local news-ಅಸ್ಫೃಶ್ಯತೆ, ಸಮಾಜ ಮತ್ತು ಕಾನೂನು ಪುಸ್ತಕ ಬಿಡುಗಡೆ

ಹೊನ್ನಾವರದಲ್ಲಿ ನಡೆದ ‘ಪ್ರೀತಿ ಪದಗಳ ಪಯಣ’

ಅಸ್ಪೃಶ್ಯತೆ ಹೋಗಲಾಡಿಸಲು ಬರೀ ಕಾನೂನಿನಿಂದ ಸಾಧ್ಯವಿಲ್ಲ. ನಮ್ಮನಮ್ಮ ಮನೋಭಾವದಲ್ಲಿ ಮಹತ್ವದ ಬದಲಾವಣೆ ಬರಬೇಕು. ಭಾರತಕ್ಕೆ ಕಳಂಕಪ್ರಾಯವಾದ ಅಸ್ಪೃಶ್ಯತೆಯಿಂದ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಕುಂಠಿತವಾಗುತ್ತದೆ. ಇಂದು ಧಮನಿತ ಸಮುದಾಯ ಒಂದಿಷ್ಟಾ ದರೂ ಬದಲಾವಣೆ ಆಗಿದ್ದು ಭಾರತ ಸಂವಿಧಾನದ ಕೊಡುಗೆ. ಸಂವಿಧಾನ ನೀಡಿದ ಕೊಡುಗೆಯನ್ನು ಸರಿಯಾಗಿ ಜಾರಿಗೊಳಿಸಬೇಕು. ಇದು ಪ್ರಜ್ಞಾವಂತರ ಹೊಣೆ ಕೂಡ. ಇಂದೂ ಕೂಡ ಅಸ್ಪೃಶ್ಯತೆ ಇಡೀ ದೇಶವನ್ನು ಆವರಿಸಿಕೊಂಡಿದೆ. ದಲಿತರ ನೋವು, ಅವಮಾನ, ಅಸಹಾಯಕತೆಯನ್ನು ಈ ಸಮಾಜ ಅರ್ಥಮಾಡಿಕೊಳ್ಳಬೇಕಾಗಿದೆ” ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಕಾವ್ಯಶ್ರೀ ಮನಮನೆ ಹೇಳಿದರು. ಅವರು ಇತ್ತೀಚೆಗೆ ಹೊನ್ನಾವರದಲ್ಲಿ ಸಹಯಾನ ಕೆರೆಕೋಣ ಮತ್ತು ಸಮಾಜ ಕಲ್ಯಾಣ ಇಲಾಖೆಯವರು ಹಮ್ಮಿಕೊಂಡ ಅಸ್ಪೃಶ್ಯತೆ ಆಚರಣೆ ವಿರೋಧಿ ಜಾಗೃತಿ ಕಾರ್ಯ ಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಹೇಳಿದರು.
ಇನ್ನೊಬ್ಬ ಉಪನ್ಯಾಸಕ ಶಿವರಾಯ ದೇಸಾಯಿ ಅಸ್ಪೃಶ್ಯತೆ ಮತ್ತು ಕಾನೂನು ಎನ್ನುವ ವಿಷಯದ ಕುರಿತು ಮಾತನಾಡಿ ‘ಕಾನೂನುಗಳನ್ನು ನಿಜ ಅರ್ಥದಲ್ಲಿ ಜಾರಿಗೊಳಿಸಬೇಕಾಗಿದೆ. ರಾಷ್ಟ್ರಪತಿಗಳನ್ನೇ ದೇವಸ್ಥಾನಗಳಿಂದ ಹೊರಗಿಡುವ ಈ ದೇಶದಲ್ಲಿ ಬಹುಸಂಖ್ಯಾತ ಜನ ಧಮನಿತರೇ ಆಗಿದ್ದಾರೆ’ ಎಂದು ಹೇಳಿ ಅಸ್ಪೃಶ್ಯತೆ ನಿವಾರಣೆಗಾಗಿ ಇರುವ ಹಲವಾರು ಕಾನೂನುಗಳನ್ನು ವಿವರಿಸಿದರು.
ಕಾರ್ಯಕ್ರಮ ದ ಅಧ್ಯಕ್ಷರಾಗಿ ಪಾಲ್ಗೊಂಡ ಹೊನ್ನಾವರದ ತಹಶಿಲ್ದಾರ ವಿವೇಕ ಶೇಣ್ವಿ “ಹಲವರು ಈ ಹಿಂದೆ ಅಸ್ಪೃಶ್ಯತೆ ವಿರುದ್ಧದ ಹೋರಾಟಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಇಂದು ಒಳಗೊಳಗೇ ಜಾರಿಯಲ್ಲಿರುವ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಒಟ್ಟಾಗಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ” ಎಂದರು.


ಹಿರಿಯರಾದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಬರೆದು ಸಹಯಾನ ಪ್ರಕಟಿಸಿದ ‘ಅಸ್ಪೃಶ್ಯತೆ, ಸಮಾಜ ಮತ್ತು ಕಾನೂನು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಮತ್ತು ಭಾಗವಹಿಸಿದ ಎಲ್ಲರಿಗೂ ಈ ಪುಸ್ತಕ ಹಂಚಲಾಯಿತು.
ವಸತಿ ನಿಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ನ್ಯಾ. ಎಚ್. ಎನ್.ನಾಗಮೋಹನದಾಸ್ ಅವರು ಬರೆದ “ಅಸ್ಪೃಶ್ಯತೆ,ಸಮಾಜ ಮತ್ತು ಕಾನೂನು” ಎನ್ನುವ ಪುಸ್ತಕವನ್ನು ಅತಿಥಿಗಳು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಎಲ್ಲರಿಗೆ ಈ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಸಹಯಾನದ ಕಾರ್ಯದರ್ಶಿ ವಿಠ್ಠಲ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಮತ್ತು ಸ್ವರೂಪವನ್ನು ವಿವರಿಸಿದರು. ಕಿರಣ ಭಟ್, ಮಾಸ್ತಿ ಗೌಡ, ಗಣೇಶ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಧೀಶ ನಾಯ್ಕ ನಿರ್ವಹಿಸಿದರು.
ಆರ್. ವಿ ಭಂಡಾರಿ, ಶರೀಫ್ ಅವರ ಕವನಗಳನ್ನು ಒಳಗೊಂಡಂತೆ ಜಾತಿಪದ್ಧತಿಯ ಅಮಾನವೀಯತೆಯನ್ನು ಹೇಳುವ ಜಾಗೃತಿ ಗೀತೆಯನ್ನು ನಾಗೇಂದ್ರ ಕುಮಟಾ ಮತ್ತು ತಂಡದವರು ಹಾಡಿದರು.
ಎಂ.ವಿ ಪ್ರತಿಭಾ ಅವರ ನಿರ್ದೇಶನದಲ್ಲಿ ಪಿ. ಲಂಕೇಶ್ ಅವರ ‘ಮುಟ್ಟಿಸಿಕೊಂಡವರು’ ಕತೆಯನ್ನು ಸ್ಪಂದನ ತಂಡದವರು ಅಭಿನಯಿಸಿದರು. ತನ್ನ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದವನು ದಲಿತ ವೈದ್ಯ ಎನ್ನುವುದು ಗೊತ್ತಾದಾಗ ವೈದ್ಯರ ಎಚ್ಚರಿಕೆಯನ್ನೂ ಮೀರಿ ಶುದ್ಧಿಗಾಗಿ ತಲೆ ಸ್ನಾನ ಮಡುವ ಮೂಲಕ ಕಣ್ಣನ್ನೇ ಕಳೆದುಕೊಳ್ಳುವ ಸ್ಥಿಗೆ ಬರುವವನ ಕತೆ ಇದು. ಕಲಿತು ವೈದ್ಯನಾಗಿ ಬಂದು ನಿಸ್ವಾರ್ಥದಿಂದ ದುಡಿಯುತ್ತಿದ್ದರೂ ಸಮಾಜ ತನ್ನನ್ನು ದಲಿತ ವೈದ್ಯನೆಂದು ಗುರುತಿಸಿ ಹೀಗಳೆವ ಅವಮಾನಿತ ಸ್ಥಿಯ ದಾರುಣತೆಯನ್ನು ಇದು ಹೇಳುತ್ತದೆ. ಕೊನೆಯಲ್ಲಿ ಊಟವನ್ನು ಪರಸ್ಪರ ಹಂಚಿ ತಿನ್ನುವ ದೃಶ್ಯವು ಭವಿಷ್ಯ ರೂಪಿಸಿಕೊಳ್ಳಬೇಕಾ ಹೊಸ ದಾರಿಯನ್ನು ನಿರೂಪಿಸುತ್ತದೆ. ಒಳ್ಳೆಯ ಹಾಡು, ನಟನೆ ಮತ್ತು ಸರಳ ರಂಗಪರಿಕರವನ್ನು ಬಳಸಿದರೂ ನಾಟಕ ಪರಿಣಾಮಕಾರಿಯಾಗಿ ಮೂಡಿಬಂತು,


ಸಿದ್ದಾಪುರ
ಯಕ್ಷಗಾನ ಒಂದು ಶಕ್ತಿಯುತವಾದ ಜಾನಪದ ಕಲೆ ಆಗಿದ್ದು ಇದು ಮನರಂಜನೆಗಾಗಿ ಮಾತ್ರ ಇರುವಂತಹುದಲ್ಲ. ಜೀವನದ ಮೌಲ್ಯವನ್ನು ತಿಳಿಸುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹುದಾಗಿದೆ ಎಂದು ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ತಾಲೂಕಿನ ಕವಲಕೊಪ್ಪ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಬಿಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 9ನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಯಕ್ಷಗಾನ ಕಲಾವಿದ ಶಿರಳಗಿ ಭಾಸ್ಕರ ಜೋಶಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಭಾಸ್ಕರ ಜೋಶಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡುವುದರ ಮೂಲಕ ಎತ್ತರಕ್ಕೆ ಬೆಳೆದವರು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಸ್ಕರ ಜೋಶಿ ಶಿರಳಗಿ ಅವರು ಬೆಳಸಲಿಗೆ ಗಣಪತಿ ಹೆಗಡೆ ಅವರ ಹೆಸರಿನಲ್ಲಿ ಸನ್ಮಾನ ಪಡೆಯುತ್ತಿರುವುದು ನನ್ನ ಭಾಗ್ಯ. ಅವರು ಒಬ್ಬ ಶ್ರೇಷ್ಠ ಯಕ್ಷಗಾನ ಕವಿ. ಯಕ್ಷಗಾನ ರಂಗ ನನ್ನ ಬದುಕನ್ನು ಕಟ್ಟಿಕೊಟ್ಟಿದ್ದಲ್ಲದೇ ಗೌರವವನ್ನು ತಂದು ಕೊಟ್ಟಿದೆ ಎಂದು ಹೇಳಿದರು.


ಜಿ.ಕೆ.ಭಟ್ಟ ಕಶಿಗೆ ಸಮಾರೋಪ ಮಾತನಾಡಿದರು.ಬಿದ್ರಕಾನ ಗ್ರಾಪಂ ಸದಸ್ಯ ಜಯಂತ ಹೆಗಡೆ ಕಲ್ಲಾರೆಮನೆ, ಸರೋಜಾ ನಾಯ್ಕ ಹಾಸಣಗಿ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಪ್ರತಿಷ್ಠಾನದ ಸುರೇಶ ಹೆಗಡೆ, ಗೀತಾ ಹೆಗಡೆ, ಗಿರೀಶ ಹೆಗಡೆ ಉಪಸ್ಥಿತರಿದ್ದರು. ಕಾಂತಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಮಕ್ಕಳಿಂದ ಮನರಂಜನೆ ಹಾಗೂ ಖ್ಯಾತ ಕಲಾವಿದರಿಂದ ಭೀಷ್ಮ ಪ್ರತಿಜ್ಞೆ ಯಕ್ಷಗಾನ ಪ್ರದರ್ಶನಗೊಂಡಿತು.ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ, ಲಕ್ಷ್ಮೀನಾರಾಯಣ ಸಂಪ ಸಹಕರಿಸಿದರು. ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ತೋಟಿಮನೆ, ಸದಾಶಿವ ಮಲವಳ್ಳಿ, ಅಶೋಕ ಭಟ್ಟ ಸಿದ್ದಾಪುರ, ವೆಂಕಟೇಶ ಬೊಗರಿಮಕ್ಕಿ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.


“ಸಿದ್ದಾಪುರ ಕೇಂದ್ರ ಗ್ರಂಥಾಲಯದಲ್ಲಿ ಡಿಜಿಟಲ್ ವ್ಯವಸ್ಥೆ”
ಸ್ವಂತ ಕಟ್ಟಡ ಇಲ್ಲಾ ಈಗ ಇರುವ ಕಟ್ಟಡವೂ ಸುರಕ್ಷತೆ ಇಲ್ಲಾ

ಸಿದ್ದಾಪುರ ಪ. ಪಂಚಾಯತ ವ್ಯಾಪ್ತಿಯಲ್ಲಿ ಸರಕಾರಿ ಆಸ್ಪತ್ರೆ ಬದಿಗೆ (ನೆಹರೂ ಮೈದಾನ ಹತ್ತಿರ) ಕೇಂದ್ರ ಗ್ರಂಥಾಲಯ ಸ್ಥಾಪನೆ ಆಗಿ ಹಲವಾರು ವರ್ಷಗಳಾದವು ಆದರೆ ಬಹಳ ಜನರಿಗೆ ಈ ಗ್ರಂಥಾಲಯ ಇರುವ ಬಗ್ಗೆ ಮಾಹಿತಿ ಇಲ್ಲಾ. ಈ ಹಿಂದೆ ಇದು ಪಟ್ಟಣದ ಮಧ್ಯದಲ್ಲಿ ಇತ್ತು ಆದರೆ ಬಾಡಿಗೆ ಕಡಿಮೆದರದಲ್ಲಿ ಸಿಗದ ಕಾರಣ ಈ ಗ್ರಂಥಾಲಯವನ್ನು ಹಿಂದಿನ ಜಿಲ್ಲಾಧಿಕಾರಿಗಳು ಸರಕಾರಿ ನೌಕರ ಸಂಘದವರನ್ನು ಮನ ಒಲಿಸಿ ಇದರಲ್ಲಿ ಒಂದು ಕಟ್ಟಡವನ್ನು ಕೇಂದ್ರ ಗ್ರಂಥಾಲಯಕ್ಕೆ ನೀಡಲಾಯಿತು. ಈ ಕಟ್ಟಡ ಸಹ ಮಳೆಗಾಲದಲ್ಲಿ ನೀರು ಒಳಗಡೆ ಬರುತ್ತದೆ. ಆದರೆ ಇಲಾಖೆಯವರು ವಿಶೇಷ ಕಾಳಜಿಯಿಂದ ರಿಪೇರಿ ಆಗಿದೆ. ಹಲವಾರು ಹಿರಿಯ ಸಾಹಿತಿಗಳ ಪುಸ್ತಕ ಭಂಡಾರವೆ ಇಲ್ಲಿದೆ. ಮಕ್ಕಳಿಗೆ, ಹಿರಿಯರಿಗೆ, ಮಹಿಳೆಯರಿಗೆ, ನೌಕರರಿಗೆ ಎಲ್ಲರಿಗೂ ಉಪಯುಕ್ತ ಪುಸ್ತಕ ಗಳು ಇಲ್ಲಿವೆ. ಈಗ ಸದ್ಯ ಗ್ರಂಥಾಲಯದಲ್ಲಿ ಡಿಜಿಟಲ್ ವ್ಯವಸ್ಥೆ ಕೂಡಾ ಆಗಿದೆ. ಸರಕಾರ ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳಿಗೆ ಹಣ ವಿನಿಯೋಗಿಸುತ್ತಿದೆ. ಆದರೆ ಇವೆಲ್ಲಕ್ಕೂ ಪ್ರಚಾರವಿಲ್ಲದೆ ಸರಿಯಾದ ವ್ಯವಸ್ಥೆ ಇಲ್ಲದೆ ಹಾಳಾಗುತ್ತಿದೆ. ಗ್ರಂಥಾಲಯ ಕಟ್ಟಡಕ್ಕಾಗಿ ಹಲವಾರು ಸಾರಿ ಪತ್ರಿಕೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದ ಮೇಲೆ ಹಿಂದಿನ ಕ್ರೀಯಾಶೀಲ ತಹಶೀಲ್ದಾರ ರವರು 0-3-0 ರೆವೆನ್ಯೂ ಜಮೀನನ್ನು ಹೊನ್ನೆಗುಂಡಿ ರಸ್ತೆ ಪಕ್ಕದಲ್ಲಿ ಮಂಜೂರಿ ಮಾಡಿಸಿದರು. ಕಟ್ಟಡಕ್ಕೆ ಸಹಿತ ಸಂಬಂಧಿಸಿದ ಇಲಾಖೆಯಿಂದ ಹಣ ಮಂಜೂರಿ ಆಗಿತ್ತು. ಆದರೆ ಸಿದ್ದಾಪುರ ಜನತೆಯ ದುರಾದೃಷ್ಟ ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿಗೆ ಪೂರಕ ಕೆಲಸ ಆಗುವ ಹಂತದಲ್ಲಿ ಇದ್ದಾಗ ಕೆಲವು ಹಿತಾಸಕ್ತಿಗಳು ಈ ಬಗ್ಗೆ ಕೋರ್ಟ್‍ಗೆ ಹೋಗಿ ಕಾಮಗಾರಿ ಆಗದಂತೆ ಯಶಸ್ವಿ ಆಗುತ್ತಾರೆÉ. ಆದರೆ ಈ ಬಗ್ಗೆ ಸಂಬಂ ಧಿಸಿದ ಇಲಾಖೆಯವರು (ತಹಶೀಲ್ದಾರರು) ಜನಪ್ರತಿನಿದಿಗಳು ಕಾಳಜಿ ವಹಿಸಿ ಕಟ್ಟಡ ಆಗುವಂತೆ ಮಾಡಿ ಸಾರ್ವಜನಿಕರಿಗೆ ಜ್ಞಾನ ಬಂಡಾರ ನೀಡುವ ಈ ದೇಗುಲ ಕಟ್ಟಡ ಆಗುವಂತೆ ಮಾಡಬೇಕಾಗಿ ಸಾರ್ವಜನಿಕರ ಕಳಕಳಿ ವಿನಂತಿ. -ಸಿ.ಎಸ್.ಗೌಡರ್ ಹೆಗ್ಗೋಡಮನೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *