ಸಿದ್ಧಾಪುರ ತಾಲೂಕಿನ ಕೊಂಡ್ಲಿ ಶ್ರೀ ಮಾರಿಕಾಂಬಾ ಜಾತ್ರೆ ಕೋವಿಡ್ ನಿಯಮಗಳಿಗನುಸಾರ,ಸಕಲ ಧಾರ್ಮಿಕ ವಿಧಿ-ವಿಧಾನಗಳಡಿ ನಡೆಯಲಿದೆ. ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಕೊಂಡ್ಲಿ ಮಾರಿಕಾಂಬಾ ಜಾತ್ರಾ ನಿರ್ವಹಣಾ ಸಮೀತಿ ಅಧೀಕೃತವಾಗಿ ಪ್ರಕಟಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಕೊಂಡ್ಲಿ ಮಾರಿಕಾಂಬಾ ಜಾತ್ರಾ ಸಮೀತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್ ಗಾಳಿಸುದ್ದಿಗಳು,ಸಾರ್ವಜನಿಕ ಗುಸುಗುಸು ಸುದ್ದಿಗಳ ಪ್ರಕಾರ ಕೊಂಡ್ಲಿ ಜಾತ್ರೆ ನಡೆಯುತ್ತಿಲ್ಲ, ಕೊವಿಡ್ ಹಿನ್ನೆಲೆಯಲ್ಲಿ ಜಾತ್ರೆ ಮುಂದೂಡಲಾಗಿದೆ ಎಂದೆಲ್ಲಾ ಸುದ್ದಿಯಾಗುತ್ತಿದೆ. ಆದರೆ ಈ ವಿದ್ಯಮಾನಗಳ ನಡುವೆ ಕೋವಿಡ್ ನಿಯಮಗಳ ಪಾಲನೆ, ಧಾರ್ಮಿಕ ವಿಧಿ-ವಿಧಾನಗಳ ಅನ್ವಯವೇ ಮಾರ್ಚ್ 30 ರಿಂದ ಜಾತ್ರೆ ಪ್ರಾರಂಭವಾಗಲಿದೆ ಎಂದರು.
ಜಾತ್ರಾ ನಿರ್ವಹಣೆಯ ಉಪಸಮೀತಿಯಲ್ಲಿ ಕೋವಿಡ್ ನಿಯಮ ಪಾಲನೆ, ಆರೋಗ್ಯ ಸಂಬಂಧಿ ಮೇಲ್ ಉಸ್ತುವಾರಿಗೆ ಒಂದು ಉಪಸಮೀತಿ ರಚಿಸಿದ್ದು ಅದು ಸರ್ಕಾರಿ ವ್ಯವಸ್ಥೆ, ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಕೆಲಸ ನಿರ್ವಹಿಸಲಿದ್ದಾರೆ. ಉಳಿದಂತೆ ನಿಗದಿಪಡಿಸಿದಂತೆ ಎಲ್ಲಾ ಕೆಲಸ-ಕಾರ್ಯಗಳೂ ನಡೆಯಲಿವೆ ಎಂದರು.