

ಇನ್ನೈದೇ ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಮೋದಿ ಮಾತಿಗೆ ಮಹತ್ವವಿದ್ದು, ಸುರಕ್ಷತಾ ಕ್ರಮಗಳು, ಮುನ್ನೆಚ್ಚರಿಕೆಯ ಬಗ್ಗೆ ಇಂದಿನ ಮೋದಿ ಮನ್ ಕಿ ಬಾತ್ ಕುತೂಹಲ ಕೆರಳಿಸಿದೆ. ಈ ಹಿಂದೆ ಕಳೆದ ವರ್ಷದಲ್ಲಿ ಕೆಲವು ಬಾರಿ ಭಾರಿ ನಿರೀಕ್ಷೆ, ಪ್ರಚಾರದೊಂದಿಗೆ ಮಾತಿಗಿಳಿದು ಹಲವು ಹಗುರಮಾತುಗಳಿಂದ ವಿಡಂಬನೆಗೆ ಗುರಿಯಾಗಿದ್ದರು. ಈ ವರ್ಷ ಒಂದೊಂದೇ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಲಾಕ್ ಡೌನ್ ಘೋಶಿಸುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮಾತಿನ ಘೋಷಣೆ ಭಯ- ಆತಂಕಗಳಿಗೂ ಕಾರಣವಾಗಿದ್ದು ಇನ್ನು ಕೆಲವೇ ನಿಮಿಷಗಳಲ್ಲಿ ಮೋದಿ ಮಾತಿನ ಮರ್ಮ ವನ್ನು ದೇಶ ಅರಿಯಲಿದೆ.
