

ಸಿದ್ದಾಪುರ: ಅಂಬೇಡ್ಕರ್ ತತ್ವ ಸಿದ್ದಾಂತ ಅಳವಡಿಸಿಕೊಳ್ಳುವಂತೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಮಡಿವಾಳ ಕಡಕೇರಿ ಕರೆ ನೀಡಿದರು
ಅವರು ಉತ್ತರ ಕನ್ನಡ ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಬೀಮ ಯಾತ್ರೆ ಉದ್ದೇಶಿಸಿ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಮಾತನಾಡಿದರು.
ಅಂಬೇಡ್ಕರ್ ಕೊಡುಗೆಗಳು ನಿರಂತರವಾಗಿ ಉಳಿಯಬೇಕಾದರೆ ಜಯಂತಿಗಳನ್ನು ನಿರಂತರವಾಗಿ ಮಾಡುತ್ತಿರಬೇಕು ವಿನೂತನ ಕಾರ್ಯಕ್ರಮದೊಂದಿಗೆ ಎಸ್ ಸಿ ಮೋರ್ಚಾ ಅಂಬೇಡ್ಕರವರ ನೆನಪನ್ನ ಹಸಿರಾಗಿಸಿದೆ .ಇಂದು ಮೋದಿ ಇಡೀ ಜಗತ್ತು ಭಾರತವನ್ನು ನೋಡುವ ರೀತಿ ಮಾಡಿದ್ದಾರೆ ಅದೇ ರೀತಿ 130 ವರ್ಷಗಳ ಹಿಂದೆ ಜಗತ್ತು ಭಾರತದತ್ತ ನೋಡುವಂತೆ ಅಂಬೇಡ್ಕರ್ ಅವರು ಮಾಡಿದ್ದಾರೆ ಇದು ಪ್ರೇರಣಾದಾಯಕ ಎಂದರು
ಪಟ್ಟಣ ಪಂಚಾಯತಿ ಸದಸ್ಯ ಗುರು ಶಾನಬಾಗ ಮಾತನಾಡಿದರು.
ಬಿಜೆಪಿ ಉತ್ತರ ಕನ್ನಡ ಎಸ್ ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಭೀಮಯಾತ್ರೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮೂಲಕ ಸಿದ್ದಾಪುರ ದಿ. ರಾಮಕೃಷ್ಣ ವ್ರತ್ತಕ್ಕೆ ಆಗಮಿಸಿತು. , ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಉದಯ ಬಶೆಟ್ಟಿ, ಕಾರ್ಯದರ್ಶಿ ನಂದನ ಬೋರಕರ, ಎಸ್ ಕೆ ಮೇಸ್ತ, ಪಟ್ಟಣ ಪಂಚಾಯತ ಅಧ್ಯಕ್ಷೆ,ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿಕುಮಾರ್ ನಾಯ್ಕ,ಸ್ಥಾಯಿ ಸಮಿತಿ ಅಧ್ಯಕ್ಷ ವಿನಯ ಹೊನ್ನೇಗುಂಡಿ,ಸದಸ್ಯರಾದ ಮಾರುತಿ ನಾಯ್ಕ,ಯಶೋದಾ ನಾಯ್ಕ,ಮಾಜಿ ಅಧ್ಯಕ್ಷೆ ಸುಮನಾ ಕಾಮತ್ ಉಪಸ್ಥಿತರಿದ್ದರು.


ಕನಕಪುರದ ಸಹೋದರರಿಬ್ಬರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಶ್ರಮಿಸುತ್ತಿದ್ದೀರಾ?’
ವಲಸೆ ನಾಯಕ ಸಿದ್ದರಾಮಯ್ಯ ಅವರ ಬಣದೊಂದಿಗೆ ನೀವೂ ಸೇರಿಕೊಂಡು ಕನಕಪುರದ ಸಹೋದರರಿಬ್ಬರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಶ್ರಮಿಸುತ್ತಿದ್ದೀರಾ? ಎಂದು ರಣದೀಪ್ ಸುರ್ಜೇವಾಲಾ ಗೆ ಬಿಜೆಪಿ ಟಾಂಗ್ ನೀಡಿದೆ.

ಬೆಂಗಳೂರು: ವಲಸೆ ನಾಯಕ ಸಿದ್ದರಾಮಯ್ಯ ಅವರ ಬಣದೊಂದಿಗೆ ನೀವೂ ಸೇರಿಕೊಂಡು ಕನಕಪುರದ ಸಹೋದರರಿಬ್ಬರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಶ್ರಮಿಸುತ್ತಿದ್ದೀರಾ? ಎಂದು ರಣದೀಪ್ ಸುರ್ಜೇವಾಲಾ ಗೆ ಬಿಜೆಪಿ ಟಾಂಗ್ ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಡಿಕೆ ಸುರೇಶ್ ಸಾಮರ್ಥ್ಯದ ಮೇಲೆ ನಿಮಗೆ ಅನುಮಾನ ಬರಲು ಕಾರಣವೇನು? ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಪ್ರಶ್ನಿಸಿದೆ.
ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಗೆದ್ದು ಸಂಸದರಾದರೆ ಬಿಜೆಪಿ ಸಂಸದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದೆ ತಲೆಭಾಗಿ ಬೇಡುವುದಿಲ್ಲ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುರ್ಜೇವಾಲ ಹೇಳಿಕೆ ನೀಡಿದ್ದರು.
ಇದಕ್ಕೆ ಟ್ವಿಟ್ಟರ್‌ನಲ್ಲಿ ಟಾಂಗ್ ನೀಡಿರುವ ಬಿಜೆಪಿ, ನಿಮ್ಮ ಮಾತಿನ ಪ್ರಕಾರ ಕನಕಪುರದ ಮಹಾನಾಯಕನ ಸಹೋದರ ಡಿಕೆ ಸುರೇಶ್ ಅಸಮರ್ಥರೇ!? ಡಿಕೆ ಸುರೇಶ್ ಅವರ ಸಾಮರ್ಥ್ಯದ ಮೇಲೆ ನಿಮಗೆ ಅನುಮಾನ ಬರಲು ಕಾರಣವೇನು? ಎಂದು ಲೇವಡಿ ಮಾಡಿದೆ. (kpc)
