

ಟೋಲ್ ಗೇಟ್ ಸಿಬ್ಬಂದಿಗಳ ಜೊತೆ ಜಗಳಕಾದು ಕಾರವಾರ ಹೆಚ್ಚುವರಿ ಪೊಲೀಸ್ ಸುಪರಿಟೆಂಡೆಂಟ್ ಬದ್ರಿನಾಥ್ ಮೇಲೆ ವಾಹನ ಚಲಾಯಿಸಲು ಯತ್ನಿಸಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ನಾಲ್ವರು ಪುಂಡರನ್ನು ಅಂಕೋಲಾದ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಮಧ್ಯಾಹ್ನದ ಅವಧಿಯಲ್ಲಿ ಅಂಕೋಲಾ ಟೋಲ್ ಗೇಟ್ ಬಳಿ ಟೋಲ್ ಸಿಬ್ಬಂದಿಗಳ ಜೊತೆ ಜಗಳ ಮಾಡುತಿದ್ದ ಕೆಲವರನ್ನು ನೋಡಿದ ಅದೇ ಮಾರ್ಗದಲ್ಲಿ ಹೊರಟಿದ್ದ asp ಬದರಿನಾಥ್ ಜಗಳ ಕಾಯುತಿದ್ದವರನ್ನು ವಿಚಾರಿಸುತ್ತಾರೆ. ಈ ಸಮಯದಲ್ಲಿ ಪೊಲೀಸ್ ಅಧಿಕಾರಿಯ ಮೇಲೇ ವಾಹನ ಚಲಾಯಿಸಲು ಪ್ರಯತ್ನಿಸಿದವರ ವಿರುದ್ಧ ಕೊಲೆ ಯತ್ನ ಅಥವಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನ ಎಂದು ಪ್ರಕರಣ ದಾಖಲಾಗುವುದಿಲ್ಲ. ಬದಲಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಂಕೋಲಾದಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗುತ್ತದೆ.
ವಿಚಿತ್ರವೆಂದರೆ… ಸೋಮವಾರದ ಘಟನೆಯ ಸಿ.ಸಿ. ಟಿ.ವಿ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೇಲೆ ಪೊಲೀಸರು ಇಂದು ನಿನ್ನೆಯ ಘಟನೆಯ ಆಧಾರದಲ್ಲಿ ನಾಲ್ಕು ಜನರನ್ನು ಬಂಧಿಸುತ್ತಾರೆ.ಒಟ್ಟೂ 5 ಆರೋಪಿಗಳಲ್ಲಿ ಒಬ್ಬ ಮಾತ್ರ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣ ಜಿಲ್ಲೆಯಲ್ಲಿ ಬಹುಚರ್ಚೆಯ ವಿಷಯವಾಗಿದ್ದು ಪೊಲೀಸ್ ಅಧಿಕಾರಿಯ ಮೇಲೆ ವಾಹನ ಹತ್ತಿಸುವ ಪ್ರಯತ್ನ ಮಾಡಿದ ಆರೋಪಿಗಳ ಮೇಲೆ ಸೂಕ್ತ ಕ್ರಮ ಯಾಕೆ ಜರುಗಿಸಿಲ್ಲ. ಹೊಂದಾಣಿಕೆಯ ಮೇಲೆ ಸಮಾಪ್ತವಾಗಬೇಕಿದ್ದ ಈ ಪ್ರಕರಣ ಸಿ.ಸಿ. ಟಿ.ವಿ. ವಿಡಿಯೋ ದಾಖಲೆಗಳಿಂದ ಹೊಸ ತಿರುವು ಪಡೆಯಿತೆ?ಎನ್ನುವ ಸಂಶಯ ಕಾಡುವಂತಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ಮುಚ್ಚಿಹಾಕುವ ಹಿಂದೆ ರಾಜಕೀಯ ಹಿತಾಸಕ್ತಿಗಳ ಪಾತ್ರವಿರುವ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ.
ಟೋಲ್ ಗೇಟ್ ನಲ್ಲಿ ಶುಲ್ಕ ಕಟ್ಟಲು ಗಲಾಟಿ ಮಾಡಿದ ಉದ್ಯಮಿಯನ್ನು ತಡೆಯಲು ಹೋದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಕಾರು ಹತ್ತಿಸಿ ಹಲ್ಲೆ ನಡೆಸಲು ಮುಂದಾದ ನಾಲ್ವರನ್ನು ಬಂಧಿಸಿದ ಘಟನೆ ಅಂಕೋಲದಲ್ಲಿ ನಡೆದಿದೆ.
ಅಂಕೋಲಾದ ಉದ್ಯಮಿ ಸುರೇಶ ನಾಯ್ಕ ,ಅಲಗೇರಿ ಬೊಮ್ಮಯ್ಯ ನಾಯ್ಕ , ಗೋಪಾಲ ನಾಯ್ಕ ಎಂಬುವರು ಬಂಧನಕ್ಕೊಳಗಾದವರಾಗಿದ್ದು
ಸುರೇಶ್ ನಾಯ್ಕನ ಅಪ್ರಾಪ್ತ ಪುತ್ರನನ್ನು ರಿಮ್ಯಾಂಡ್ ಹೋಂಗೆ ಶಿಫ್ಟ್ ಮಾಡಲಾಗಿದೆ.
ಅಂಕೋಲಾ ಟೋಲ್ ಗೇಟ್‌ನಲ್ಲಿ ಹೆದ್ದಾರಿ ಸುಂಕದ ವಿಚಾರವಾಗಿ ನಾಲ್ವರು ಟೋಲ್‌ಗೇಟ್ ಸಿಬ್ಬಂದಿ ಜತೆ ವಾಗ್ದಾಗಕ್ಕೆ ನಿಂತಿದ್ರು, ಈ ವೇಳೆ ಕಾರವಾರ- ಅಂಕೋಲಾಕ್ಕೆ ಸಾಗುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ರವರು ಟೋಲ್ ಗೇಟ್ ಸಿಬ್ಬಂದಿ ಜೊತೆ ನಡೆಯುತ್ತಿದ್ದ ಗಲಾಟೆ ಕಂಡು ನಾಲ್ವರು ಆರೋಪಿಗಳಲ್ಲಿ ಜಗಳ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ ವಾಹನದ ಎದುರು ನಿಂತಿದ್ದ ಅಧಿಕಾರಿ ಮೇಲೆ ಏಕಾಏಕಿ ಕಾರು ಚಲಾಯಿಸಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.ಈ ಘಟನೆ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



