

ಕಳೆದ ಮಾರ್ಚ್ 30 ರಿಂದ ಪ್ರಾರಂಭವಾಗಿ ಇಂದು ವಿದ್ಯುಕ್ತವಾಗಿ ಮುಗಿದ ಕೊಂಡ್ಲಿ ಶ್ರೀ ಮಾರಿಕಾಂಬಾ ಜಾತ್ರೆ ನಡೆಯುತ್ತೋ, ಇಲ್ಲವೋ ಎನ್ನುವ ಅನುಮಾನವಿತ್ತು. ಮೊದಮೊದಲು ಕೊಂಡ್ಲಿ ಶ್ರೀಮಾರಿಕಾಂಬಾ ಜಾತ್ರೆಯ ತಯಾರಿ ನಡೆದಿದ್ದಾಗ ಕೋವಿಡ್ ರಗಳೆ, ರಾಜಕೀಯಗಳ ಕಾರ್ಮೋಡದ ಅನುಮಾನವಿರಲಿಲ್ಲ. ಆಕಸ್ಮಿಕವಾಗಿ ಕೋವಿಡ್ ರಗಳೆ ಪ್ರಾರಂಭವಾಗಿ ರಾಜ್ಯಸರ್ಕಾರದ ಮಾರ್ಗಸೂಚಿ ಅನ್ವಯ ಜಾತ್ರೆ ನಡೆಸುವುದು ಕಷ್ಟವಿತ್ತು. ಮೊದಮೊದಲು ಬೆಂಬಲಿಸಿದ್ದ ಸಂಘ ರಾಜಕೀಯ ಕೊಂಡ್ಲಿ ಮಾರಿಕಾಂಬಾ ಜಾತ್ರಾ ಸಮೀತಿಯ ಅಧ್ಯಕ್ಷರ ಜೊತೆಗಿನ ಮುನಿಸಿನಿಂದ ಮತ್ತಷ್ಟು ಕೆರಳಿತ್ತು. ಈ ಕಾರಣಕ್ಕಾಗಿ ಮಾರಿಕಾಂಬಾ ಜಾತ್ರೆ ನಡೆಯುವುದೇ ಅನುಮಾನ ಎಂದಿದ್ದಾಗ ಜಾತ್ರಾ ಸಮೀತಿ ಮತ್ತು ದೇವಸ್ಥಾನ ಆಡಳಿತ ಸಮೀತಿ ಅಧ್ಯಕ್ಷ ಕೆ.ಜಿ.ನಾಯ್ಕ ಸಿಡಿದೆದ್ದರು. ಅಧಿಕಾರಿಗಳು ತುಸು ಹೊಂದಾಣಿಕೆಗೆ ಮುಂದಾಗದಿದ್ದರೆ ಕಷ್ಟ ಎನ್ನುವ ವಾತಾವರಣ ನಿರ್ಮಾಣವಾಯಿತು. ಅಂತೂ ಪುರ್ವನಿಗದಿಯಂತೆ ಜಾತ್ರೆ ಪ್ರಾರಂಭವಾಗೇ ಬಿಟ್ಟಿತು. ಅಧಿಕಾರಿಗಳೂ ಲಿಬರಲ್ ಆದರು. ಜಾತ್ರೆಗೆ ನಿರೀಕ್ಷಿಸಿದ ಜನ, ಆದಾಯಕ್ಕೆ ಕೋವಿಡ್ ನಿಯಮಾವಳಿ ಅಡ್ಡವಾಗಿದ್ದು ಬಿಟ್ಟರೆ ಮತ್ಯಾವ ತೊಂದರೆಯೂ ಆಗಲಿಲ್ಲ.
ಮೃತ ಯೋಧನನ್ನು ನೋಡದ ಸ್ಥಳಿಯ ಜನಪ್ರತಿನಿಧಿಗಳು ಜಾತ್ರೆಗೆ ಬಂದು ಅಮ್ಮನ ಆಶೀರ್ವಾದ ಪಡೆದರು. ಕುಮಾರ ಬಂಗಾರಪ್ಪ, ಎನ್.ಡಬ್ಲೂ ಕೆ.ಎಸ್. ಆರ್.ಟಿ.ಸಿ. ಅಧ್ಯಕ್ಷ ವಿ.ಎಸ್. ಪಾಟೀಲ್, ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಪೂಜೆ ನೆರವೇರಿಸಿದರು. ಕೊಂಡ್ಲಿ ಜಾತ್ರೆಯ ವ್ಯಾಪ್ತಿಯ ಒಂದು ಡಜನ್ ಗೂ ಹೆಚ್ಚಿನ ಹಳ್ಳಿಗಳ ಜನರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸೇರಿ ನಾನಾ ಹಣಕಾಸು ಸಂಸ್ಥೆಗಳಲ್ಲಿ 15 ಕೋಟಿರೂಪಾಯಿಗಳಿಗಿಂತ ಹೆಚ್ಚಿನ ಸಾಲದ ಹಣದಲ್ಲಿ ಕೊಂಡ್ಲಿಯ ಶ್ರೀ ಮಾರಿಕಾಂಬಾ ಜಾತ್ರೆ ಮಾಡಿರುವ ಮಾಹಿತಿ ಇದೆ.
ಇದರ ನಡುವೆ ಗಾಳಿಸುದ್ದಿ, ಭಯಗಳಿಂದ ಜಾತ್ರೆಯ ನೈಜ ಖುಷಿ ಅನುಭವಿಸದೆ ಕಾದಿದ್ದಂತಿದ್ದವರು ಮಾರಿಕಾಂಬಾ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ಸ್ಟೆಪ್ ಹಾಕಿ ಸಂಬ್ರಮಿಸಿದರು. ಬುಧವಾರ ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾಗಿ ಮಧ್ಯಾಹ್ನ 11-30 ರ ವರೆಗೆ ನಡೆದ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ತಂಡಗಳಿದ್ದವು. ಈ ತಂಡಗಳ ತಾಳ-ರಾಗ, ಸಂಗೀತಕ್ಕೆ ತಕ್ಕಂತೆ ಕುಣಿದ ಸ್ಥಳಿಯ ಯುವಕರು ಇಡೀ ಜಾತ್ರೆಯ ಸೊಗಸನ್ನು ಒಂದೇ ದಿನ ಅನುಭವಿಸಿದವರಂತೆ ಕುಣಿದು ಸಂಬ್ರಮಿಸಿದರು.
ಈ ಮಾರಿ ವಿಸರ್ಜನೆಯ ಕುಣಿತ, ಮೋಜು ಮಸ್ತಿಯ ವಿಡಿಯೋ ತುಣುಕುಗಳು kanneshwarnaik,ಸಮಾಜಮುಖಿ ಕನ್ನೇಶ್ ಫೇಸ್ ಬುಕ್ ಪುಟಗಳಲ್ಲಿ ಹಾಗೂ samaajamukhi ಯೂ ಟೂಬ್ ಚಾನೆಲ್, samajamukhi.net ನ್ಯೂಸ್ ಪೋರ್ಟಲ್ ಹಾಗೂ samaajamukhi.net ಫೇಸ್ ಬುಕ್ ಪೇಜ್ ಗಳಲ್ಲಿ ಲಭ್ಯವಿವೆ. ಇದೆಲ್ಲವನ್ನೂ ನೋಡಿ, ಓದಿ ಆನಂದಿಸಿ samaajamukhi.net ಫೇಸ್ ಬುಕ್ ಪೇಜ್ ಮತ್ತು samajamukhi.net ಹಾಗೂ samaajamukhi ಯುಟ್ಯೂಬ್ ಚಾನೆಲ್ ಗಳಿಗೆ subscribe ಆಗಿ ಸಹಕರಿಸುವುದನ್ನು ಮರೆಯಬೇಡಿ.




