

ಮೊನ್ನೆ ಕೇರಳದ ಗಿರಿಜನ ವಾಚ್ಮನ್ ಒಬ್ಬ ತಾನು ಹೊಟ್ಟೆಪಾಡಿನ ಉದ್ಯೋಗ ಮಾಡುತ್ತಾ ಆಯ್.ಆಯ್.ಎಂ. ಉಪನ್ಯಾಸಕನಾದ ಯಶೋಗಾಥೆಯನ್ನು ಹೇಳಿ ಜನರನ್ನು ದಂಗುಬಡಿಸಿದ್ದ.
ಅಷ್ಟು ದೂರದ ಉದಾಹರಣೆ ಏಕೆ ಎ.ಟಿ. ದಾಮೋಧರ ಎನ್ನುವ ಭಟ್ಕಳದ ಕೂಲಿಕಾರ್ಮಿಕರ ಮಗ ತಾನು ದುಡಿಮೆಗಾಗಿ ಅರಣ್ಯ ಇಲಾಖೆಯ ದಿನಗೂಲಿಯಾಗಿ ಕೆಲಸಮಾಡುತ್ತಾ ಛಲದಿಂದ ಓದಿ ifs ಮಾಡಿ ಈಗ ಲಕ್ಷದ್ವೀಪದ ಮುಖ್ಯ ಕಾರ್ಯದರ್ಶಿಯಾಗಿ ಹೆಸರುಮಾಡುತ್ತಿರುವ ದೃಷ್ಟಾಂತ ನಮ್ಮ ಮುಂದಿದೆ.
ಇತ್ತೀಚೆಗೆ ಕರ್ನಾಟಕದಿಂದ ias ಅಧಿಕಾರಿಯಾದ ಹುಕ್ಕೇರಿಯ ಪ್ರಫುಲ್ಲ ದೇಸಾಯಿ ತನ್ನ ಶ್ರಮದ ಸಾಧನೆಯ ಹಿಂದೆ ಛಲ ಬಿಟ್ಟರೆ ಮತ್ತೇನೂ ಇದ್ದಿಲ್ಲ ಎಂದಿದ್ದಾರೆ. ಕನ್ನಡ ಶಾಲೆ, ಕನ್ನಡ ಮಾಧ್ಯಮದಲ್ಲಿ ಕೇಂದ್ರ ಲೋಕಸೇವಾ ಆಯೋಗ, ರಾಜ್ಯ ಲೋಕಸೇವಾ ಆಯೋಗಗಳ ಪರೀಕ್ಷೆ ಬರೆದು ಸಾಧಿಸಿ ತೋರಿಸಿದ ಅನೇಕ ವ್ಯಕ್ತಿಗಳು ನಮ್ಮ ಮುಂದಿದ್ದಾರೆ. ಸಾಧನೆ ಸಾಧಕನ ಸ್ವತ್ತೇ ಹೊರತು ನಿರಾಶಾವಾದಿ, ಸೋಮಾರಿಯ ಸ್ವತ್ತಲ್ಲ. ಈಗ ಇಲ್ಲಿ ಕೆಲವು ಜ್ವಲಂತ ಉದಾಹರಣೆಗಳು, ಸಾಧಕರ ಸಾಹಸಗಾಥೆಗಳಿವೆ. ಇವುಗಳಿಂದ ನಿಮಗೂ ಸ್ಫರ್ತಿ ದೊರೆತರೆ ನಮ್ಮ ಶ್ರಮ ಸಾರ್ಥಕ.

