
ಸೆಲ್ಫಿ ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಳಿನದಿಗೆ ಬಿದ್ದಿದ್ದ ಯುವತಿ, ಯುವಕನ ಶವಗಳು ಪತ್ತೆಯಾಗಿದೆ.

ಕಾರವಾರ: ಸೆಲ್ಫಿ ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಳಿನದಿಗೆ ಬಿದ್ದಿದ್ದ ಯುವತಿ, ಯುವಕನ ಶವಗಳು ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆ ಜೊಯಿಡಾ ತಾಲೂಕಿನ ಸೂಪ ಅಣೆಕಟ್ಟೆ ಸಮೀಪ ನಡೆದಿದ್ದ ಅವಘಡದಲ್ಲಿ ಬೀದರ್ ಮೂಲದ ರಕ್ಷಾ ಹಾಗೂ ಆಕೆಯ ಸ್ನೇಹಿತ ಮೃತಪಟ್ಟಿದ್ದಾರೆ.
ಮಂಗಳವಾರ ಅಗ್ನಿಶಾಮಕ ದಳ, ಪೋಲೀಸರು ಹಾಗೂ ಸ್ಥಳೀಯರು ಇಬ್ಬರ ಶವಗಳನ್ನೂ ಹೊರತೆಗೆದಿದ್ದಾರೆ. ಈ ವೇಳೆ ಮೃತ ಯುವಕ ಸಹ ಬೀದರ್ ಮೂಲದ ಪುರುಷೋತ್ತಮ ಪಾಟೀಲ್ ಎಂದು ತಿಳಿದುಬಂದಿದೆ.
ಈ ಸಂಬಂಧ ಸ್ಥಳೀಯ ರಾಮನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (kpc)
