ಉದ್ಯಮಿಗಳು ಕೇಂದ್ರ ಸರ್ಕಾರ ನಡೆಸುತ್ತಿದ್ದಾರೆ’: ಕೇಂದ್ರದ ವಿರುದ್ಧ ರಾಕೇಶ್ ಟಿಕೈತ್ ವಾಗ್ದಾಳಿ
ಭೂಮಿಯನ್ನು ಕಸಿದುಕೊಳ್ಳುವ ಮೂಲಕ ಹಣ ಸಂಪಾದಿಸುತ್ತಿದ್ದ ಉದ್ಯಮಿಗಳಿಂದ ಕೇಂದ್ರ ಸರ್ಕಾರ ನಡೆಸಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಸಿಂಗ್…
https://www.facebook.com/samaajamukhi.net/videos/300259228144300/
ಉಪವಾಸ ಸತ್ಯಾಗ್ರಹ- ಸಿದ್ದಾಪುರ: ರಾಜ್ಯವ್ಯಾಪಿ ಅಂಗನವಾಡಿ ನೌಕರರ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹಾಗೂ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿಯ. ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. .
ಬೇಡಿಕೆಗಳು:
ಐಸಿಡಿಎಸ್ ಅಲ್ಲದ ಇತರ ಅನೇಕ ಸರ್ವೆ ಮಾಡಲು ಹಾಕಬಾರದೆಂದು, ಶಾಲಾಪೂರ್ವ ಶಿಕ್ಷಣ ಅಂಗನವಾಡಿ ಗಳಿಗೆ ಉಳಿಯಬೇಕು, ಹೊಸ ಶಿಕ್ಷಣ ನೀತಿಯ ನ್ಯೂನ್ಯ ತೆ ಸರಿಪಡಿಸಲು, ಕೇಂದ್ರ ಬಜೆಟ್ಟಿನಲ್ಲಿ ಕಡಿತವಾದ ಅನುದಾನ ರಾಜ್ಯಗಳಿಗೆ ನೀಡಲು ಮತ್ತು ರಾಜ್ಯ ಬಜೆಟ್ಟಿನ ಚರ್ಚೆಯ ಸಮಾರೋಪದೊಳಗೆ ಅಂಗನವಾಡಿ ನೌಕರರಿಗೆ ಘೋಷಿಸಬೇಕಾದ ಮಾಸಿಕ ಪಿಂಚಣಿ ಇನ್ನಿತರ ಸೌಲಭ್ಯ ನೀಡುವುದು ಹಾಗೂ ಕನಿಷ್ಟ ಕೂಲಿ ನಿರ್ಧಾರವಾಗುವ ತನಕ ಬೆಲೆ ಏರಿಕೆಗೆ ತಕ್ಕ ಗೌರವಧನ ಏರಿಸಬೇಕು ಮತ್ತು ಸೇವಾ ಜ್ಯೇಷ್ಟತೆಗೆ ಆದೇಶಿಸಿ, ಅದರ ಮೊತ್ತ ನಿರ್ದಿಷ್ಟಪಡಿಸಲು, ಮಿನಿ ಅಂಗನವಾಡಿಗಳಿಗೆ ಸಹಾಯಕಿ ನೀಡಲು ಆಗ್ರಹಿಸಿ, ಸಹಾಯಕಿ ನೀಡುವ ತನಕ ಆಹಾರ ಬೇಯಿಸಲು ಸಾಧ್ಯವಿಲ್ಲವೆಂದು, ಸಹಾಯಕಿಯರು ಹಾಗೂ ಕಾರ್ಯಕರ್ತೆಯರ ಮಧ್ಯೆಯ ಗೌರವಧನ ವ್ಯತ್ಯಾಸ ತಗ್ಗಿಸಲು ಹಾಗೂ ಮಾರ್ಚ ೪ ರಂದು ಇಲಾಖೆಯ ಸಚಿವರಿಗೆ ನೀಡಿದ ಬೇಡಿಕೆ ಪಟ್ಟಿಯನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ ಚಾಲನೆ ನೀಡಿದರು. ಸಿದ್ದಾಪುರ ತಾಲೂಕು ಸಮಿತಿ ಯ ಅಧ್ಯಕ್ಷೆ
ಸುಧಾ ಕೊಂಡ್ಲಿ , ಕಾರ್ಯದರ್ಶಿ ಶ್ರೀಮತಿ ನೇತೃತ್ವ ವಹಿಸಿದ್ದರು.
ರೇವಾ: ಭೂಮಿಯನ್ನು ಕಸಿದುಕೊಳ್ಳುವ ಮೂಲಕ ಹಣ ಸಂಪಾದಿಸುತ್ತಿದ್ದ ಉದ್ಯಮಿಗಳಿಂದ ಕೇಂದ್ರ ಸರ್ಕಾರ ನಡೆಸಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಸಿಂಗ್ ಟಿಕೈತ್ ಅವರು ಭಾನುವಾರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರೇವಾದಲ್ಲಿ ರೈತರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಟಿಕೈತ್ ಅವರು, ಈಗ ಹೊಸದಾಗಿ ಹಸಿವ ವ್ಯಾಪಾರ ಪ್ರಾರಂಭವಾಗಿದೆ. ಇದರಿಂದ ಮನುಷ್ಯರು ದಿನಕ್ಕೆ ಎರಡು ಬಾರಿ, ವರ್ಷಕ್ಕೆ 700 ಬಾರಿ ಹಸಿವಿನಿಂದ ಬಳಲುತ್ತಿದ್ದಾರೆ. ಉದ್ಯಮಿಗಳು ಆಹಾರ ಧಾನ್ಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಹಸಿವಿನ ವ್ಯಾಪಾರ ಮಾಡುತ್ತಿದ್ದಾರೆ” ಎಂದು ಟಿಕೈತ್ ಆಕ್ರೋಶ ವ್ಯಕ್ತಪಡಿಸಿದರು.
ರಾಜಸ್ಥಾನ ಮತ್ತು ಹರಿಯಾಣದ ಉದ್ಯಮಿಗಳು ಅಲ್ಪ ಮೊತ್ತಕ್ಕೆ ಭೂಮಿಯನ್ನು ಖರೀದಿಸುತ್ತಿದ್ದಾರೆ ಮತ್ತು 14 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಬೃಹತ್ ಗೋದಾಮುಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಇದಕ್ಕಾಗಿ ಕೇಂದ್ರದ ಹೊಸ ಕೃಷಿ ಕಾನೂನುಗಳು ಬಂದವು ಎಂದು ಆರೋಪಿಸಿದರು.
“ಇದರರ್ಥ ಕೇಂದ್ರದಲ್ಲಿನ ಈ ಸರ್ಕಾರವನ್ನು ಒಂದು ಪಕ್ಷ ನಡೆಸುತ್ತಿಲ್ಲ, ಉದ್ಯಮಿಗಳು ನಡೆಸುತ್ತಿದ್ದಾರೆ. ಇದು ಸಂಕಷ್ಟದಲ್ಲಿರುವ ರೈತರಿಗೆ ಮಾತ್ರ ಅಲ್ಲ, ರೈಲ್ವೆಗಳನ್ನು ಮಾರಾಟ ಮಾಡಲಾಗುತ್ತಿದೆ. ಆದರೆ ವಿರೋಧ ಪಕ್ಷ ದುರ್ಬಲವಾಗಿದ್ದು ಇದನ್ನು ವಿರೋಧಿಸಬೇಕಾದ ಯುವಕರು ನಿದ್ದೆ ಮಾಡುತ್ತಿದ್ದಾರೆ” ಎಂದು ಟಿಕೈತ್ ಹೇಳಿದ್ದಾರೆ. (kpc)