್ದಾರೆ. ಜನರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಆರ್. ಎಚ್. ನಾಯ್ಕ ಹೇಳಿದರು. ಅವರು ತಾಲೂಕಾ ಸೇವಾದಳದ ಅಧ್ಯಕ್ಷರಾಗಿ ಆಯ್ಕೆಯಾದ ಗಾಂಧೀಜಿ ನಾಯಕ್ ರವರಿಗೆ ಅಧಿಕಾರ ಪತ್ರ ಹಸ್ತಾಂತರಿಸಿ ಮಾತನಾಡಿದರು.
ಅವರು ತಾಲೂಕ ಸೇವಾದಳದ ಸಿದ್ದಾಪುರ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಗಾಂಧೀಜಿ ರವರಿಗೆ ಅಧಿಕಾರ ಪತ್ರ ಹಸ್ತಾಂತರಿಸಿದ ನಂತರ ಸಮಾಜಮುಖಿಯೊಂದಿಗೆ ಮಾತನಾಡಿ,
ಸೇವಾದಳ ಕಾಂಗ್ರೆಸ್ ಭದ್ರ ಬುನಾದಿಯಾಗಿದೆ ನಮ್ಮ ನಾಯಕರುಗಳಲ್ಲಿ ವೈಮನಸ್ಸಿಲ್ಲ ಭಿನ್ನಾಭಿಪ್ರಾಯಗಳಿವೆ ಇದನ್ನು ಬಿಟ್ಟು ಪ್ರಮುಖರು ಒಮ್ಮತದಿಂದ ಹೋರಾಡಬೇಕಾಗಿದೆ ಜಾತಿಭೇದವಿಲ್ಲದೆ ಪಕ್ಷ ಸಿದ್ಧಾಂತದಲ್ಲಿ ನಂಬಿಕೆ ಇರುವ ಪಕ್ಷ ಕಾಂಗ್ರೆಸ್, ಕಾಂಗ್ರೆಸ್ ಪಕ್ಷಕ್ಕೆ ಸೇವಾದಳ,ಎನ್. ಎಸ್ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ,ಇಂಟೆಕ್ ಘಟಕಗಳಿಂದ ಭದ್ರಬುನಾದಿ ಇದೆ ಮುಂದಿನ ದಿನದಲ್ಲಿ ಪಕ್ಷ ಬಲಪಡಿಸಲು ಸೇವಾದಳವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದರು.
ತಾಲೂಕು ಬ್ಲಾಕ್ ಕಮಿಟಿ ಅಧ್ಯಕ್ಷ ವಸಂತ ನಾಯ್ಕ ಮನಮನೆ , ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ಹನುಮಂತ ನಾಯ್ಕ ಹೊಸೂರ್, ತಾಲೂಕು ಸೇವಾದಳದ ನೂತನ ಅಧ್ಯಕ್ಷ ಗಾಂಧೀಜಿ ನಾಯ್ಕ,ಜಿಲ್ಲಾ ಪಂಚಾಯತ್ ಸದಸ್ಯೆ ಸುಮಂಗಲ ವಸಂತ ನಾಯ್ಕ, ತಾಲೂಕು ಪಂಚಾಯತ್ ಸದಸ್ಯ ನಾಸಿರ್ ಖಾನ್ ,ಇಂಟೆಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಸುಭಾಶ್ಚಂದ್ರ ನಾಯ್ಕ, ರಾಜ್ ಕುಮಾರ ನಾಯ್ಕ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

