

ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ಜೋಗಿನಮನೆಯ ಮೂಲದ ಈಗಿನ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಇಂದು ನಿಧನರಾದರು. ಕಳೆದ 13 ರಿಂದ ಕರೋನಾ ಸೋಂಕಿನ ಚಿಕಿತ್ಸೆ ಪಡೆಯುತಿದ್ದ ಇವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ಕೊನೆ ಉಸಿರೆಳೆದರು. ಸಂಸ್ಕೃತ ಉಪನ್ಯಾಸಕರಾಗಿ ಸಾಹಿತ್ಯ, ಯಕ್ಷಗಾನ, ತಾಳಮದ್ದಲೆ ಕ್ಷೇತ್ರದಲ್ಲಿ ಕೆಲಸಮಾಡಿದ್ದ ಎಂ.ಎ.ಹೆಗಡೆ ಸಿದ್ಧಾಪುರದ ಎಂ.ಜಿ.ಸಿ. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸಮಾಡಿದ್ದರು. ಅವರು ಸಂಗೀತ ಕ್ಷೇತ್ರದ ಹೆಸರಾಂತ ಕಲಾವಿದರಾದ ಬಕುಲ ಹೆಗಡೆ ಮತ್ತು ಶ್ರೀಪಾದ್ ಹೆಗಡೆ ಸೋಮನಮನೆ (ಮಗಳು-ಅಳಿಯ) ಸೇರಿದಂತೆ ಅಪಾರ ಬಂಧುಗಳು,ಅಭಿಮಾನಿಗಳನ್ನು ಅಗಲಿದ್ದಾರೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು. ನಿರಂತರ ಎರಡನೇ ಅವಧಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಕೆಲಸಮಾಡಿದ್ದ ಹೆಗಡೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಾಹಿತ್ಯ ಪರಿಷತ್ ಸದಸ್ಯರಾದ ಬಿ.ಎನ್.ವಾಸರೆ, ರತ್ನಾಕರ ನಾಯ್ಕ, ಗೋಪಾಲನಾಯ್ಕ ಭಾಶಿ, ರಂಗನಾಥ ಶೇಟ್, ಎಂ.ಕೆ.ನಾಯ್ಕ ಹೊಸಳ್ಳಿ ಮತ್ತು ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ ಅವರ ನಿಧನದ ಹಿನ್ನೆಲೆಯಲ್ಲಿ ಸಿದ್ಧಾಪುರದ ಸಮಾಜಮುಖಿ ಕಾರ್ಯಾಲಯದಲ್ಲಿ ಮೌನ ಆಚರಿಸಿ,ಶೃದ್ಧಾಂಜಲಿ ಅರ್ಪಿಸಿದರು.
ಎಂ.ಎ. ಹೆಗಡೆ ರಾಜ್ಯ ಯಕ್ಷಗಾನ ಅಕಾಡೆಮಿಯಲ್ಲಿ ನಿರಂತರ ಎರಡು ಬಾರಿ ಅಧ್ಯಕ್ಷರಾದ ಮೊದಲಿಗರು, ಅವರ ಅವಧಿಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅದ್ಭುತ ಕೆಲಸಗಳಾಗಿವೆ. ಯಕ್ಷಗಾನ ಪ್ರಸಂಗಗಳ ಡಿಜಟಲೀಕರಣದ ಮೂಲಕ ಯಕ್ಷಗಾನಸಾಹಿತ್ಯವನ್ನು ಸಂರಕ್ಷಿಸುವ ಮಹತ್ವದ ಕೆಲಸ ಮಾಡಿದ್ದರು. -ಎಂ.ಕೆ.ನಾಯ್ಕ ಹೊಸಳ್ಳಿ (ಪ್ರಾಂಶುಪಾಲರು ಪಿ.ಯು. ಕಾಲೇಜ್ ಬನವಾಸಿ)


