

ಹಾಳದಕಟ್ಟಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ಕಲ್ಯಾಣ ಇಲಾಖೆ,
ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಳದಕಟ್ಟಾ, ಸಹಯಾನ ( ಡಾ ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಸಹಯೋಗದೊಂದಿಗೆ ತಾಲೂಕ ಮಟ್ಟದ ಅಸ್ಪೃಶ್ಯತೆ ಆಚರಣೆ ವಿರೋಧಿ ಜಾಗೃತಿ “ಪ್ರೀತಿ ಪದಗಳ ಪಯಣ” ನಡೆಯಿತು. ಈ ಕಾರ್ಯಕ್ರಮದಲ್ಲಿ ಎಂಜಿಸಿ ಕಾಲೇಜಿನ ಕನ್ನಡ ವಿಭಾಗದ ಡಾ. ವಿಠ್ಠಲ ಭಂಡಾರಿ ಸಂಪಾದನೆಯ ವೀಸಕ್ಕಾಗಿ ಕಾಯುವ ಜನ ( ಅಂಬೇಡ್ಕರ್ ಅವರ ಅನುಭವ ಕಥನ) ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾ ಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಸಿದ್ಧಾಪುರ ಹಿತರಕ್ಷಣಾ ಸಮಿತಿಯ ಎಚ್ಕೆ ಶಿವಾನಂದ, ಅಂಬೇಡ್ಕರ ಶಕ್ತಿ ಯುವಕ ಸಂಘದ ಅಧ್ಯಕ್ಷ ನಂದನ್ ಬೋರ್ಕರ್,ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಿ ಆಯ್ ಪರ್ನೇಕರ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಬಸವರಾಜ್ ಬಂಡೆರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ ಎಸ್ ಹೆಗಡೆ,ಎಂಜಿಸಿ ಕಾಲೇಜಿನ ಕನ್ನಡ ವಿಭಾಗದ ವಿಠ್ಠಲ ಭಂಡಾರಿ, ಪಿ ಎಸ್ ಐ ಮಹಾಂತಪ್ಪ ಕುಂಬಾರ್ ಇದ್ದರು.



ಮಹ್ಮದ ದಾನಿಶ ಶರೀಪ್ ಸಾಬ್.
ಸಿದ್ದಾಪುರ
ಮಹ್ಮದ ದಾನಿಷ್ ಶರೀಫ್ ಸಾಬ್ ಹಾರ್ಸಿಕಟ್ಟಾ ಏ.5ರಿಂದ ಪಂಜಾಬ ರಾಜ್ಯದ ಚಂಡೀಗಡದಲ್ಲಿ ನಡೆಯಲಿರುವ ರಾಷ್ಟ್ರೀಯಮಟ್ಟದ ರೋಲರ್ ಸ್ಕೆಟಿಂಗ್ ಹಾಕಿ ಪಂದ್ಯಾವಳಿಗೆ 14ವರ್ಷದೊಳಗಿನ ಬಾಲಕರ ಕರ್ನಾಟಕ ರಾಜ್ಯ ರೋಲರ್ ಸ್ಕೆಟಿಂಗ್ ಹಾಕಿ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಕೈಗಾದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಂಗಾರದ ಪದಕ ಪಡೆಯುವುದರ ಮೂಲಕ ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದಾರೆ. ಈತ ಯಲ್ಲಾಪುರದ ಮದರ್ ತೆರೆಸಾ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದು ಸ್ಥಳೀಯ ರೊಲರ್ ಸ್ಕೆಟಿಂಗ್ ಕ್ಲಬ್‍ನಲ್ಲಿ ದಿಲಿಪ್ ಹಣಬರ್ ಹಾಗೂ ಅಜಯ ಗಾವಡಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಯಲ್ಲಾಪುರದ ತಾಮೀರ್ ಕೋಆಪರೇಟಿವ್ ಬ್ಯಾಂಕ್‍ನ ವ್ಯವಸ್ಥಾಪಕ ಶರೀಫ್ ಹಸನ್ ಸಾಬ್ ಹಾರ್ಸಿಕಟ್ಟಾ ಹಾಗೂ ತೆಲಂಗಾರ ಸಹಿಪ್ರಾ ಶಾಲಾ ಶಿಕ್ಷಕಿ ಶಂಶಾದ ಶರೀಫ್ ಸಾಬ್ ಹಾರ್ಸಿಕಟ್ಟಾ ದಂಪತಿ ಪುತ್ರ.
ಸ.ಹಿ.ಪ್ರಾ.ಶಾಲೆ ಸಿದ್ದಾಪುರ ಶಿರಸಿ ಶೈಕ್ಷಣಿಕ ಜಿಲ್ಲೆ
ಸನ್ಮಾನ ಕಾರ್ಯಕ್ರಮ
ಸಿದ್ದಾಪುರ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಶ್ರೀಮತಿ ಸವಿತಾ ಶಾನಭಾಗ ದಂಪತಿಗಳಿಗೆ (ಶ್ರೀ ತಮ್ಮಣ್ಣ ಬೀಗಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು) ಮತ್ತು ಸಾಮಾಜಿಕ ಸೇವಾಕಾರ್ಯ ನಿರ್ವಹಿಸಿದ ಶ್ರೀ ವಿಜಯ್ ಪೋಸ್ಟಮಾಸ್ಟರ್ ಸಿದ್ದಾಪುರರಿಗೆ ಸನ್ಮಾನ ಕಾರ್ಯಕ್ರಮ ನಡೆಸಿದರು. ಶಾಲೆಯ ಮುಖ್ಯಾಧ್ಯಾಪಕಿ ನೇತ್ರಾವತಿ ನಾಯ್ಕರವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಹೆಗಡೆ ಶಿಕ್ಷಣ ಸಂಯೋಜಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿದ್ದಾಪುರ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನೂತನ ಅಧ್ಯಕ್ಷ ಸತೀಶ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾಪುರ ಕ್ಲಸ್ಟರಿನ ಅರ್ಜುನ್ ಚೌಹಾಣರವರು ಅತಿಥಿಗಳಾಗಿ ಆಗಮಿಸಿ ಅನಿಸಿಕೆ ವ್ಯಕ್ತಪಡಿಸಿದರು. ಕುಮಾರಿ ಚಿನ್ಮಯಿ ಹಾಗೂ ಕುಮಾರಿ ಸಮಹೀರಾ 6ನೇ ತರಗತಿ ಮಕ್ಕಳು ಶಿಕ್ಷಕರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯಾಧ್ಯಾಪಕಿ ಸ್ವರ್ಣಲತಾ ಶಾನಭಾಗ ಶಾಲೆಯ ಅಡಿಗೆಯವರು ಭುವನೇಶ್ವರಿ ಹೆಗಡೆಯವರು ಕಾರ್ಯಕ್ರಮ ನಿರ್ವಹಿಸಿದರು. ಸನ್ಮಾನಿತರಾದ ಸವಿತಾ ಶಾನಭಾಗ, ತಮ್ಮಣ್ಣ ಬೀಗಾರ, ವಿಜಯರವರು ಶಾಲೆಯ ಕುರಿತು ತಮ್ಮ ಅನುಭವ ಹಂಚಿಕೊಂಡರು. ಸವಿತಾ ಶಾನಭಾಗ ದಂಪತಿಗಳು ಶಾಲೆಗೆ 10,000/- ಹಾಗೂ ಒಂದು ಕುಕ್ಕರ್ ದೇಣಿಗೆ ನೀಡಿದರು. , ಪಾಲಕರು, ಮಕ್ಕಳು, ಅಂಗನವಾಡಿ ಶಿಕ್ಷಕರು, ಪೋಸ್ಟ್ ಆಫಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ : 19-03-2021 ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ
ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿ 39609 41899 41499
2 ತಟ್ಟಿಬೆಟ್ಟೆ 32109 38189 37869
3 ಕೆಂಪಗೋಟು 26669 29469 28689
4 ಬಿಳಿಗೋಟು 23699 30089 28609
5 ಚಾಲಿ 34689 36899 36601
6 ಕೋಕಾ 21099 28809 26609
7 ಕಾಳುಮೆಣಸು 30089 39039 38366


