
ಆತ್ಮೀಯ ಕೆ. ಜಿ. ನಾಯ್ಕರವರಿಗೆ ಅತೀವ ಪ್ರೇಮಾದರಾಭಿನಪೂರ್ವಕ ಹಾರ್ದಿಕ ಅಭಿನಂದನೆಗಳು. ಬಿಡುವಿಲ್ಲದ ರಾಜಕೀಯ ಜವಾಬ್ದಾರಿಗಳು ಮತ್ತು ಚಟುವಟಿಕೆಗಳ ಜೊತೆಗೆ ಕೊಂಡ್ಲಿ ಶ್ರೀ ಮಾರಿಕಾಂಬೆಯ ಜಾತ್ರಾ ಕಮಿಟಿಯ ಎರಡನೆಯ ಬಾರಿಗೆ ಅಧ್ಯಕ್ಷರಾಗಿ ನೀವು ಯಶಸ್ವಿಯಾಗಿ ನಿರ್ವಹಿಸಿದ ಕಾರ್ಯ/ ಜವಾಬ್ದಾರಿಗಳು, ನಿಮ್ಮ ವೈರಿಗಳೂ ಸಹ ಮೆಚ್ಚುವಂತಿತ್ತು. ನಿಜಕ್ಕೂ ಇದೊಂದು ಅತಿ ಸವಾಲಿನ ಕಾರ್ಯ. ಭಿನ್ನ ಭಿನ್ನ ಮನೋಭಾವದ ಜನರು, ಬೇರೆ ಬೇರೆ ಇಲಾಖೆಗಳು. ಕರೋನಾ ಹಾವಳಿ, ಚಿಕ್ಕ ಪುಟ್ಟ ದೋಷ, ನ್ಯೂನತೆಗಳನ್ನೇ ದೊಡ್ಡದು ಮಾಡಿ ಗಲಾಟೆ ಎಬ್ಬಿಸಲು ಸಿದ್ಧರಾಗಿರುವ ವಿಘ್ನ ಸಂತೋಷಿಗಳು, ಲಾಭವನ್ನೆ ಪ್ರಧಾನವಾಗಿಟ್ಟುಕೊಂಡು ಬಂದ ವ್ಯಾಪಾರಿಗಳು, ಶಿಸ್ತು, ಸ್ವಚ್ಛತಾ ವ್ಯವಸ್ಥೆ, ಕಾಲಕಾಲಕ್ಕೆ ಕ್ರಮಬದ್ಧವಾಗಿ ಆಗಲೇಬೇಕಾದ ವಿನಿಯೋಗಗಳು. ಸಂಪ್ರದಾಯಗಳು, ಜನರ ಟೀಕೆ ಟಿಪ್ಪಣೆಗಳು ಇವೇ ಮುಂತಾದ ಎಲ್ಲ ವಿಷಯಗಳಲ್ಲೂ ಸಮರ್ಪಕವಾದ, ದ್ರಢ ಹಾಗೂ ಶೀಘ್ರ ನಿರ್ಣಯಗಳನ್ನು ತೆಗೆದುಕೊಂಡು, ಅಹೋರಾತ್ರಿ ಕಾರ್ಯ ತತ್ಪರರಾಗಿದ್ದುಕೊಂಡು “ಜಾತ್ರೆ ಅತ್ಯುತ್ತಮ ರೀತಿಯಲ್ಲಿ ಸಂಪನ್ನಗೊಂಡಿತು” ಎಂಬ ಸತ್ಕೀರ್ತಿಗೆ ನೀವು ಪಾತ್ರರಾಗಿರುವಿರಿ.
ತನ್ಮೂಲಕ ಈ ಊರಿಗೆ ಊರೇ ಹೆಮ್ಮೆ ಪಡುವಂತೆ ಮಾಡಿರುವಿರಿ. ಈ ಕಾರ್ಯದಲ್ಲಿ ಬಹುಶಃ ಈ ಸಂಘಟನೆಯ ಎಲ್ಲ ಸದಸ್ಯರೂ. ಮಾರಿಕಾಂಬೆ ದೇವಾಲಯದ ಮಾನ್ಯ ಮೊಕ್ತೇಸರರ. ಆದಿಯಾಗಿ ಎಲ್ಲ ಸದಸ್ಯರು, ಉತ್ಸಾಹೀ ಸ್ವಯಂಸೇವಕರು, ಕಾರ್ಯಕರ್ತರು ಎಲ್ಲರೂ ತಮ್ಮೊಂದಿಗೆ ಜಾತ್ರೆಯ ಯಶಸ್ಸಿಗೆ ಶಕ್ತಿಮೀರಿ ಕೈಜೋಡಿಸಿದ್ದಾರೆ, ಶ್ಲಾಘನೀಯ ಸೇವೆ ಮಾಡಿದ್ದಾರೆ. ತಮಗೂ, ಅವರೆಲ್ಲರಿಗೂ ವೈಯಕ್ತಿಕವಾಗಿ ಹಾಗೂ ಸಾರ್ವಜನಿಕರ ಪರವಾಗಿ ಹಾರ್ದಿಕ ಅಭಿನಂದನೆ, ಶುಭಾಶಯಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ. ತಾಯಿ ಮಾರಿಕಾಂಬೆ, ಸರ್ವರ ಇಷ್ಟಾರ್ಥಗಳನ್ನು ಈಡೇರಿಸಿ ಲೋಕಕ್ಕೇ ಮಂಗಳವನ್ನು ಉಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. —- ಆರ್. ಜಿ. ಪೈ, ಮಂಜೈನ್
ಆನಂದ ಅಸ್ನೋಟಿಕರ್ ರನ್ನು ಬಿ.ಜೆ.ಪಿ.ಗೆ ತಂದು ಜನಪ್ರತಿನಿಧಿ ಮಾಡುವ ದರ್ದು ಬಿ.ಜೆ.ಪಿ.ಗೆ ಇಲ್ಲ ಎಂದಿರುವ ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ಆನಂದ ಅಸ್ನೋಟಿಕರ್ ಸಂಸದರ ಬಗ್ಗೆ ಆಡಿರುವ ಮಾತು ಹಿಂಪಡೆದು ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಬಿ.ಜೆ.ಪಿ.ಯಿಂದ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಮೇಲೆ ಅವಹೇಳನಕಾರಿ ಮಾತನಾಡಿರುವುದು ಅವರಿಗೆ ಜೀವಬೆದರಿಕೆ ಕರೆ ಬಂದಿರುವುದು ದುರದೃಷ್ಟಕರ ಸರ್ಕಾರ ಕೊಲೆ ಬೆದರಿಕೆ ಹಾಕಿದವರನ್ನು ಪತ್ತೆ ಮಾಡಿ ಸೂಕ್ತಕ್ರಮ ಜರುಗಿಸಬೇಕು. ಆನಂದ ಅಸ್ನೋಟಿಕರ್ ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು ಎಂದರು.
