

ಸಿದ್ದಾಪುರ ಕಾವಂಚೂರಿನ ಮಲೆನಾಡು ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹೇರಂಬ ಇಂದು ನಿಧನರಾಗಿದ್ದಾರೆ. ಸೊರಬ ಮೂಲದ ಹೇರಂಬ ಸಿದ್ದಾಪುರದಲ್ಲಿ ವಾಸವಾಗಿ ಕಾವಂಚೂರಿನಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ಸಾಗರ ದಲ್ಲಿ ನೆಲೆ ನಿಂತಿದ್ದರು. ಸೊರಬ ಮುಟುಗುಪ್ಪೆ ಮೂಲದ ಇವರು ಪತ್ನಿ,ಓರ್ವ ಪುತ್ರ, ಒಬ್ಬಳು ಪುತ್ರಿ ಸೇರಿದಂತೆ ಅಪಾರ ಸ್ನೇಹಿತರು, ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಮುಟಗುಪ್ಪೆಯಲ್ಲಿ ಇವರ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರು ಸಿದ್ಧಾಪುರ ಬಂಕೇಶ್ವರ ಪ್ರೌಢ ಶಾಲೆಯ ಶಕುಂತಲಾ ವಿದ್ಯಾಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು.

