

ಸಿದ್ದಾಪುರ : ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿ ಅಸಮಾನತೆಯ ವಿರುದ್ಧ ಹೋರಾಟ ಮಾಡಿದರು. ಸ್ವಾತಂತ್ರ್ಯ, ಸಮಾನತೆ,ಭ್ರಾತೃತ್ವ, ಸಹೋದರತೆಯ ಬಗ್ಗೆ ಪ್ರತಿಪಾದನೆ ಮಾಡಿದರು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ವಸಂತ ನಾಯ್ಕ ಅಭಿಪ್ರಾಯ ಪಟ್ಟರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯ್ತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಕ್ಷೇಮಾಭಿವೃದ್ಧಿ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅತಿದೊಡ್ಡ ಲಿಖಿತ ಸಂವಿಧಾನ ಬರೆದುಕೊಟ್ಟ ಡಾ.ಅಂಬೇಡ್ಕರ್, ಎಲ್ಲರ ಸಮಾನತೆಯ ಸಲುವಾಗಿ ಸಂವಿಧಾನವನ್ನು ರಚನೆ ಮಾಡಿದರು ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಗೋಪಾಲ ನಾಯ್ಕ ಉಪನ್ಯಾಸ ನೀಡಿದರು. ತಹಶೀಲ್ದಾರ್ ಪ್ರಸಾದ್ ಎಸ್.ಎ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ದಾಕ್ಷಾಯಿಣಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಸದಸ್ಯೆ ಗಿರಿಜಾ ಗೌಡ, ಯೋಜನಾಧಿಕಾರಿ ಎನ್.ಆರ್.ಹೆಗಡೇಕರ್, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೇಗುಂಡಿ, ಸದಸ್ಯ ವೆಂಕೋಬ, ಪರಿಶಿಷ್ಟ ಜಾತಿ, ವರ್ಗಗಳ ನೌಕರರ ಸಂಘದ ಅಧ್ಯಕ್ಷ ಆರ್.ಬಿ.ರಾಠೋಡ, ಪಿಎಸ್ಐ ಮಹಾಂತಪ್ಪ ಕುಂಬಾರ, ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ ಬೋರಕರ್, ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಕೆ.ಶಿವಾನಂದ ಇದ್ದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಪಿ.ನರೋನಾ ಸ್ವಾಗತಿಸಿದರು. ಕವಿತಾ ನಿರೂಪಿಸಿದರು.
08 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಬಂಧಿಸಿದ ಹೊನ್ನಾವರ ಪೊಲೀಸರು :
2012 ರಲ್ಲಿನ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 132/2012 ಕಲಂ 341,323,324,504,506 ಐಪಿಸಿ ಪ್ರಕರಣದಲ್ಲಿ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಹೊನ್ನಾವರ ದಿಂದ ವಾರೆಂಟ್ ಹೊರಡಿಸಲಾಗಿದ್ದರೂ 08 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಶಿವಾನಂದ ಹೊನ್ನಪ್ಪ ನಾಯ್ಕ ಪ್ರಾಯ 37 ವರ್ಷ, ಸಾ// ಗುಂಡಬಾಳ ಮುಟ್ಟಾ, ಹೊನ್ನಾವರ ತಾಲೂಕು ಈತನನ್ನು ದಿನಾಂಕ 12-04-2021 ರಂದು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿರುತ್ತದೆ.
ಶ್ರೀ ಶಿವಪ್ರಕಾಶ ದೇವರಾಜು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ, ಶ್ರೀ ಬದ್ರಿನಾಥ ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ಶ್ರೀ ಬೆಳ್ಳಿಯಪ್ಪ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಭಟ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀಧರ್ ಎಸ್.ಆರ್ ಸಿಪಿಐ ಹೊನ್ನಾವರ ರವರ ನೇತೃತ್ವದಲ್ಲಿ ಹೊನ್ನಾವರ ಠಾಣೆಯ ಶ್ರೀ ಶಶಿಕುಮಾರ ಪಿ.ಎಸ್.ಐ ಕಾ&ಸು, ಶ್ರೀಮತಿ ಸಾವಿತ್ರಿ ನಾಯಕ ಪಿ.ಎಸ್.ಐ ಅಪರಾಧ ವಿಭಾಗ , ವಿಶೇಷವಾಗಿ ಸಿಬ್ಬಂದಿಯವರಾದ ಶ್ರೀ ಕೃಷ್ಣಾ ಗೌಡ ಸಿ.ಎಚ್.ಸಿ, ಮಹಾವೀರ ಸಿ.ಪಿ.ಸಿ, ರಮೇಶ ಲಮಾಣಿ ಸಿಪಿಸಿ, ವಿದ್ಯಾ ಆಚಾರಿ ಮಹಿಳಾ ಪಿ.ಸಿ ಇವರುಗಳ ತಂಡ 08 ವರ್ಷಗಳಿಂದ ಪತ್ತೆಯಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ.
ಪತ್ತೆ ಕಾರ್ಯ ಕೈಗೊಂಡ ತಂಡದಲ್ಲಿದ್ದ ಪೊಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.


ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ಬನವಾಸಿ ಪೊಲೀಸ್ ಪ್ರಕರಣ ಸಂಖ್ಯೆ: ಎಸ್,ಸಿ ನ0:5033/2109 , ಮೇಲ್ಕಾಣಿಸಿದ ಪ್ರಕರಣದಲ್ಲಿ ದಿನಾಂಕ: 20-02-2019 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಶಿರಸಿ ತಾಲೂಕು ಬದನಗೋಡ ಗ್ರಾಮದ ಗೊಲ್ಲಕೆರೀಯಲ್ಲಿ ವಾಸವಿರುವ ಈ ಪ್ರಕರಣದ ಆರೋಪಿತನದ ರಮೇಶ ದಾಸಪ್ಪ ಗೊಲ್ಲರ , ಸಾ// ಬದನಗೋಡ, ಬನವಾಸಿ, ತಾ// ಶಿರಸಿ ಈತನ ಮನೆಯ ಪಕ್ಕದ ಮನೆಯಲ್ಲಿ ವಾಸವಿರುವ ಆರೋಪಿತನ ಅಜ್ಜಿಯಾದ ಶ್ರೀಮತಿ ಪುಟ್ಟಮ್ಮ ಕೊಂ. ಗುರುವಪ್ಪ ಗೊಲ್ಲರ , ಪ್ರಾಯ:-70 ವರ್ಷ , ಇವಳನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿತನು ಹರಿತವಾದ ಕತ್ತಿಯಿಂದ ತಲೆಯನ್ನು ಕಡೆದು ಕೊಲೆ ಮಾಡಿದ ಬಗ್ಗೆ ಬನವಾಸಿ ಪೊಲೀಸ್ ಠಾಣಾ ಗುನ್ನಾ ನ0 09/2019 ಕಲಂ 302 ಐ,ಪಿ,ಸಿ, ಪ್ರಕರಣವನ್ನು ಶ್ರೀ ಜೆ, ಬಿ ಸೀತಾರಾಮ ಪಿಎಸ್ಐ (ಕಾ.ಸು) ಬನವಾಸಿ ಪೊಲೀಸ್ ಠಾಣೆರವರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖಾ ಸಹಾಯಕರಾದ ಸಿಪಿಸಿ 945 ಗುರುರಾಜ ಜಿ ನಾಯ್ಕ ಹಾಗೂ ಶ್ರೀ ಗಿರೀಶ ಬಿ. ಸಿಪಿಐ ಶಿರಸಿ ವೃತ್ತ ರವರು ಸೂಕ್ತವಾದ ತನಿಖೆ ನಡೆಸಿ, ಸಾಕ್ಷಿ ಪುರಾವೆ ಸಹಿತ ಆರೋಪಿತನನ್ನು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ದೋಷಾರೊಪಣ ಪತ್ರ ಸಲ್ಲಿಸಿದ್ದು ಇರುತ್ತದೆ. ತನಿಖಾಧಿಕಾರಿ ಹಾಜರುಪಡಿಸಿದ ಎಲ್ಲಾ ಸಾಕ್ಷಗಳನ್ನು ನ್ಯಾಯಾಲಯವು ಕೂಲಂಕುಷವಾಗಿ ವಿಚಾರಣೆ ನಡೆಸಿ ಸದ್ರಿ ಪ್ರಕರಣದಲ್ಲಿ ಆರೋಪುತನ ವಿರುದ್ದ ಅಪರಾಧ ಸಾಬಿತಾಗಿದೆಯೆಂದು ದಿನಾಂಕ 12/04/2021 ರಂದು ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿರಸಿ ನ್ಯಾಯಾಧೀಶರಾದ ಶ್ರೀ ಶಾಂತವೀರ ಶಿವಪ್ಪ ರವರು ಆರೋಪಿತನಿಗೆ ಆಜೀವ ಕಾರಾಗೃಹ ವಾಸ ಶಿಕ್ಷೆ ವಿದಿಸಿದ್ದು ಇರುತ್ತದೆ. ಸದ್ರಿ ಪ್ರಕರಣದಲ್ಲಿ ಸರಕಾರದ ಪರ ಸರಕಾರಿ ಅಭಿಯೋಜಕರಾದ ಶ್ರೀಮತಿ ಸುನಂದಾ ಮಡಿವಾಳರ ರವರು ಎಲ್ಲಾ ಸಾಕ್ಷಿಗಳನ್ನು ವಿಚಾರಮಾಡಿ ವಾದ ಮಂಡಿಸಿದ್ದು ಇರುತ್ತದೆ. ಹಾಗೂ ಬನವಾಸಿ ಪೊಲೀಸ್ ಠಾಣೆಯ ಸಿಪಿಸಿ 1054 ಮೈಲಾರಪ್ಪ ಮುಳಗುಂದ ಇವರು ಎಲ್ಲಾ ಸಾಕ್ಷಿಗಳಿಗೆ ಸೂಕ್ತ ತಿಳುವಳಿಕೆ ನೀಡಿ ಸಾಕ್ಷಿ ಹೇಳಲು ಶ್ರಮಿಸಿರುತ್ತಾರೆ. ಈ ಪ್ರಕರಣದಲ್ಲಿ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಶಿವಪ್ರಕಾಶ ದೇವರಾಜ ಐಪಿಎಸ್ ಸಾಹೇಬರ ಮಾರ್ಗದರ್ಶನದಲ್ಲಿ ಸೂಕ್ತ ತನಿಖೆ ನಡೆಸಿದ ಶ್ರೀ ಗಿರೀಶ ಬಿ. ಸಿಪಿಐ ಶಿರಸಿ, ಶ್ರೀ ಜೆ. ಬಿ. ಸೀತಾರಾಮ ಪಿಎಸ್ಐ (ಕಾ.ಸು) ಬನವಾಸಿ ಪೊಲಿಸ್ ಠಾಣೆಯ ತನಿಖಾ ಸಹಾಯಕರಾದ ಸಿಪಿಸಿ 945 ಗುರುರಾಜ ಜಿ ನಾಯ್ಕ, ಬನವಾಸಿ ಪೊಲೀಸ್ ಠಾಣೆಯ ಕೊರ್ಟ ವಾಚ್ ಕರ್ತವ್ಯದ ಸಿಪಿಸಿ 1054 ಮೈಲಾರಪ್ಪ ಮುಳಗುಂದ ಮತ್ತು ವಿಚಾರಣೆಯನ್ನು ಮಂಡಿಸಿದ ಸರಕಾರಿ ಅಭಿಯೋಜಕರಾದ ಶ್ರೀಮತಿ ಸುನಂದ ಮಡಿವಾಳರ ರವರ ಕಾರ್ಯಕ್ಕೆ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಶಿವಪ್ರಕಾಶ ದೇವರಾಜು ಐಪಿಎಸ್ ಸಾಹೇಬರು ಅಭಿನಂದಿಸಿರುತ್ತಾರೆ.



