
ಉ.ಕ. ಜಿಲ್ಲೆಯ ಪ್ರತಿಷ್ಟಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾದಅಕ್ಷಯಕೋ-ಆಪ್‍ರೇಟಿವ್ಹ್‍ಕ್ರೆಡಿಟ್ ಸೊಸೈಟಿ ಲಿ., ಕಾರವಾರ ಸನ್ 2020-21 ನೇ ಸಾಲಿನಲ್ಲಿರೂ. 1.02 ಕೋಟಿನಿವ್ವಳ ಲಾಭ ಗಳಿಸಿದೆ. ಠೇವು ಸಂಗ್ರಹಣೆಯಲ್ಲಿಗಣನೀಯ ಸಾಧನೆ ಮಾಡಿದ್ದು, 2020-21 ನೇ ಆರ್ಥಿಕವರ್ಷಾಂತ್ಯಕ್ಕೆಅಂತೂ ಠೇವಣಿಗಳು ರೂ.159.31ಕೋಟಿ ಗಳಿಗೆ ತಲುಪಿದೆ,ದುಡಿಯುವ ಬಂಡವಾಳ ರೂ.173.12ಕೋಟಿಗಳಷ್ಟಾಗಿದೆ, ಸಂಘದಲ್ಲಿ ನಿಧಿಗಳು ರೂ. 8.39ಕೋಟಿಗಳಿದ್ದು, ಗುಂತಾವಣೆಗಳು ರೂ. 69.99ಕೋಟಿಗಳಷ್ಟಿವೆ.
ಸಂಘವು ಪ್ರಾರಂಭದಿಂದಲೂ ಸ್ವಂತ ಬಂಡವಾಳದಲ್ಲಿ ಪ್ರಗತಿ ಸಾಧಿಸಿದ್ದು, ಇತರೇಯಾವುದೇ ಬ್ಯಾಂಕುಅಥವಾ ಸಂಘ-ಸಂಸ್ಥೆಗಳಿಂದ ಸಾಲ ಪಡೆದಿರುವುದಿಲ್ಲವೆಂಬುದು ಹೆಮ್ಮೆಯ ವಿಷಯ.ಕೋರೊನಾದಿಂದಆರ್ಥಿಕ ಪರಿಸ್ಥಿತಿ ಹದಗೆಟ್ಟರೂ ಸಹ ಸಂಘದಆರ್ಥಿಕಅಭಿವೃಧ್ದಿಗೆ ಸಹಕಾರಿಯಾದ ಸಮಸ್ತ ಶೇರುದಾರರಿಗೆ, ಗ್ರಾಹಕರಿಗೆ ಹಾಗೂ ಹಿತೈಷಿಗಳಿಗೆ ಮತ್ತು ಸಂಘದ ಸಿಬ್ಬಂದಿಗಳಿಗೆ ಸಂಘ ಧನ್ಯವಾದ ತಿಳಿಸಿದೆ.. ಸಂಘದಅಭಿವೃಧ್ಧಿಗೆ ಮಾರ್ಗದರ್ಶನ ನೀಡಿದ ಆಡಳಿತ ಮಂಡಳಿಯ ಸಮಸ್ತ ಸದಸ್ಯರಿಗೆ ಹಾಗೂ ಸಹಕಾರ ನೀಡಿದನಿಬಂಧಕರು, ಜಂಟಿ ನಿಬಂಧಕರು, ಸಹಕಾರ ಸಂಘಗಳು ಬೆಂಗಳೂರು, ಉಪ ನಿಬಂಧಕರು, ಕಾರವಾರ ಹಾಗೂ ಸಹಾಯಕ ನಿಬಂಧಕರು, ಕಾರವಾರ, ಕುಮಟಾ ಹಾಗೂ ಶಿರಸಿ ಇವರೆಲ್ಲರಿಗೂತುಂಬು ಹೃದಯದ ಧನ್ಯವಾದಗಳನ್ನು ಸಂಘದಅಧ್ಯಕ್ಷರಾದ ಲುಕಾಸ್‍ಆರ್. ಫರ್ನಾಂಡಿಸ್‍ರವರುತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಬ್ಬಗೋಡ ಸಾಂಬ ಸದಾಶಿವ ದೇವಾಲಯದಲ್ಲಿ 4 ದಿನ ಕಾರ್ಯಕ್ರಮ ದೇವರ ಪುನಃ ಪ್ರತಿಷ್ಠಾ ಸಮಾರಂಭ
ಸಿದ್ದಾಪುರ- : ಗುಬ್ಬಗೋಡ ಶ್ರೀ ಸಾಂಬಸದಾಶಿವ ದೇವರಪುನಃ ಪ್ರತಿಷ್ಠಾ ಸಮಾರಂಭ, ನೂತನವಾಗಿ ನಿರ್ಮಿಸಿದ ದೇವಾಲಯದ ಸಮುಚ್ಛಯದಲ್ಲಿ ಮೂಲ ಬೃಂದಾವನ ಲೋಕಾರ್ಪಣೆ ಮತ್ತು ಶಿಖರ ಕಲಶ ಪ್ರತಿಷ್ಠಾ ವಿಧಾನಗಳನ್ನು ನಾಲ್ಕು ದಿನಗಳ ಪರ್ಯಂತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾ ಯಿತು.
ಶ್ರೀ ಪರಮಪೂಜ್ಯ ಸದ್ಗುರು ಸಮರ್ಥ ರಾಮ ಅವದೂತರು ಸಾನ್ನಿಧ್ಯ ವಹಿಸಿದ್ದು, ವೇದ ವಿದ್ವಾಂಸ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ವೈದಿಕ ವೃಂದದೊಂದಿಗೆ ಕಾರ್ಯಕ್ರಮ ನಡೆಸಲಾಯಿತು.
ವಾಸ್ತುರಾಕ್ಷೋಘ್ನ ಹೋಮ, ಬಲಿಪೂಜೆ, ಮೂಲಶಕ್ತಿ ಹೋಮ, ಶಿವಾಧಿವಾಸ ಹೋಮ, ಶ್ರೀ ರುದ್ರ ಹೋಮ ಇತ್ಯಾದಿ ಧಾರ್ಮಿಕ ವಿಧಾನಗಳನ್ನು ನಡೆಸಿದ್ದು ನಾಲ್ಕು ದಿನವೂ ಅನ್ನಸಂತರ್ಪಣೆ ನಡೆದಿದ್ದು ಸಹಸ್ರಾರು ಭಕ್ತಾದಿಗಳು ನಿತ್ಯವೂ ಆಗಮಿಸಿದ್ದರು.
ಕೊನೆಯ ದಿನದ ಹೋಮಗಳ ಪೂರ್ಣಾಹುತಿಯೊಂದಿಗೆ ವಿದ್ವಾಂಸ ಶಂಕರ ಭಟ್ಟ ಕಟ್ಟೆ ಅವರು ಮಾತನಾಡಿ – ಗುಬ್ಬಗೋಡ ಗ್ರಾಮದೇವತೆ ಶ್ರೀ ಸಾಂಬಸದಾಶಿವ ದೇವರ ಪುನಃ ಪ್ರತಿಷ್ಠಾ ಸಮಾರಂಭ ಧಾರ್ಮಿಕ ವಿಧಿವಿಧಾನದೊಂದಿಗೆ ಸಾಗಿದ್ದು ದೇವಾಲಯದ ನೂತನ ಕಟ್ಟಡ, ಮೂಲಬೃಂದಾವನ ಲೋಕಾರ್ಪಣೆಗೊಂಡಿದ್ದು ಎಲ್ಲರಿಗೂ ಸನ್ಮಂಗಳ ಉಂಟು ಮಾಡಲಿ ಎಂದು ಹೇಳಿದರು.
ಈ ಸಮಾರಂಭದಲ್ಲಿ ಸ್ಥಳೀಯ ಟಿ.ಎಂ.ಎಸ್. ಅಧ್ಯಕ್ಷ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಆರ್.ಎಂ. ಹೆಗಡೆ ಬಾಳೇಸರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಟಿ. ನಾಯ್ಕ, ಎಸ್.ಕೆ. ಭಾಗವತ, ಶಿರಸಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ, ಹೈಕೋರ್ಟ್ ನ್ಯಾಯವಾದಿ ಎಸ್.ಆರ್. ಹೆಗಡೆ ನೈಗಾರ, ನಿವೃತ್ತ ಮುಖ್ಯಶಿಕ್ಷಕ ಎನ್.ವಿ. ಹೆಗಡೆ ಸಣ್ಮನೆ, ಸಾಮಾಜಿಕ ಕಾರ್ಯಕರ್ತ ಆನಂದ ಗೌಡರ್ ಗೊಣವತ್ತಿ, ಶಿರಸಿ, ಪ್ರಾಧ್ಯಾಪಕ ಗಣಪತಿ ಗೌಡ್, ರಾಮನಾಥ ಹೆಗಡೆ ತಲೆಕೇರಿ, ಜಿ.ಜಿ. ಹೆಗಡೆ ಬಾಳಗೋಡ, ವಿ.ಎಫ್.ಸಿ. ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಕಾರಗೋಡ, ಜಿ.ಎಂ. ಹೆಗಡೆ ಬಾಳೇಸರ, ಎಸ್.ವಿ. ಹೆಗಡೆ ಸಣ್ಮನೆ, ಮಂಜುನಾಥ ನಾಯ್ಕ ಬೂದಗಿತ್ತಿ, ಲಂಬೋದರ ಹೆಗಡೆ ಬಾಳಗೋಡ, ಜಿ.ಎಂ. ಶಾನಭಾಗ ವಂದಾನೆ, ಗಿರಿಜಾ ಶಾನಭಾಗ ವಂದಾನೆ, ಶಿವಾನಂದ ನೈಗಾರ, ವಿವೇಕ ಭಟ್ಟ ಗಡಿಹಿತ್ಲು, ಪರಮೇಶ್ವರ ಹೆಗಡೆ ಸಣ್ಮನೆ, ಗಣಪತಿ ಭಟ್ಟ ಗುಬ್ಬಗೋಡ ಮುಂತಾದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಸಂಚಾಲಕ ಪ್ರಕಾಶ ಹೆಗಡೆ ಸ್ವಾಗತಿಸಿದರು.
ನಮ್ಮ ಎಲ್ಲ ಅಂಗಾಂಗಗಳಲ್ಲೂ ಕಣ್ಣು ಎನ್ನುವುದು ಬಲು ಮುಖ್ಯವಾದುದು. ಕಣ್ಣಿನ ದೃಷ್ಟಿಯೇ ಬದುಕಿನ ಮೂಲ ಆಧಾರವಾಗಿದೆ. ಬೆಳಕಿದ್ದರೂ ಪ್ರಪಂಚವನ್ನು ಪ್ರವೇಶಿಸುವುದಕ್ಕೆ ಶರೀರದ ಕಣ್ಣುಗಳೆರಡರ ಸಹಾಯವಿಲ್ಲದಿದ್ದರೆ ನಾವು ಪರಾಧೀನರಾಗುತ್ತೇವೆ ಎಂದು ಹಿರಿಯ ನ್ಯಾಯವಾದಿಗಳಾದ ಜೆ.ಪಿ.ಎನ್. ಹೆಗಡೆ ಹರಗಿ ಹೇಳಿದರು. ಅವರು ಕೃಷಿಪರಿವಾರ ಇಟಗಿ, ಆರೋಗ್ಯ ಭಾರತಿ ಸಿದ್ದಾಪುರ ಹಾಗೂ ಸ್ಪಂದನ ಸೇವಾ ಸಂಸ್ಥೆ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಕಿ ಇಟಗಿಯ ರಾಮೇಶ್ವರ ವಿದ್ಯೋದಯ ಪ್ರೌಢಶಾಲೆಯ ಸುವರ್ಣ ಭವನದಲ್ಲಿ ನಡೆದ “ಉಚಿತ ಕಣ್ಣು ತಪಾಸಣಾ ಶಿಬಿರ”ವನ್ನು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಂತರಂಗದ ಕಣ್ಣು ಹಾಗೂ ಬಹಿರಂಗದ ಕಣ್ಣು ಸರಿಯಾಗಿದ್ದಾಗ ಮಾತ್ರ ಮನುಷ್ಯನ ಬಾಳಿನ ಸಾಧನೆಯ ಹಾದಿಯು ತೆರೆದುಕೊಳ್ಳುತ್ತದೆ. ನಾವು ಕಣ್ಣುಗಳನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕು. ಉನ್ನತ ವ್ಯಾಸಂಗ ಮಾಡಿದ ವೈದ್ಯರುಗಳು ಹಳ್ಳಿಯತ್ತ ಮುಖ ಮಾಡಿರುವುದು ಶ್ಲಾಘನೀಯ. ರೋಗವು ಉಲ್ಭಣಾವಸ್ತೆಗೆ ತಲುಪುವ ಮೊದಲೇ ಪತ್ತೆ ಹಚ್ಚಿದರೆ ಚಿಕಿತ್ಸೆಯು ಅತ್ಯಂತ ಸುಲಭವಾಗುತ್ತದೆ. ಹಾಗಾಗಿ ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಜನರಿಗೆ ಈ ತಪಾಸಣಾ ಶಿಬಿರವು ಪ್ರಯೋಜನಕಾರಿಯಾಗಿದೆ ಎಂದರು.
ಶಿರ್ಸಿ ಕಣ್ಣಿನ ಆಸ್ಪತ್ರೆ ಯ ಡಾ. ಹರ್ಷ ನಾಡಿಗೇರ ಅವರು ಮಾತನಾಡಿ ಸಕ್ಕರೆ ಖಾಯಿಲೆ ಹಾಗೂ ಅಧಿಕ ರಕ್ತದೊತ್ತಡದಂತ ರೋಗಗಳಿರುವವರು ಆಯಾ ಅವಧಿಗೆ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಅಗತ್ಯವಾಗಿದೆ. ಇದರ ಅರಿವಿರದ ಎಷ್ಟೋ ಜನರು ತಮ್ಮ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಮೊದಲೇ ಗೊತ್ತಾದರೆ ಆಗುವ ಆಘಾ ತವನ್ನು ತಡೆಗಟ್ಟಬಹುದು.ಲೇಸರ್ ಚಿಕಿತ್ಸೆಯೇ ಮೊದಲಾಗಿ ಅತ್ಯಂತ ಆಧುನಿಕ ಸಲಕರಣೆಗಳೊಂದಿಗೆ ನಮ್ಮ ಶಿರ್ಸಿ ಕಣ್ಣಿನ ಆಸ್ಪತ್ರೆಯ ಜನರ ಸೇವೆಗೆ ಸಿದ್ದವಾಗಿದೆ.
ಅಗತ್ಯವಿರುವ ಜನರು ಇದನ್ನು ಸದುಪಯೋಗ ಪಡೆದುಕೊಳ್ಳಿ ಎಂದರು. ಜಿಲ್ಲಾ ಸಂಯೋಜಕ ನಾಗೇಶ ಅವರು ಆರೋಗ್ಯಭಾರತಿಯ ಚಟುವಟಿಕೆಗಳ ಸ್ಥೂಲ ಪರಿಚಯ ಮಾಡಿದರು. ಆರೋಗ್ಯಭಾರತಿಯ ಸಿದ್ದಾಪುರ ಶಾಖೆಯ ಅಧ್ಯಕ್ಷ ಡಾ.ವಿಶ್ವನಾಥ ಅರಳಿಕಟ್ಟಿ, ಕಾರ್ಯದರ್ಶಿ ಡಾ. ಭಾರತೀಶ ನಾಡಿಗೇರ, ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಹಾಗೂ ಜಿ.ಪಂ.ಸದಸ್ಯ ನಾಗರಾಜ ನಾಯ್ಕ ಬೇಢ್ಕಣಿ ಉಪಸ್ಥಿತ ರಿದ್ದರು. ಕೃಷಿ ಪರಿವಾರದ ಅಧ್ಯಕ್ಷ ಗೋವಿಂದರಾಜ ಹೆಗಡೆ ತಾರಗೋಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರ. ಕಾರ್ಯದರ್ಶಿ ಇಟಗಿ ಮಹಾಬಲೇಶ್ವರ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಗಜಾನನ ಹೆಗಡೆ ಕೊಡ್ತಗಣಿ ವಂದನಾರ್ಪಣೆಗೈದರು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ ನೂರ ಮೂರು ಮಂದಿ ತಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಂಡರು. ಸ್ಪಂದನ ಸೇವಾ ಸಂಸ್ಥೆಯ ವತಿಯಿಂದ ಉಚಿತ ಮಧುಮೇಹ ಪರೀಕ್ಷೆ ನಡೆಯಿತು. ಸಿದ್ದಾಪುರದ ಶಿವಾನಿ ಒಪ್ಟಿಕಲ್ಸ್ ಇವರು ಕಣ್ಣಿನ ಪರೀಕ್ಷೆ ನಡೆಸಲು ಸಹಕರಿಸಿದರು.
