

ರಾಜಕೀಯ, ಪಕ್ಷ ನಿಷ್ಠೆ, ರಾಜಕಾರಣದ ಮೇಲಾಟ ಶಾಶ್ವತವಲ್ಲ ಬಿ.ಜೆ.ಪಿ. ಯಲ್ಲಿ ಒಂದುಕ್ಷಣ ಉಳಿಯಲ್ಲ ಎಂದಿದ್ದ ಕುಮಾರ ಬಂಗಾರಪ್ಪನವರಂಥ ಅನೇಕ ನಾಯಕರು ಈಗ ಬಿ.ಜೆ.ಪಿ.ಯ ಶಾಸಕರು. ಶ್ರೀನಿವಾಸ್ ಪ್ರಸಾದ, ಎಸ್.ಎಂ. ಕೃಷ್ಣ ಬಿ.ಜೆ.ಪಿ. ಸೇರಬಹುದೆಂದು ನಿರೀಕ್ಷಿಸದಂಥ ಕಾಲವನ್ನು ನೆನಪಿಸಿಕೊಳ್ಳಿ.. ಎಚ್.ವಿಶ್ವನಾಥ, ಬಂಗಾರಪ್ಪ,ಶ್ರೀನಿವಾಸ್ ಪ್ರಸಾದ,ಕುಮಾರಸ್ವಾಮಿ, ಎಸ್.ಎಂ.ಕೆ. ಎಲ್ಲರೂ ಕಾಲಕ್ಕೆ ತಕ್ಕಂತೆ ಬಿ.ಜೆ.ಪಿ. ಸಮರ್ಥಿಸಿದವರೇ…..
ಇಲ್ಲೊಂದು ಲೋಕಲ್ ವಿಶೇಶ. ಸಿದ್ಧಾಪುರ ತಾಲೂಕಿನ ಕಾವಂಚೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಿ.ಟಿ.ನಾಯ್ಕ ಗೋಳಗೋಡು ಆಯ್ಕೆಯಾಗಿದ್ದಾರೆ. ಅವರ ತಂಗಿ ಚಂದ್ರಕಲಾ ನಾಯ್ಕ ವಾಜಗೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮನೆಯಲ್ಲಿ ಅಣ್ಣ ತಂಗಿ. ತಂಗಿ ಬಿ.ಜೆ.ಪಿ. ಬೆಂಬಲಿತ ಸದಸ್ಯರ ಸಹಕಾರದಿಂದ ವಾಜಗೋಡು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದರೆ…. ಅಣ್ಣ ಜಿ.ಟಿ. ನಾಯ್ಕ ಕಾಂಗ್ರೆಸ್ ಬೆಂಬಲದಿಂದ ಕಾವಂಚೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಂದೇ ಕುಟುಂಬದವರು ಬೇರೆ ಬೇರೆ ಪಕ್ಷಗಳಲ್ಲಿ ಸದಸ್ಯರು, ಬೇರೆ ಬೇರೆ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರುಗಳು ಆಗಿರುವುದು ಪ್ರಶಂಸೆ ಮತ್ತು ಚರ್ಚೆಯ ವಿಷಯಗಳಾಗಿವೆ.



