

ಸಹಪಾಠಿಗಳೊಂದಿಗೆ ಹೊಳೆಗೆ ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಿದ್ಧಾಪುರ ತಾಲೂಕು ಕಿಲವಳ್ಳಿಯಲ್ಲಿ ನಡೆದಿದೆ.
ಸೋವಿನಕೊಪ್ಪ ಗ್ರಾಮ ಪಂಚಾಯತ್ ಕಿಲವಳ್ಳಿಗ್ರಾಮದ ದೀಪಕ ಹನುಮಂತ ಗೌಡ ಮೃತ ಬಾಲಕನಾಗಿದ್ದು ಈತ ಕಿಲವಳ್ಳಿ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಇಂದು ಮಧ್ಯಾಹ್ನ ಸ್ನೇಹಿತರೊಂದಿಗೆ ಸಮೀಪದ ಕಾನಮನೆಗುಂಡಿಗೆ ಸ್ನಾನಕ್ಕೆ ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಈ ವಿದ್ಯಾರ್ಥಿಯ ತಂದೆ ಹನುಮಂತ ವೆಂಕ ಗೌಡ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಣೆಯಾದಾತನ ಶಿಥಿಲ ಶವ ಪತ್ತೆ-….. ಇದೇ ವಾರದ ಪ್ರಾರಂಭದಲ್ಲಿ ಕಾಣೆಯಾಗಿದ್ದ ಸಿದ್ಧಾಪುರ ಕಾನಗೋಡಿನ ಈರಪ್ಪ ಚಕ್ರಸಾಲಿ ಬುಧವಾರ ಶಿಥಿಲ ಶವವಾಗಿಸ್ವಗ್ರಾಮದ ಕಾಡಿನಲ್ಲಿ ಪತ್ತೆಯಾಗಿದ್ದಾನೆ. ಅನಾರೋಗ್ಯದಿಂದ ಬಳಲುತಿದ್ದ ಈತ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.


