

ಮೇ ತಿಂಗಳಲ್ಲಿ ಮದುವೆಯಾಗಬೇಕಿದ್ದ ಸಿದ್ಧಾಪುರ ರವೀಂದ್ರನಗರದ ಯುವಕ ಶ್ರೀಧರ ಅಂಬಿಗ ಸೋಮವಾರ ರಾತ್ರಿ ವೇಳೆ ನಗರದ ಹೊಸೂರಿನ ಪುಟ್ಟಪ್ಪನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ನಗರದ ಅನೂಪ್ ಇಂಡಸ್ಟ್ರೀಸ್ ನ ಜೆ.ಸಿ.ಬಿ. ವಾಹನ ಚಾಲಕನಾಗಿ ಕೆಲಸ ಮಾಡುತಿದ್ದ ಈ 27 ವರ್ಷದ ಶ್ರೀಧರ ಭಾಸ್ಕರ್ ಅಂಬಿಗ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದು ಈತ ಪ್ರೀತಿಸುತಿದ್ದ ಹುಡುಗಿಯೊಂದಿಗೇ ಮೇ ತಿಂಗಳಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಸೋಮುವಾರ ತನ್ನ ದ್ವಿಚಕ್ರವಾಹದಲ್ಲಿ ಎಂದಿನಂತೆ ಕೆಲಸಕ್ಕೆ ಹೋದವನು ರಾತ್ರಿ ಮರಳಿ ಬರಲಿಲ್ಲ, ಮುಂಜಾನೆ ಪುಟ್ಟಪ್ಪನ ಕೆರೆ ಬಳಿ ನಿಂತಿದ್ದ ವಾಹನದಿಂದಾಗಿ ಆತ್ಮಹತ್ಯೆಯ ವಿಚಾರ ತಿಳಿದಿದ್ದು ಸ್ಥಳಿಯ ಅಗ್ನಿಶಾಮಕ ಸೇವೆ ಮೃತ ಶ್ರೀಧರನ ಶವ ತೆಗೆದು ವಾರಸುದಾರರಿಗೆ ಒಪ್ಪಿಸಿದೆ.


