
ಬರುವ ಮಂಗಳವಾರದಿಂದ ಪ್ರಾರಂಭವಾಗುವ ಕೊಂಡ್ಲಿ ಜಾತ್ರೆಗೆ ಅದ್ಧೂರಿ ತಯಾರಿಯ ನಡುವೆ ಸರ್ಕಾರದ ಕೋವಿಡ್ ನಿಯಮದ ಕಟ್ಟುಪಾಡಿನ ಕರಿನೆರಳು ಬೀಳುವ ಲಕ್ಷಣ ದಟ್ಟವಾಗಿದೆ. ಶಿರಸಿಯಲ್ಲಿ ಬೇಡರವೇಷಕ್ಕೆ ವಿಧಿಸಿರುವ ನಿಯಮ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ಸ್ಥಳಿಯರು ಅಧಿಕಾರಶಾಹಿಯ ವಿರುದ್ಧ ಸಿಡಿದೆದ್ದಿದ್ದಾರೆ. ಕೋವಿಡ್ ನಿಯಮಾವಳಿ ದಂಡಗಳ ಹಿನ್ನೆಲೆಯಲ್ಲಿ ಜಾತ್ರೆ-ಹಬ್ಬ ಮದುವೆ ಕಾರ್ಯಕ್ರಮಗಳನ್ನು ನಡೆಸುವವರು ಹೆದರುತ್ತಿರುವ ವಿದ್ಯಮಾನದ ನಡುವೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ. ಈ ವಿಚಾರಗಳ ಹಿನ್ನೆಲೆಯಲ್ಲಿ ಇಂದು ಕೊಂಡ್ಲಿ ಮಾರಿಕಾಂಬಾ ಜಾತ್ರೆ ಆಡಳಿತ ಸಮೀತಿಯ ಮಾಧ್ಯಮಗೋಷ್ಠಿ ಸಾರ್ವಜನಿಕರ ಗಮನ ಸೆಳೆದಿದೆ.
