

ಸಿದ್ದಾಪುರ; ಗುರಿ ಇದ್ದರೆ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಕನ್ನೇಶ ನಾಯ್ಕ ಹೇಳಿದರು.
ಅವರು ತಾಲೂಕಿನ ದೊಡ್ಮನೆಯಲ್ಲಿ ಕೋಡಿಗದ್ದೆ ಮೂಕಾಂಬಿಕಾ ಯಕ್ಷಕಲಾ ಸಂಘ, ಒಡ್ಡೋಲಗ ಹಿತ್ಲಕೈ ಸಹಯೋಗ ದಲ್ಲಿ ಎರಡು ದಿನಗಳ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮಗೆ ಭವಿಷ್ಯದ ಸವಾಲು ಎದುರಾಗುತ್ತವೆ. ನಮ್ಮಲ್ಲಿ ಅಛಲವಾದ ಗುರಿ ಇದ್ದರೆ ಅವುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಹಟ ಛಲ, ಖಾಳಜಿ ಭದ್ಧತೆ ಇರಬೇಕು. ನಾಟಕ ಮತ್ತು ರಂಗಭೂಮಿ ಹಲವಾರು ಸಮಸ್ಯೆ ಗಳನ್ನು ಎದುರಿಸಿ ಇಂದು ಸುವ್ಯವಸ್ಥಿತ ವಾಗಿದೆ. ನಾಟಕ ಅನುಭವ ಅಭೂತಪೂರ್ವ ವಾಗಿದೆ. ಸದಭಿರುಚಿಯ ಜನರು ಇದ್ದರೆ ಕಾರ್ಯಕ್ರಮಗಳು ನಡೆಯುತ್ತವೆ. ನಾಟಕವು ನಮ್ಮ ಪ್ರತಿಭೆಯನ್ನು ಹೊರಹಾಕುತ್ತದೆ. ನಾವು ಕಲೆ, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.
ಒಡ್ಡೋಲಗದ ಗಣಪತಿ ಹೆಗಡೆ ಹಿತ್ಲಕೈ ರಂಗಭೂಮಿ ವಿಶ್ವ ಮಟ್ಟದ್ದು. ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಇಂದು ಈ ನಾಟಕ ಗಳು ಪ್ರದರ್ಶನಗೊಳ್ಳುತ್ತಿವೆ ಎಂದ ಅವರು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಪ್ರೌಢಶಾಲಾ ಮುಖ್ಯೋದ್ಯಾಪಕ ಎಫ್ ಎನ್ ಹರನಗಿರಿ ಮಾತನಾಡಿ ಪ್ರೋತ್ಸಾಹಿಸುವವರು ಇದ್ದರೆ ಕಲಾವಿದರು ಬದುಕುತ್ತಾರೆ. ಕಲೆ ಬೆಳೆಯಲು ಸಾರ್ವಜನಿಕ ರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘದ ಉಪಾಧ್ಯಕ್ಷ ಶ್ರೀಧರ ಭಟ್ ಮಾತನಾಡಿ ಸಂಸ್ಥೆಯ ಹುಟ್ಟು ಹಾಕುವುದು ಸುಲಭ. ಅದನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುವುದು ಕಷ್ಟ. ಕಲೆ ಕಲಾವಿದರು ಪ್ರೇಕ್ಷಕರು ಇದ್ದರೆ ಕಲೆ ಉಳಿಯುತ್ತದೆ ಎಂದರು.
ಸೀತಾ ಸ್ವಯಂವರ ಹಾಗೂ ಕೋಮಲಗಾಂಧಾರ ನಾಟಕಗಳು ಪ್ರದರ್ಶನ ಗೊಂಡವು.
ಅಂಕಿತ ಸಂಗಡಿಗರು ಪ್ರಾರ್ಥಿಸಿದರು. ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಶಂಕರ ನಾರಾಯಣ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕೇಶವ ಹೆಗಡೆ ಕಿಬ್ಳೆ ನಿರೂಪಿಸಿದರು.


