

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅವರ ಅಭಿಮಾನಿಗಳು ವೃದ್ಧರು,ಹಿರಿಯರಿಗೆ ಹಣ್ಣು-ಸಿಹಿ ನೀಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿದರು. ಹೊನ್ನಾವರದಲ್ಲಿ ಜಗದೀಪ್ ತಂಗೇರಿ,ಶಿರಸಿಯಲ್ಲಿ ಭೀಮಣ್ಣ ನಾಯ್ಕ,ಸಿದ್ಧಾಪುರದಲ್ಲಿ ಕೆ.ಜಿ.ನಾಗರಾಜ್ ಮತ್ತು ವಸಂತ್ ನಾಯ್ಕ ನೇತೃತ್ವದಲ್ಲಿ ಸರಳ ಕಾರ್ಯಕ್ರಮಗಳು ನಡೆದವು.
ಸಿದ್ಧಾಪುರ ತಾಲೂಕಾ ಆಸ್ಫತ್ರೆಯ ರೋಗಿಗಳಿಗೆ ಹಣ್ಣಗಳನ್ನು ವಿತರಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜ್ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕು ಸೇರಿದಂತೆ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ದೇಶಪಾಂಡೆಯವರ ಸೇವೆ ನಾಡಿಗೆ ನಿರಂತರವಾಗಿರಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ ದೇಶಪಾಂಡೆಯವರ ಸೇವೆಯಿಂದಾಗಿ ಜಿಲ್ಲೆ ಅಭಿವೃದ್ಧಿಯ ಮೈಲುಗಲ್ಲುಗಳನ್ನು ದಾಖಲಿಸಿದೆ ಎಂದರು.
ತಾಲೂಕಿನ ಮುಗದೂರಿನ ಅನಾಥಾಶ್ರಮಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಧುರೀಣೆ ಸುಶ್ಮಾರೆಡ್ಡಿ ಅನಾಥರಿಗೆ ನೆರವು ನೀಡುವ ಮೂಲಕ ದೇಶಪಾಂಡೆಯವರ ಹುಟ್ಟುಹಬ್ಬ ಆಚರಿಸಿದರು.




