


* 1996 ಹಾಗೂ 1998 ನೇ ಸಾಲಿನಲ್ಲಿ ಸಿದ್ದಾಪುರ ತಾಲೂಕಿನಲ್ಲಿ ನಡೆದ ಡಕಾಯತಿ ಕಳ್ಳತನ ಹಾಗೂ ಗಲಭೆ ಮತ್ತು ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಮದ ನಿವಾಸಿಯಾದ ಕಮಲಾಕರ್ ತಂದೆ ನಾರಾಯಣ ಕೋಡಿಯಾ ಅವನ ವಿರುದ್ಧ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಹೋದವನು ಮರಳಿ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡು ಮುಂಬೈ ಮಂಗಳೂರು ಸುಳ್ಯ ನಾಪೋಕ್ಲು ಕಡೆಗಳಲ್ಲಿ ತಲೆಮರೆಸಿಕೊಂಡಿದ್ದನು ಈಗ ಕೊಡಗು ಜಿಲ್ಲೆಯ ಪೊನ್ನoಪೇಟೆ ತಾಲೂಕಿನ ಶಿವ ಕಾಲನಿಯಲ್ಲಿ ತಲೆಮರೆಸಿಕೊಂಡು ವಾಸವಾಗಿದ್ದವನಿಗೆ ದಿನಾಂಕ 16-04-20 21ರಂದು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಅವನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳ ಪೈಕಿ 01 ಡಕಾಯಿತಿ ಪ್ರಕರಣ,01ಕಳ್ಳತನ ಪ್ರಕರಣ ಹಾಗೂ ಗಲಭೆ ಹಾಗೂ ಗಲಾಟೆಗೆ ಸಂಬಂಧಿಸಿದ 19 ಇನ್ನಿತರ ಪ್ರಕರಣಗಳು ದಾಖಲಾಗಿ ಮಾನ್ಯ ಜೆಎಂಎಫ್ ಸಿ ನ್ಯಾಯಾಲಯ ಸಿದ್ದಾಪುರದಲ್ಲಿ ವಿಚಾರಣೆಯಲ್ಲಿವೆ. ಶಿವಪ್ರಕಾಶ್ ದೇವರಾಜು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ, ಶ್ರೀ ಬದ್ರಿನಾಥ್ ಎಸ್.ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ. ರವಿ ಡಿ ನಾಯ್ಕ್ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ಅವರ ಮಾರ್ಗದರ್ಶನದಲ್ಲಿ ಶ್ರೀ ಎನ್ ಮಹೇಶ್ ಪೊಲೀಸ್ ನಿರೀಕ್ಷಕರು ಸಿದ್ದಾಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀ ಮಹಂತಪ್ಪ ಕುಂಬಾರ್ ಪಿಎಸ್ಐ ಕಾ. ಸು.01 ಹಾಗೂ ಶ್ರೀ ಮಂಜೇಶ್ವರ್ ಪಿಎಸ್ಸೈ ಅಪರಾಧ ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಸಿ ಹೆಚ್ ಸಿ 729. ಗಂಗಾಧರ್ ಹೊಂಗಲ್ ಹಾಗೂ ಸಿ ಹೆಚ್ ಸಿ 223 ರಮೇಶ್ ಕೂಡಲ್ ಮತ್ತು ಸಿಪಿಸಿ 619 ರವಿ ಜಿ ನಾಯ್ಕ್ ಇವರು ಕಳೆದ 25 ವರ್ಷಗಳಿಂದ ನಾಪತ್ತೆಯಾಗಿ ತಲೆಮರೆಸಿಕೊಂಡು ಕೊಡಗು ಜಿಲ್ಲೆಯ ಪೊನ್ನoಪೇಟೆ ತಾಲೂಕಿನ ಶಿವ ಕಾಲನಿಯಲ್ಲಿ ವಾಸ ಮಾಡಿಕೊಂಡಿದ್ದ ಆರೋಪಿತನಾದ ಕಮಲಾಕರ್ ತಂದೆ ನಾರಾಯಣ ಕೊಡಿಯಾ, 54 ವರ್ಷ, ವೃತ್ತಿ :ಕ್ಷೌರಿಕ ಕೆಲಸ. ಗ್ರಾಮ :ಹಾರ್ಸಿಕಟ್ಟ ತಾಲೂಕು :ಸಿದ್ದಾಪುರ,ಜಿಲ್ಲೆ :ಉತ್ತರ ಕನ್ನಡ, ಈತನನ್ನು ಪತ್ತೆಮಾಡಿ ದಸ್ತಗಿರಿ ಮಾಡಿ ಇಂದು ದಿನಾಂಕ 17- 04-2021 ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತಾರೆ. ಸಿದ್ದಾಪುರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಕಾರ್ಯಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ಪ್ರಶ0ಸೆ ವ್ಯಕ್ತಪಡಿಸಿರುತ್ತಾರೆ.

