

ಕರ್ನಾಟಕದಲ್ಲಿ ಮತ್ತೆ ಕೊರೋನಾ ಆಟ ಶುರು: ಬೆಂಗಳೂರು 1,186 ಸೇರಿ ರಾಜ್ಯದಲ್ಲಿ 1,798 ಜನರಿಗೆ ಪಾಸಿಟಿವ್!
ರಾಜ್ಯದಲ್ಲಿ ಕೊರೋನಾ 2ನೇ ಅಲೆ ಶುರುವಾಗಿದ್ದು ಶನಿವಾರ 1,798 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,68,487ಕ್ಕೆ ಏರಿಕೆಯಾಗಿದೆ.
ಸಿದ್ಧಾಪುರ ಕಾವಂಚೂರಿನಲ್ಲಿ 6 ಲಕ್ಷದ ಸ್ವತ್ತು ಕಳ್ಳತನ- ಸಿದ್ಧಾಪುರ ತಾಲೂಕಿನ ಕಾಂವಂಚೂರಿನಲ್ಲಿ ರಾತ್ರಿವೇಳೆ ಹೊಂಚುಹಾಕಿ ಮನೆಯ ಬೀಗ ಮುರಿದು ಕಳ್ಳತನ ಮಾಡಿರುವ ಕಳ್ಳರು ಬಂಗಾರ, 7 ಸಾವಿರ ನಗದು ಹಣ ಸೇರಿದಂತೆ ಒಟ್ಟೂ 6 ಲಕ್ಷ ಮೌಲ್ಯದ ಸ್ವತ್ತನ್ನು ಕಳ್ಳತನ ಮಾಡಿದ್ದಾರೆ. ಮಂಗಳಾ ಕೋಂ ಶಂಕರ್ ಗೌಡ ಪಾಟೀಲ್ ಎನ್ನುವವರ ಮನೆಯ ಕೀಲಿಹಾಕಿದ ಬಾಗಿಲ ಬೀಗ ಮುರಿದು ಈ ಕಳ್ಳತನ ಮಾಡಿರುವ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿರಸಿ ಜಿಲ್ಲಾ ಕ್ರೀಡಾಂಗಣದ ಸಮೀಪ ಗಾಂಜಾ ಮಾರುತಿದ್ದ ಮುಂಡಗೋಡು ಮಳಗಿಯ ಶಬ್ಬೀರ ಪೀರಸಾಬ್ ಎನ್ನುವವನನ್ನು ದಸ್ತಗಿರಿ ಮಾಡಿರುವ ಶಿರಸಿ ಪೊಲೀಸರು ಬಂಧಿತನಿಂದ ಸುಮಾರು ಲಕ್ಷರೂಪಾಯಿ ಮೌಲ್ಯದ ವಸ್ತು-ಹಣ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಶುರುವಾಗಿದ್ದು ಶನಿವಾರ 1,798 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,68,487ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಏಳು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,432ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

https://imasdk.googleapis.com/js/core/bridge3.447.1_en.html#goog_63965648
ಬೆಂಗಳೂರಿನಲ್ಲಿ ಇಂದು 1,186 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,16,633ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ಆರು ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಇಂದು 1,030 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,43,208ಕ್ಕೆ ಏರಿಕೆಯಾಗಿದೆ. ಇನ್ನು 12,828 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 134 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (kpc)
