
ಹೊನ್ನಾವರ ಕಾಸರಗೋಡು ಬಂದರಿನಿಂದ 10 ನಾಟಿಕಲ್ ಮೈಲು ದೂರದಲ್ಲಿ ಇಂದು ಬೆಳಿಗ್ಗೆ ಮೀನುಗಾರಿಕಾ ದೋಣಿಯೊಂದು ಮುಳುಗಿ ಹಾನಿಯಾಗಿದೆ. ಇಂದು ಮುಂಜಾನೆ ನಡೆದ ಈ ಅಪಘಾತದಲ್ಲಿ ಸಿಲುಕಿದ್ದ ಆರು ಜನ ಮೀನುಗಾರರನ್ನು ರಕ್ಷಿಸಲಾಗಿದೆ. ಹೊನ್ನಾವರ ಕಾಸರಕೋಡು ಬಳಿ ತುಂಬಿರುವ ಹೂಳಿನಿಂದಾಗಿ ಈ ಅಪಘಾತ ಸಂಭವಿಸಿದ್ದು ಇದರಿಂದ ಬೋಟ್ ಮಾಲಿಕ ಪ್ರಕಾಶ ಪಿಂಟೋ ರಿಗೆ 95 ಲಕ್ಷಗಳಷ್ಟು ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.
