

ಅಂಕೋಲಾ ತಾಲೂಕಿನ ಶಹರದ ಕಣಕಣೇಶ್ವರ ದೇವಸ್ಥಾನದ ಬಳಿ ಹಾಕಲಾಗಿದ್ದ ಕಾರವಾರ ಶಾಸಕಿ ರೂಪಾಲಿ ನಾಯ್ಕರ ಪ್ಲೆಕ್ಸ್ ಚಿತ್ರ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾದ ಮೂವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಏಫ್ರಿಲ್ ಎರಡರಂದು ನಡೆದ ರಸ್ತೆ ಕಾಮಗಾರಿ ಉದ್ಘಾ ಟನೆಗಾಗಿ ಆಗಮಿಸುವ ಶಾಸಕಿಗೆ ಸ್ವಾಗತ ಕೋರುವ ಪ್ಲೆಕ್ಸ್ ಹಾಕಲಾಗಿತ್ತು. ಆ ಚಿತ್ರ ಹರಿದ ಆರೋಪದ ಮೇಲೆ ಸುರೇಶ್ ನಾಯ್ಕ ನೀಡಿದ ದೂರಿನನ್ವಯ ಗುತ್ತಿಗೆದಾರ ಬಾಸ್ಗೋಡಿನ ಪ್ರಶಾಂತ ನಾಯಕ ಮತ್ತು ಇನ್ನಿಬ್ಬರ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ.

