
ಮೂರು ತಿಂಗಳ ಅವಳಿ ಶಿಶುಗಳ ತಾಯಿ ಮಾನಸಿಕ ಕ್ಷೋಭೆಗೊಳಗಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಿದ್ಧಾಪುರ ಬೇಡ್ಕಣಿಯಲ್ಲಿ ನಡೆದಿದೆ. ಅಕ್ಷತಾ ಕೋಂ ರಮೇಶ್ ನಾಯ್ಕ ಕೋಲಶಿರ್ಸಿಯ ಮಹಿಳೆಯಾಗಿದ್ದು ತನ್ನ ತವರು ಮನೆ ಬೇಡ್ಕಣಿಯಲ್ಲಿ ಮಂಗಳವಾರ ಸರ್ಕಾರಿ ಬಾವಿಗೆ ಹಾರಿ ಪ್ರಾಣತೆತ್ತ 27 ವರ್ಷದ ದುರ್ದೈವಿಯಾಗಿದ್ದಾಳೆ.
ಹಿಂದಿನ ವರ್ಷ ಮೇ ತಿಂಗಳಲ್ಲಿ ಮದುವೆಯಾಗಿದ್ದ ಈಕೆ ಗಂಡನಮನೆ ಕೋಲಶಿರ್ಸಿಯಿಂದ ತವರು ಮನೆ ಬೇಡ್ಕಣಿಗೆ ತೆರಳಿ 6 ತಿಂಗಳು ಕಳೆದಿದ್ದವು. ಕಳೆದ ಮೂರು ತಿಂಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮನೀಡಿದ್ದ ತಾಯಿ ಅಕ್ಷತಾ ಕೆಲವು ದಿವಸಗಳ ಹೊಂದೆ ತಲೆಸುತ್ತಿನ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದಳು. ಯುಗಾದಿಯ ರಾತ್ರಿ 8ರಿಂದ 9 ಘಂಟೆಯ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಭಟ್ಕಳದಲ್ಲಿ ಸಾರಿಗೆ ನೌಕರರ ಗಲಾಟೆ 5 ಕ್ಕಿಂತ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು- ಸಾರಿಗೆ ಮುಷ್ಕರದ ಅವಧಿಯಲ್ಲಿ ಸೇವೆಗೆ ಹಾಜರಾದ ಬಗ್ಗೆ ಆಕ್ಷೇಪಿಸಿ ಭಟ್ಕಳ ಘಟಕ ವ್ಯವಸ್ಥಾಪಕ ಜನಾರ್ಧನ್ ಶಂಕರ ದಿವಾಕರ್ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಆರೋಪದ ಮೇಲೆ ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳಾದ 5 ಕ್ಕೂ ಹೆಚ್ಚು ಜನರ ಮೇಲೆ ಭಟ್ಕಳದಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಕುಮಾರ ಡುಣಗೆ ಆನಂದ ಮತ್ತು ಮಹೇಶ್ ನಾಯ್ಕ, ವಸಂತ ಮತ್ತು ಸತೀಶ್ ನಾಯ್ಕ ಸೇರಿದ ಇತರರು ಯುಗಾದಿಯ ದಿನ ಸಾರಿಗೆ ನೌಕರರ ಸಂಘಟನೆಯ ಮುಷ್ಕರದ ಕರೆ ನಡುವೆಯೂ ಸೇವೆಗೆ ಹಾಜರಾಗಿ ಸಾರಿಗೆ ನೌಕರರ ಸಾಮೂಹಿಕ ತೀರ್ಮಾನಕ್ಕೆ ವಿರುದ್ಧವಾಗಿ ವರ್ತಿಸಿದ ತಮ್ಮ ಹಿರಿಯ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಆರೋಪಿಸಿ, ಪ್ರಕರಣ ದಾಖಲಿಸಲಾಗಿದೆ.
