

ಕಳೆದ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಮತ್ತು ಹಲ್ಲೆ ಪ್ರಕರಣದ ಆಸಾಮಿಯನ್ನು ಬಂಧಿಸಿದ ಚಿತ್ತಾಕುಲ ಪೊಲೀಸರು
1993 ರಲ್ಲಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ *ಅಪರಾಧ ಸಂಖ್ಯೆ 68/1993ಕಲಂ 143, 147, 148, 302 354, ಜತೆಗೆ 149 ಐಪಿಸಿ ಪ್ರಕರಣದಲ್ಲಿ* ಮತ್ತು ಅ. ಕ್ರ. 26/94 ಕಲಂ 324, 326 ಜತೆಗೆ 34 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ದಿಲೀಪ್ ಶಾಂತ ತ ಲೇಕರ್ ಪ್ರಾಯ 49 ವರ್ಷ, ಸಾ// ಹೊಟೇಗಾಳಿ ಕಾರವಾರ ರವರು ಪ್ರಕರಣದ ಬಳಿಕ ಗೋವಾ ರಾಜ್ಯದ ಕೊಡುಬಿ,ಮಹಾದೇವ ದೇವಸ್ಥಾನದ ಹತ್ತಿರ ಕೆಫೆಮ ತಾಲೂಕ ಎಂಬಲ್ಲಿ ಕಳೆದ 28 ವರ್ಷದಿಂದ ತಲೆಮರೆಸಿಕೊಂಡಿದ್ದನು ಈತನನ್ನು ದಿನಾಂಕ 16-04-2021 ರಂದು ಗೋವಾದಲ್ಲಿ ಪತ್ತೆ ಹಚ್ಚಲಾಗಿದೆ.
ಶ್ರೀ ಶಿವಪ್ರಕಾಶ ದೇವರಾಜು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ, ಶ್ರೀ ಬದ್ರಿನಾಥ ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ, ಅರವಿಂದ್ ಕಲಗುಜ್ಜಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಕಾರವಾರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ನಿತ್ಯಾನಂದ ಪಂಡಿತ್ ಸಿ ಪಿ ಐ ರವರ ನೇತೃತ್ವದಲ್ಲಿ ಚಿತ್ತಾಕುಲ ಠಾಣೆಯ, ಪ್ರವೀಣ್ ಕುಮಾರ್ ಕಾ&ಸು, ಕಲ್ಪನಾ ಪಿ.ಎಸ್.ಐ ಅಪರಾಧ ವಿಭಾಗ , *ವಿಶೇಷವಾಗಿ ಸಿಬ್ಬಂದಿಯವರಾದ ಅರುಣ್ ಕಾಂಬ್ಳೆ, ರಮಾನಾಥ ನಾಯ್ಕ್, ರಾಜೇಶ ನಾಯ್ಕ್, ಮಹಾದೇವ ಸಿದ್ದಿ * ಇವರುಗಳ ತಂಡ 28 ವರ್ಷಗಳಿಂದ ಪ ತ್ತೆಯಾಗದ ಆಸಾಮಿ ಯನ್ನ ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾ ರೆ. ಪತ್ತೆ ಕಾರ್ಯ ಕೈಗೊಂಡ ತಂಡದಲ್ಲಿದ್ದ ಪೊಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ *ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ ರವರು* ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

