

ಮರೆಯಾಗುತ್ತಿರುವ ಗ್ರಾಮೀಣ ಕಲೆ ಮೂಡಲಪಾಯ ಯಕ್ಷಗಾನ ಕಲಾವಿದನನ್ನು ಸನ್ಮಾನಿಸಿ ಗೌರವಿಸಿದ ಅಪರೂಪದ ಕಾರ್ಯಕ್ರಮ ಸಿದ್ಧಾಪುರ ತಾಲೂಕು ಕುಂಬ್ರಿಗದ್ದೆಯಲ್ಲಿ ನಡೆಯಿತು. ಚೆನ್ನಬಸಪ್ಪ ಶಿವಾಜಿ ಗೌಡ ದೇವಗಿರಿ ತಾಲೂಕಿನ ವಿರಳ ಮೂಡಲಪಾಯ ಕಲಾವಿದರಾಗಿದ್ದು ಅವರನ್ನು ಸನ್ಮಾನಿಸಿ ಅಭಿನಂದಿಸಿದ ಕುಂಬ್ರಗದ್ದೆಯ ಜನರು ತಮ್ಮೂರಿನ ವೀರಭದ್ರೆಶ್ವರ ದೇವರ ವಾರ್ಷಿಕೋತ್ಸವದ ಅಂಗವಾಗಿ ಶನೇಶ್ವರ ಮಹಾತ್ಮೆ ಎನ್ನುವ ಮೂಡಲಪಾಯ ಯಕ್ಷಗಾನವನ್ನೂ ಪ್ರದರ್ಶಿಸಿದರು.
ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೇಡ್ಕಣಿ ಗ್ರಾಮ ಪಂಚಾಯತ್ ಸದಸ್ಯ ಗೋವಿಂದ ನಾಯ್ಕ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ, ಗೌರವಿಸುವುದು ಸಮಾಜದ ಕರ್ತವ್ಯ. ಸಮಾಜ ಪ್ರತಿಭೆಗಳನ್ನು ಗುರುತಿಸಿದರೆ ಕಲೆ, ಕಲಾವಿದರು ಉಳಿಯಲು ಸಾಧ್ಯ ಎಂದರು. ಕಲಾಬಳಗದ ರಾಮಕೃಷ್ಣ ನಾಯ್ಕ ಮತ್ತು ಉಮೇಶ್ ನಾಯ್ಕ ಉಪಸ್ಥಿತರಿದ್ದರು. ಕು. ಚಿಂತನಾ ಪ್ರಾರ್ಥಿಸಿದಳು. ಚಂದ್ರಶೇಖರ್ ನಾಯ್ಕ ಕಾರ್ಯಕ್ರಮಕ್ಕೆ ಸ್ವಾಗತಿಸಿ, ವಂದಿಸಿದರು.


