

ಕರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗೆ ಸರ್ಕಾರ ಒತ್ತು ನೀಡಿದೆ. ಇದರ ಅಂಗವಾಗಿ ಕರೋನಾ ಚುಚ್ಚುಮದ್ದು ನೀಡಿಕೆ,ನಿಯಮಗಳ ಜಾರಿ ಪ್ರಾರಂಭವಾಗಿದೆ. ಉತ್ತರ ಕನ್ನಡ ಜಿಲ್ಲಾಡಳಿತ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಕರೋನಾ ನಿಯಮಗಳನ್ನು ಪಾಲಿಸಲು ಜನಜಾಗೃತಿ ಜೊತೆಗೆ ದಂಡ ವಿಧಿಸುವುದನ್ನೂ ಇಂದಿನಿಂದಲೇ ಪ್ರಾರಂಭಿಸಿದೆ.
