

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಾವು ಏಕಪತ್ನಿ ವ್ರತಸ್ತ ಎಂಬ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಪಕ್ಷೀಯರು ಸಚಿವ ಸುಧಾಕರ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಎಲ್ಲರ ಮನೆ ದೋಸೆನೂ ತೂತೇ; ನಾನು ಒಂದು ಬಾರಿ ಎಡವಿದ್ದೆ: ಎಚ್.ಡಿ. ಕುಮಾರಸ್ವಾಮಿ
ಎಲ್ಲರ ಮನೆ ದೋಸೆನೂ ತೂತೇ, ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು: ಎಲ್ಲರ ಮನೆ ದೋಸೆನೂ ತೂತೇ, ಯಾರೂ ಕೂಡ ಸತ್ಯಹರಿಶ್ಚಂದ್ರರಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಚಿವ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಭೂಮಿ ಮೇಲೆ ಜನಿಸಿರುವ ಪ್ರತಿಯೊಂದು ಜೀವಿಗೂ ಸಹಜ ಪ್ರಕ್ರಿಯೆ ಇದೆ, ನಾನು ಈ ಹಿಂದೆ ಅಧಿವೇಶನದಲ್ಲಿ ನಾನು ಎಡವಿದ್ದ ಬಗ್ಗೆ ಹೇಳಿ ತಪ್ಪು ಒಪ್ಪಿಕೊಂಡಿದ್ದೆ.

https://imasdk.googleapis.com/js/core/bridge3.447.1_en.html#goog_735589004
ಇಲ್ಲಿ ಯಾರು ಹರಿಶ್ಚಂದ್ರರಲ್ಲ, ಸುಮ್ಮನೆ ಏಕೆ ರಾಡಿ ಎರಚಿಕೊಳ್ಳುತ್ತೀರಿ. ನೀವು ಸತ್ಯವಂತರಾದರೆ ನೀವು ಕೋರ್ಟ್ ಗೆ ಏಕೆ ತಡೆಯಾಜ್ಞೆ ತಂದಿರಿ, ನಾನು ಮಾಡಿರುವ ತಪ್ಪು ಒಪ್ಪಿಕೊಂಡಿರುವಾಗ ನನ್ನ ಹೆಸರನ್ನು ಏಕೆ ಎಳೆದು ತರುತ್ತೀರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನೀವೇ ಸಮಸ್ಯೆ ತಂದು ಬೇರೆಯವರ ಮೇಲೆ ಏಕೆ ಕೆಸರು ಹಾಕುತಿದ್ದೀರಿ. ಬೀದಿಯಲ್ಲಿ ನಿಂತು ನಗೆಪಾಟಲಿಗೀಡಾಗುತಿದ್ದೀರಿ ಎಂದ ಕುಮಾರ ಸ್ವಾಮಿ, ಜನರ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಾವು ಏಕಪತ್ನಿ ವ್ರತಸ್ತ ಎಂಬ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಪಕ್ಷೀಯರು ಸಚಿವ ಸುಧಾಕರ್ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ಮುಖಂಡರು ಸುಧಾಕರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಅವರ ಹೇಳಿಕೆ ರಾಜಕೀಯವಾಗಿ ತೀವ್ರ ಕಿಡಿ ಹೊತ್ತಿಸಿದೆ.
ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಏಕಪತ್ನಿ ವ್ರತಸ್ತ ನನಗೆ ಒಂದೇ ಹೆಂಡತಿ, ಒಂದೇ ಸಂಸಾರ ಇರುವುದು ಎಂದು ತಿಳಿಸಿದ್ದಾರೆ. ಇಂತಹ ನುಡಿಮುತ್ತುಗಳನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಅವನು ಏನೇ ಹೇಳಲಿ ನನಗೆ ಒಬ್ಬಳೆ ಹೆಂಡತಿ ಒಂದೆ ಸಂಸಾರ. ಉಳಿದ ವಿಚಾರದ ಬಗ್ಗೆ ಸದನದ ಒಳಗೆ ಚರ್ಚೆ ಮಾಡುತ್ತೇನೆ. ನಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿ ಇದನ್ನು ಸದನದಲ್ಲಿ ಚರ್ಚಿಸುತ್ತೇವೆ. ಎಲ್ಲಾ ಸದಸ್ಯರ ಮೇಲೆ ಅವರು ಆರೋಪ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ, ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೇಳಿದ್ದಾರೆ. ಹಾಗಾದರೆ ಎಲ್ಲರ ಮೇಲೂ ತನಿಖೆ ಮಾಡಿಸಲಿ, ಇಲ್ಲವಾದಲ್ಲಿ ಸತ್ಯ ಶೋಧನ ಸಮಿತಿ ರಚಿಸಲಿ. ಆರೋಗ್ಯ ಸಚಿವರು ಹೇಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ತನಿಖೆಗೆ ಆದೇಶಿಸುವುದು ಒಳ್ಳೆಯದು. ಎಲ್ಲಾ 225 ಜನರ ಮೇಲೂ ತನಿಖೆ ನಡೆಯಲಿ ಎಂದರು.
ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಮಾತನಾಡಿ, ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಕೇಂದ್ರದಲ್ಲೂ ಇವರೆ ರಾಜ್ಯದಲ್ಲೂ ಇವರೇ ಆಡಳಿತದಲ್ಲಿದ್ದು, ತನಿಖೆ ನಡೆಯಲಿ. ಅಗತ್ಯ ಬಿದ್ದರೆ ರಾಮನ ದೇವಸ್ಥಾನಕ್ಕೆ ಹೋಗಿ ಬರಲಿ. ತನಿಖೆ ಮಾಡಲಿ ಬಿಡಿ ಎಂದು ಆಗ್ರಹಿಸಿದರು.
ಸುಧಾಕರ್ ಹೇಳಿಕೆಯನ್ನು ಕೇಳಿದ ತಕ್ಷಣ ಗಹಿಗಹಿಸಿ ನಕ್ಕ ಶಾಸಕಿ ಸೌಮ್ಯ ರೆಡ್ಡಿ, ಸುಧಾಕರ್ ಅವರಿಗೆ ಮಾಡಲು ಬೇರೆ ಏನೂ ಕೆಲಸ ಇಲ್ವಾ?. ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಅಂತ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಯಾಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ಯಾರೇ ಆಗಲಿ ಸಿಬಿಐಗೆ ಹೋಗಲಿ. ನಾವು ಒಬ್ಬರ ಪರ್ಸನಲ್ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿಲ್ಲ. ಇದನ್ನು ಸಚಿವ ಸುಧಾಕರ್ ಅರ್ಥ ಮಾಡಿಕೊಳ್ಳಲಿ. ಜನ ನಗುತ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸ್ವಕ್ಷೀಯರಿಂದಲೂ ವಿರೋಧ
ಸುಧಾಕರ್ ಹೇಳಿಕೆ ಸಂಬಂಧ ಸ್ವಪಕ್ಷೀಯರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಅದು ಸುಧಾಕರ್ ಅವರ ವೈಯಕ್ತಿಕ ವಿಚಾರ. ಹೇಳಿಕೆ ಕೊಡುವ ಸಮಯದಲ್ಲಿ ಸ್ಪಷ್ಟವಾಗಿ ಹೇಳಬೇಕು. ಇಂತವರು ಇಂತ ಹವರು ಅಂತ ಹೇಳಬೇಕು. 224 ಜನ ಅಂತ ಹೇಳಿರುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ರಾಜೂಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಅವರು ಮಂತ್ರಿ ಇದ್ದಾರೆ ನಾವೆಲ್ಲ ಶಾಸಕರು. ಅವರ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ನಾವು ಸಾಮಾನ್ಯ ಜನರಂತಲ್ಲ. ನಮಗೂ ಜವಾಬ್ದಾರಿ ಇದೆ. ಶಾಸಕರಾಗಿ ನಮಗೆ ನಮ್ಮದೇ ಆದ ಜವಾಬ್ದಾರಿ ಇರುತ್ತದೆ. ಇಂತಹ ಹೇಳಿಕೆಯನ್ನು ಅವರು ಕೊಡಬಾರದು ಎಂದರು.
ಅಂತಹ ಹೇಳಿಕೆ ನೀಡಿರುವುದು ತಪ್ಪು ಎಂದು ಸಚಿವೆ ಶಶಿಕಲಾ ಜೊಲ್ಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಅವರ ಹೇಳಿಕೆಯನ್ನು ಇನ್ನೂ ನೋಡಿಲ್ಲ. ಆ ರೀತಿ ಹೇಳಿಕೆ ಕೊಡುವುದು ತಪ್ಪು. ಎಲ್ಲರ ಕುರಿತು ಆ ರೀತಿ ಹೇಳುವುದು ಸರಿಯಲ್ಲ. ನಾವು ಮಹಿಳಾ ಶಾಸಕರೂ ಇದ್ದೇವೆ. ಎಲ್ಲರ ಕುರಿತು ಆಪಾದನೆ ಮಾಡುವುದು ಸರಿಯಲ್ಲ ಎಂದರು. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
