

ಜಾರ್ಕಂಡ್ ಹಜಾರಿಬಾಗ್ ಬಾರಿ ಯಲ್ಲಿ ಸಿ.ಆರ್.ಪಿ.ಎಫ್. ಯೋಧನಾಗಿ ಕೋಬ್ರಾ ಕಮಾಂಡೋ ವಿಂಗ್ ನಲ್ಲಿ ಕೆಲಸಮಾಡುತಿದ್ದ ಸಿದ್ಧಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್ ಹಂಗಾರಕಂಟದ ಯುವಕ ಸಂದೀಪ್ ನಾರಾಯಣ್ ನಾಯ್ಕ ಇಂದು ರಾಂಚಿ ಬಾರಿಯ ಸೇನಾ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಏಫ್ರಿಲ್ 5 ರಿಂದ ಮೇ 13 ರ ವರೆಗೆ ರಜೆ ಪಡೆದಿದ್ದ ಈ ಯೋಧ ಇದೇ ವಾರ ಹಜಾರಿಬಾಗ್ (ಬಾರಿ) ನಿಂದ ಹೊರಟು ಏಫ್ರಿಲ್ 29 ರಂದು ನಡೆಯಬೇಕಿದ್ದ ತನ್ನ ಮದುವೆ ಮುಗಿಸಿ ಮೇ ತಿಂಗಳಲ್ಲಿ ಮರಳಿ ಬಿಹಾರ ಸೇರಲಿದ್ದರು.
ಮೃತ ಯೋಧನ ಶವ ನಾಳೆ ಮುಂಜಾನೆ ಸ್ವಗ್ರಾಮ ಹಂಗಾರಕಂಟ ತಲುಪಲಿದ್ದು ಇವರ ಆತ್ಮಹತ್ಯೆಯ ಕಾರಣ ತಿಳಿದುಬಂದಿಲ್ಲ.. ಮುಂಜಾನೆ ಎಂದಿನಂತೆ ಉಪಹಾರ ಮುಗಿಸಿ ತನ್ನ ಕೋಣೆ ಸೇರಿದ್ದ ಯೋಧನ ಶವ ಫ್ಯಾನ್ ಗೆ ಬಿಗಿದ ಹಗ್ಗಕ್ಕೆ ಜೋತುಬಿದ್ದಿರುವುದನ್ನು ನೋಡಿದ ಸಹವರ್ತಿಗಳು ಈ ವಿಷಯ ತಿಳಿಸಿದ್ದಾರೆ. ಮೃತ ಯೋಧ ಸಂದೀಪ್ ತಂದೆ, ಅಣ್ಣ-ಅತ್ತಿಗೆ ಸೇರಿದ ಅಪಾರ ಬಂಧು-ಬಳಗವನ್ನು ಅಗಲಿದ್ದಾನೆ. 29 ವರ್ಷದ ಸಂದೀಪ್ ಕಳೆದ ಒಂಬ್ಹತ್ತು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದನು.
ಮಾನಸಿಕ ಉದ್ವೇಗದಿಂದ ಬಳಲುತಿದ್ದ ಸಂದೀಪ್ ಬೆಳಗಾವಿ, ರಾಂಚಿಗಳ ಆಸ್ಫತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಮುಂಜಾನೆ ತನ್ನ ಭಾವೀ ಪತ್ನಿಗೆ ಅಂತಿಮ ಕರೆ ಮಾಡಿ ನೇಣಿಗೆ ಕೊರಳೊಡ್ಡಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ. ಮೃತ ಯೋಧ ಸಂದೀಪ್ ಅಂತಿಮಸಂಸ್ಕಾರ ಶುಕ್ರವಾರ ಬೆಳಿಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
